ಕೋಲಾರ, (ಜ.24): ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಿಡ್ನಾಪ್ ಪ್ರಕರಣದ ಮತ್ತೊಬ್ಬ ಆರೋಪಿಯಾಗಿರುವ ರೋಹಿತ್​ನನ್ನ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರು ಇಂದು (ಭಾನುವಾರ) ರೋಹಿತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ A1 ಆರೋಪಿಯಾಗಿದ್ದ ಕವಿರಾಜ್ ಬಂಧನದ ವೇಳೆ ರೋಹಿತ್​ ಹೊಸೂರಿನಿಂದ ತಪ್ಪಿಸಿಕೊಂಡಿದ್ದ.

ವರ್ತೂರು ಪ್ರಕಾಶ್ ಕಿಡ್ನಾಪ್ ಕೇಸ್: ಮತ್ತೆ ನಾಲ್ವರ ಅರೆಸ್ಟ್...! 

ನ.26ರಂದು ಮಾಜಿ ಸಚಿವ ವರ್ತೂರ್​ ಪ್ರಕಾಶ್​ ಅಪಹರಣವಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ 6 ಆರೋಪಿಗಳನ್ನು ಬಂಧಿಸಿದ್ದಾರೆ.