ಬೆಂಗಳೂರು, (ಸೆ.13): ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ೧ ವರ್ಷದ ಬಳಿಕ ಹೊಸ ಕಾರಿನ ಭಾಗ್ಯ ಸಿಕ್ಕಿದೆ. 

ಹೌದು... ಸ್ಪೀಕರ್ ಸೂಚನೆ ಮೇರೆಗೆ ವಿಧಾನಸಭಾ ಸಚಿವಾಲಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹೊಸ ಕಾರು ಕೊಟ್ಟಿದ್ದು, ಟೊಯೋಟಾ ಕಂಪನಿಯ KA 01, GA 7002 ನಂಬರಿನ ಫಾರ್ಚ್ಯೂನರ್ ಕಾರನ್ನು ನೀಡಲಾಗಿದೆ.

ಮನೆಗೆ ಕರೆಸಿಕೊಂಡು ಜಮೀರ್‌ಗೆ ಸಿದ್ದರಾಮಯ್ಯ ಫುಲ್ ಕ್ಲಾಸ್...!

ವಿಪಕ್ಷ ನಾಯಕ ಆದ ಬಳಿ ಸರ್ಕಾರ ಅವರಿಗೆ ಹೊಸ ಕಾರು ನೀಡಬೇಕು. ಕಳೆದ ವರ್ಷ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ವಿಧಾನಸಭಾ ವಿಪಕ್ಷ ನಾಯಕರಾಗಿ ಆಯ್ಕೆ ಮಾಡಲಾಗಿತ್ತು. ಸಿದ್ದರಾಮಯ್ಯ ಕೂಡ ತಾವು ವಿಪಕ್ಷ ನಾಯಕ ಆದ ತಕ್ಷಣ ಕಾರು ಕೊಡುವಂತೆ ಮನವಿ ಮಾಡಿಕೊಂಡಿದ್ದರು.

ವಿಪಕ್ಷ ನಾಯಕರಾದ ವೇಳೆಯೇ ಕಾರು ಕೊಡುವಂತೆ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದರು. ಆದ್ರೆ, ಒಂದು ವರ್ಷ ಆದರೂ ಅವರಿಗೆ ಸರ್ಕಾರ ಕಾರು ನೀಡಿರಲಿಲ್ಲ. ಇದೀಗ ಸಿದ್ದರಾಮಯ್ಯ ಅವರ ಮನವಿ ಸ್ಪಂದಿಸಿದ ಸ್ಪೀಕರ್, ಕಾರು ನೀಡಲು ಸೂಚನೆ ನೀಡಿದ್ದರು. ಅದರಂತೆಯೇ ಇದೀಗ ಸಿದ್ದು ಮನೆ ಹೊಸ ಸರ್ಕಾರಿ ಕಾರು ಬಂದು ನಿಂತಿದೆ.