ಕಾಂಗ್ರೆಸ್‌ ಕಾರ್ಡ್‌ ವಿತರಣೆ ವೇಳೆ ಗ್ರಾಮಸ್ಥರ ತರಾಟೆ

ಒಂದು ವರ್ಷದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Outrage of Villagers During Distribution of Congress Card in Belagavi grg

ಸಂಕೇಶ್ವರ(ಏ.04): ಕಾಂಗ್ರೆಸ್‌ ಪಕ್ಷದ ಯೋಜನೆಗಳ ಗ್ಯಾರಂಟಿ ಕಾರ್ಡ್‌ ನೀಡಲು ಬಂದಿದ್ದ ಕೈ ಕಾರ್ಯಕರ್ತರಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು, ಖಾಲಿ ಕೊಡಗಳನ್ನ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಸಮೀಪದ ಗೋಟುರ ಗ್ರಾಮದಲ್ಲಿ ನಡೆದಿದೆ.

ಯಮಕನಮರಡಿ ಮತಕ್ಷೇತ್ರದ ಗೋಟುರ ಗ್ರಾಮದಲ್ಲಿ ಶಾಸಕರ ಪರ ಗ್ಯಾರಂಟಿ ಕಾರ್ಡ್‌ ಅನ್ನು ಕಾಂಗ್ರೆಸ್‌ ಕಾರ್ಯಕರ್ತರು ವಿತರಿಸುವ ವೇಳೆ, ಕಳೆದ ಒಂದು ವರ್ಷದಿಂದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಸರಬರಾಜು ಸಮಸ್ಯೆ ನಿವಾರಿಸಿಲ್ಲ. ಮೊದಲು ನೀರಿನ ಸಮಸ್ಯೆ ನಿವಾರಿಸಿ ಆಮೇಲೆ ನಿಮ್ಮ ಗ್ಯಾರಂಟಿ ಕಾರ್ಡ್‌ ಕೊಡಿ ಎಂದು ಕಾಂಗ್ರೆಸ್‌ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ವಿಜಯ ಮಲ್ಯನಂತೆ ನಾನು ಓಡಿ ಹೋಗಲ್ಲ, ಕುತಂತ್ರದಿಂದ ನನ್ನನ್ನು ಜೈಲಿಗಟ್ಟಿದರು: ಜನಾರ್ದನ ರೆಡ್ಡಿ

ಒಂದು ವರ್ಷದಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸಿದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರು ಅಭಿವೃದ್ಧಿ ಕೋಟ್ಯಂತರ ರುಪಾಯಿ ವೆಚ್ಚದ ಕಾಮಗಾರಿಗಳನ್ನು ಪೂಜೆ ಮಾಡುತ್ತಾರೆ. ಆದರೆ, ಅವು ಸರಿಯಾಗಿ ಆಗುವುದರ ಬಗ್ಗೆಯೂ ನಿಗಾವಹಿಸಬೇಕು. ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಈ ವೇಳೆ ಗ್ರಾಮದ ಹಾಲುಮತ ಸಮಾಜದ ಯುವಕರು, ಮಹಿಳೆಯರು ಇದ್ದರು.

Latest Videos
Follow Us:
Download App:
  • android
  • ios