ಯಾರಿಗೆ ಬಂದಿದೆ ಅಚ್ಛೇದಿನ್?: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.
ರಾಯಚೂರು (ಏ.28) : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದರು.
ರಾಯಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಸಮೀದ ಸಾಥ್ ಮೈಲ್ ಕ್ರಾಸ್ ಹಾಗೂ ರಾಯಚೂರು ನಗರದ ವಾಲ್ಕಾಟ್ ಮೈದಾನದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್ ಹಾಗೂ ನಗರ ಕ್ಷೇತ್ರದ ಅಭ್ಯರ್ಥಿ ಮಹಮ್ಮದ್ ಶಾಲಂ ಪರವಾದ ಬೃಹತ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು.
ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್, ಪ್ರಿಯಾಂಕಾ ಕಿಡಿ
ರಾಜ್ಯದಲ್ಲಿ ಇಷ್ಟುದಿನ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳಗಿದೆ. ನರೇಂದ್ರ ಮೋದಿಯವರು ಎಷ್ಟುಸುಳ್ಳು ಹೇಳುತ್ತಾರೆ. ನಾ ಖಾವುಂಗಾ ಕಾನೆದೊಂಗ ಅಂತ ಹೇಳುತ್ತಾರೆ. ಯಾರಿಗೆ ಬಂದಿದೆ ಅಚ್ಛೆದಿನ್ ಎಂದು ಟೀಕಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಆಡಳಿತ ನಡೆಸಿದ ಬಿಜೆಪಿ ಶೇ.40ರಷ್ಟುಕಮಿಷನ್ ಪಡೆಯುವ ಸರ್ಕಾರವಾಗಿದೆ. ಯಾವುದೇ ಇಲಾಖೆಗೆ ಹೋದರೂ ಲಂಚ. ಅಧಿಕಾರಿಗಳು ಹುದ್ದೆ ಪಡೆಯಲು ಲಂಚ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಜಿಎಸ್‌ಟಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಇಂತಹ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
ನಮ್ಮ ಪ್ರಣಾಳಿಕೆಯಲ್ಲಿರುವ ಎಲ್ಲ ಭರವಸೆಗಳನ್ನು ಜಾರಿಗೊಳಿಸುತ್ತಿದ್ದೇನೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಹಾಳಾಗಿವೆ. ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಲಾಯಿತು. ಕೊನೆಗೆ ಕುಮಾರಸ್ವಾಮಿ ಕಾರ್ಯಕರ್ತರ ವಿಶ್ವಾಸ ತೆಗೆದುಕೊಳ್ಳದ ಹಿನ್ನೆಲೆ ಸರ್ಕಾರ ಬಿದ್ದು ಹೋಯಿತು. ಆದರೆ, ಅವರು ನನ್ನ ಮೇಲೆ ಆರೋಪ ಮಾಡಿದ್ದರು. ಬಿಜೆಪಿ ಸರ್ಕಾರ ರಚನೆಗೆ ಹೋದ ಶಾಸಕರಲ್ಲಿ ಮೂವರು ಜೆಡಿಎಸ್ ಶಾಸಕರಿದ್ದರು. ಅವರನ್ನು ನಾನು ಕಳುಹಿಸಿದ್ದಾ ಎಂದು ವ್ಯಂಗ್ಯವಾಡಿದರು.
ಸಿದ್ದರಾಮನಹುಂಡಿಯಲ್ಲಿ ಬಿಜೆಪಿಯಿಂದ ಜಗಳಕ್ಕೆ ರಾಜಕೀಯ ಬಣ್ಣ ಹಚ್ಚಲಾಗಿದೆ: ಯತೀಂದ್ರ ತಿರುಗೇಟು
ರಾಯಚೂರು ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ದದ್ದಲ್, ಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ, ಮಾಜಿ ಸಚಿವೆ ಉಮಾಶ್ರೀ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಪಾರಸಮಲ್ ಸುಖಾಣಿ, ವಿಧಾನ ಪರಿಷತ್ ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷÜತ್ ಉಪಸಭಾಪತಿ ಡೇವಿಡ್ ಸಿಮಿಯಾನ್, ಸದಸ್ಯ ಪ್ರಕಾಶ ರಾಥೋಡ್, ರವಿ ಬೋಸರಾಜು, ಕೆ.ಶಾಂತಪ್ಪ, ಬಷೀರುದ್ದೀನ್, ಕೆ.ಶರಣಪ್ಪ,ಜಯಣ್ಣ, ರುದ್ರಪ್ಪ ಅಂಗಡಿ ಸೇರಿದಂತೆ ಪಕ್ಷದ ವಿವಿಧ ಬ್ಲಾಕ್‌ಗಳ ಪ್ರಮುಖರು, ಬೆಂಬಲಿಗರು, ಕಾರ್ಯಕರ್ತರು, ಗ್ರಾಮೀಣ ಭಾಗದ ಮತದಾರರು ಭಾಗವಹಿಸಿದ್ದರು.