Mekedatu Project: ಒನ್ ಮ್ಯಾನ್ ಶೋ ಆಯ್ತಾ ಪಾದಯಾತ್ರೆ: ಡಿಕೆಶಿಗೆ ಸಾಥ್ ಕೊಡೋರೇ ಇಲ್ಲ..!
* ನಾಲ್ಕನೇ ದಿನಕ್ಕೆ ಕಾಲಿಟ್ಟ ಮೇಕೆದಾಟು ಪಾದಯಾತ್ರೆ
* ಇಂದು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಶಿವಾಜಿನಗರದವರೆಗೂ ಪಾದಯಾತ್ರೆ
* ಡಿಕೆಶಿ ಒನ್ ಮ್ಯಾನ್ ಶೋಗೆ ಹಿರಿಯ ನಾಯಕರ ಅಸಮಾಧಾನ
ಬೆಂಗಳೂರು(ಮಾ.02): ಮೇಕೆದಾಟು ಯೋಜನೆಗೆ(Mekedatu Project) ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆ ಇಂದು(ಬುಧವಾರ) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ಹಂತದ ಪಾದಯಾತ್ರೆ ನಾಲ್ಕನೆಯ ದಿನದಂದು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಶಿವಾಜಿನಗರದವರೆಗೂ ಪಾದಯಾತ್ರೆ ನಡೆಯಲಿದೆ.
ರೂಟ್ ಮ್ಯಾಪ್ ಹೀಗಿದೆ:
ಮಾರುತಿ ನಗರ, ಹೊಸೂರು ಮುಖ್ಯರಸ್ತೆ, ಫೋರಂ ಮಾಲ್, ಪಾಸ್ ಪೋರ್ಟ್ ಆಪೀಸ್ ಜಸ್ಮಾದೇವಿ ಭವನ, ಕೋಲ್ಸ್ ಪಾರ್ಕ್, ನಂದಿದುರ್ಗ ರಸ್ತೆ, ಜೆಸಿ ನಗರ ಪೊಲೀಸ್ ಠಾಣೆ, ಮೇಕ್ರಿ ಸರ್ಕಲ್, ಅರಮನೆಯ ಆವರಣ ಮೂಲಕ ತೆರಳಲಿದೆ ಅಂತ ತಿಳಿದು ಬಂದಿದೆ.
Mekedatu Padayatra: ಕಾರಜೋಳಗೆ ಹೋರಾಟ ಮಾಡಿ ಗೊತ್ತಿಲ್ಲ: ಡಿಕೆಶಿ
ಒನ್ ಮ್ಯಾನ್ ಶೋ ಆಯಿತು ಮೇಕೆದಾಟು ಪಾದಯಾತ್ರೆ
ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಒನ್ ಮ್ಯಾನ್ ಶೋಗೆ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಪಾದಯಾತ್ರೆಯಲ್ಲಿ ಹಿರಿಯ ನಾಯಕರು ಸಕ್ರಿಯವಾಗಿ ಭಾಗವಹಿಸುತ್ತಿಲ್ಲ. ಆರ್.ವಿ. ದೇಶಪಾಂಡೆ, ಎಸ್.ಆರ್.ಪಾಟೀಲ್, ಎಚ್.ಕೆ. ಪಾಟೀಲ್ ಸೇರಿದಂತೆ ಹಲವಾರು ನಾಯಕರು ಪಾದಯಾತ್ರೆ ಪಾಲಿಟಿಕ್ಸ್(Padayatra Politics) ಇಂದ ಅಂತರ ಕಾಯ್ದುಕೊಂಡಿದ್ದಾರೆ.
ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್(Dr G Parameshwara) ಅವರು ಪಾದಯಾತ್ರೆಯಲ್ಲಿ ಕೇವಲ ಒಂದು ದಿನ ಮಾತ್ರ ಆಗಮಿಸಿದ್ದರು. ಇನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರು ಪ್ರತಿದಿನ ಪಾದಯಾತ್ರೆ ಪಾಲ್ಗೊಂಡ್ರು ಕೊನೆಯವರೆಗೂ ಇರೋದಿಲ್ಲ. ಹಿರಿಯ ನಾಯಕರು ನಿಗದಿತ ಸ್ಥಳ ತಲುಪಿದ್ರೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತ್ರ ಎರಡು ಮೂರು ಗಂಟೆ ತಡವಾಗಿ ಆಗಮಿಸುತ್ತಿದ್ದಾರೆ.
ನಿನ್ನೆ(ಮಂಗಳವಾರ) ಮಧ್ಯಾಹ್ನದ ಬಳಿಕ ನಡೆದ ನಾಲ್ಕು ಕಿಮೀ ಪಾದಯಾತ್ರೆಯನ್ನ ಡಿಕೆಶಿ ಆರು ಗಂಟೆ ನಡೆದಿದ್ದಾರೆ. ವಾಸ್ತವ್ಯದ ಸ್ಥಳ ಮುಟ್ಟುವ ಅಷ್ಟೊತ್ತಿಗೆ ಜಯನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಬಿಟ್ರೆ ಯಾವ ನಾಯಕರೂ ಸಾಥ್ ನೀಡಿಲ್ಲ. ಹೀಗಾಗಿ ಮೇಕೆದಾಟು ಪಾದಯಾತ್ರೆ ಡಿಕೆಶಿಗೆ ಒನ್ ಮ್ಯಾನ್ ಶೋ ಆಗಿ ಮಾರ್ಪಟ್ಟಿದೆ.
Mekedatu Padaytare: ಕಾಂಗ್ರೆಸ್ ನವರು ಬಿರಿಯಾನಿ ಪಾದಯಾತ್ರೆ ಮಾಡ್ತಿದ್ದಾರೆ: ಡಿಕೆಶಿ
ಕಾಂಗ್ರೆಸ್ ಬ್ಯಾನರ್ ಮುಟ್ಟಿದರೆ ಬಿಜೆಪಿ ಬ್ಯಾನರ್ ಕೀಳ್ತೇವೆ: ಡಿಕೆಶಿ ಖಡಕ್ ಎಚ್ಚರಿಕೆ
ಮೇಕೆದಾಟು ಪಾದಯಾತ್ರೆಯ(Mekedatu Padayatra) ಬ್ಯಾನರ್‌ಗಳನ್ನು ತೆಗೆಸಿದರೆ ಯಡಿಯೂರಪ್ಪ ಆದಿಯಾಗಿ ಬಿಜೆಪಿಯ ಎಲ್ಲ ನಾಯಕರ ಬ್ಯಾನರ್‌ಗಳನ್ನೂ ಕಿತ್ತೊಗೆಯುತ್ತೇವೆ. ನಮಗೆ ಅನಗತ್ಯವಾಗಿ ತೊಂದರೆ ನೀಡುತ್ತಿರುವ ಪೊಲೀಸ್ ಅಧಿಕಾರಿಗಳ ಪಟ್ಟಿನಮ್ಮ ಬಳಿ ಇದೆ. ಸಮಯ ಬಂದಾಗ ಅವರಿಗೆ ಉತ್ತರ ಸಿಗುತ್ತದೆ. ಈ ಕೇಸು, ಜೈಲಿಗೆಲ್ಲಾ ನಾವು ಹೆದರಲ್ಲ. ನಮ್ಮ ಕಾರ್ಯಕರ್ತರಿಗೆ ನೀಡುತ್ತಿರುವ ತೊಂದರೆಗಳ ವಿಚಾರವಾಗಿಯೇ ಹೋರಾಟ ಶುರು ಮಾಡಬೇಕಾಗುತ್ತದೆ..ಎಚ್ಚರ..! ಇದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಡಳಿತ ಪಕ್ಷ ಬಿಜೆಪಿ(BJP), ರಾಜ್ಯ ಸರ್ಕಾರ, ಪೊಲೀಸ್(Police) ಹಾಗೂ ಬಿಬಿಎಂಪಿ(BBMP) ಅಧಿಕಾರಿಗಳಿಗೆ ನೀಡಿರುವ ಎಚ್ಚರಿಕೆ.
ಮಂಗಳವಾರ ಮೂರನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಕೆಂಗೇರಿ ಬಳಿಯ ಪೂರ್ಣಿಮಾ ಕನ್ವೆನ್ಷನ್ ಸೆಂಟರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೆಂಗಳೂರು(Bengaluru) ಜನರು ಹಾಗೂ ಕಾವೇರಿ ಜಲಾನಯನ ಪ್ರದೇಶದ ಜನರ ಬದುಕಿನ ರಕ್ಷಣೆಗಾಗಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಈ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪೊಲೀಸ್ ಅಧಿಕಾರಿಗಳು, ಪಾಲಿಕೆ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ನಮ್ಮ ಬ್ಯಾನರ್ ಕಿತ್ತು ಹಾಕಿದ್ದಾರೆ. ನಮ್ಮ ಕೆಲ ನಾಯಕರು ಅದನ್ನು ತಡೆದಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪನವರ ಹುಟ್ಟುಹಬ್ಬ, ಅಶ್ವತ್ಥ್ ನಾರಾಯಣ, ಸೋಮಣ್ಣನವರ ಹುಟ್ಟುಹಬ್ಬ, ಬೊಮ್ಮನಹಳ್ಳಿಯಲ್ಲಿ ಮುಖ್ಯಮಂತ್ರಿ ಅವರ ಕಾರ್ಯಕ್ರಮ ಆಯೋಜಿಸಿ ಬ್ಯಾನರ್(Banner) ಹಾಕಿದ್ದಾರೆ. ಅವುಗಳನ್ನು ಏಕೆ ತೆರವು ಮಾಡಿಲ್ಲ? ನಮ್ಮ ಬ್ಯಾನರ್‌ಗಳನ್ನು ತೆಗೆಸುವ ಕೆಲಸ ಮಾಡಿದರೆ, ನಾವೂ ನಮ್ಮ ಕಾರ್ಯಕರ್ತರಿಗೆ ಹೇಳಿ ಯಡಿಯೂರಪ್ಪ ಅವರಿಂದ ಹಿಡಿದು ಬಿಜೆಪಿಯ ಎಲ್ಲಾ ನಾಯಕರ ಬ್ಯಾನರ್‌ಗಳನ್ನೂ ಕಿತ್ತು ಹಾಕಬೇಕಾಗುತ್ತದೆ ಎಂದು ಹರಿಹಾಯ್ದರು.