ಬಳ್ಳಾರಿ (ಜ.24):   ನಾಲ್ಕ ಜನ ಶಾಸಕರು ಅಥವಾ ಸಚಿವರು ಒಂದು ಕಡೆ ಸೇರಿದ್ರೇ ತಪ್ಪಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಕ್ರೋಶಭರಿತರಾಗಿ ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ರಾಜ್ಯಮಟ್ಟದ ಮಹಿಳಾ  ಕಾರ್ಯಕಾರಿಣಿ ಕಾರ್ಯಕ್ರಮದ ಹಿನ್ನಲೆ ಹೊಸಪೇಟೆಗೆ ಆಗಮಿಸಿರುವ ನಳಿನ್ ಕುಮಾರ್ ಕಟೀಲ್  ರಾಜ್ಯ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. 

 ನಾನು ನಿನ್ನೆ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದೆ.  ಇವತ್ತು ಐಬಿಯಲ್ಲಿ ಇದ್ದೇನೆ. ಇದು ಇದು ತಪ್ಪಾ.. ?  ಇವತ್ತು ಕೂಡ ಹೊಸಪೇಟೆಯಲ್ಲಿ ಆನಂದ ಸಿಂಗ್ ಸೇರಿದಂತೆ ನಾಲ್ಕು ಶಾಸಕರ ಜೊತೆಗೆ ಮಾತನಾಡಿದ್ದೇನೆ ಇದು ಅಸಮಾಧಾನವೇ..?  ನಮ್ಮಲ್ಲಿ ಅಸಮಾಧಾನ ಎನ್ನುವ ಮಾತೆ ಇಲ್ಲ.. ಎತ್ತಿ‌ನ ಹೊಳೆ ವಿಚಾರವಾಗಿ ಮಾತನಾಡಲು ಒಂದು ಕಡೆ ಸೇರಿದ್ದರು ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಕಾಂಗ್ರೆಸ್‌ ಮುಕ್ತ ಕರ್ನಾಟಕಕ್ಕೆ ಕಟೀಲ್‌ ಪಣ ...  

ಆಡಿದ ಮಾತಿಗೆ ಬಣ್ಣ ಕಟ್ಟುವ ಕೆಲಸವಾಗುತ್ತಿದೆ.  ನಾವು ಮಾತನಾಡುವುದೇ ಬೇಡವೆ.  ಬಿಜೆಪಿಯಲ್ಲಿ ಅಸಮಾಧಾನ ಎನ್ನುವ ಮಾತೆ ಇಲ್ಲ. 
ಯತ್ನಾಳ ವಿಚಾರದಲ್ಲಿ ಕರೆದು ಮಾತನಾಡಬೇಕು, ನೋಟಿಸ್ ಕೊಡಬೇಕು ಇದೆಲ್ಲವೂ ಆಗಿದೆ. ಯತ್ನಾಳ ಅವರ ವಿಚಾರವಾಗಿ ಕೇಂದ್ರದ ಶಿಸ್ತು ಸಮಿತಿಗೆ ವರದಿ ಕಳುಹಿಸಿದ್ದೇವೆ. ಈ ಬಗ್ಗೆ ಅಲ್ಲಿಯೇ ತೀರ್ಮಾನವಾಗುತ್ತದೆ ಎಂದು ಕಟೀಲ್ ಹೇಳಿದರು.  

ಬಿಜೆಪಿ ಪಂಚಾಯತಿ ಸದಸ್ಯ ರನ್ನು  ಹೈಜಾಕ್ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.  ಕಾಂಗ್ರೆಸ್ ವ್ಯಾಪಾರಿಕರಣ ಪ್ರಾರಂಭ ಮಾಡಿದೆ. ಅಕ್ರಮವಾಗಿ ಆಸೆ ಅಮೀಷ ತೊರಿಸುವ ಕೆಲಸ ಮಾಡುವುದು ಕಾಂಗ್ರೆಸ್ ಕೆಲಸವಾಗಿದೆ ಎಂದು ಕಟೀಲ್ ಅಸಮಾಧಾನ ಹೊರಹಾಕಿದರು. ಅಲ್ಲದೇ  ಅತಿಹೆಚ್ಚು ಪಂಚಾಯತಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆಎಂದು ವಿಶ್ವಾಸ ವ್ಯಕ್ತಪಡಿಸಿದರು.