Asianet Suvarna News Asianet Suvarna News

Mekedatu Politics: ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿದರೆ ನಿಯಮ ಅಡ್ಡಿಯಾಗುತ್ತಾ?: ಸುಧಾಕರ್‌

ವಿಶ್ವದಲ್ಲೇ ಯಾವ ವಿರೋಧ ಪಕ್ಷ ಕೂಡ ಕೊರೋನಾ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ ಎಂದು  ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ. 

No opposition party in the world is opposing Governments take on Covid 19 Dr K Sudhakar mnj
Author
Bengaluru, First Published Jan 9, 2022, 5:15 AM IST
  • Facebook
  • Twitter
  • Whatsapp

ಬೆಂಗಳೂರು (ಜ. 9): ವಿಶ್ವದಲ್ಲೇ ಯಾವ ವಿರೋಧ ಪಕ್ಷ (Opposition Party) ಕೂಡ ಕೊರೋನಾ ವಿಚಾರದಲ್ಲಿ ಸರ್ಕಾರದ ಕ್ರಮಗಳಿಗೆ ವಿರೋಧ ಮಾಡುತ್ತಿಲ್ಲ. ಆದರೆ, ರಾಜ್ಯ ಕಾಂಗ್ರೆಸ್‌ (Congress) ಪಕ್ಷ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ಮಾಡುತ್ತಿರುವುದು ದುರಾದೃಷ್ಟಕರ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ಹೇಳಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಕುದುರೆ ರೇಸ್‌ ಆದರೂ ಮಾಡಲಿ, ಮ್ಯಾರಥಾನ್‌ ಆದರೂ ಮಾಡಲಿ. ರೈಲು, ಬಸ್‌ನಲ್ಲಿ ಹೋಗಲಿ ಅಥವಾ ಟ್ರಕ್ಕಿಂಗ್‌ ಮಾಡಲಿ. ಇವೆಲ್ಲವೂ ಅವರ ಆರೋಗ್ಯಕ್ಕೆ ಒಳ್ಳೆಯದು. ಆದರೆ, ಸಮಯ ನೋಡಿ ಮಾಡಲಿ ಎಂದು ವ್ಯಂಗವಾಡಿದರು.

ನನ್ನ ಮನೆಯಲ್ಲಿ ನಾನು ಸ್ವಿಮ್ಮಿಂಗ್‌ ಮಾಡಿಕೊಂಡರೆ ಮಾರ್ಗಸೂಚಿ ಅಡ್ಡಿ ಆಗುತ್ತಾ? ಡಿಕೆಶಿ ಅವರ ಅಜ್ಞಾನಕ್ಕೆ ಮರುಕ ವ್ಯಕ್ತಪಡಿಸುತ್ತೇನೆ ಎಂದರು. ಮೊದಲ ಹಾಗೂ ಎರಡನೇ ಅಲೆಯ ಸಂರ್ಭದಲ್ಲಿ ನಾನು ಈ ತನಕ 50ರಿಂದ 60 ಬಾರಿ ಕೊರೋನಾ ಮಾಡಿಸಿದ್ದೀನಿ. ರಾಜ್ಯದ ಜನರ ಆಶೀರ್ವಾದದಿಂದ ಸೋಂಕಿನಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿಸಿದರು.

ಮೇಕೆದಾಟು ಪಾದಯಾತ್ರೆಗೆ ವಿರೋಧ ಮಾಡುತ್ತಿಲ್ಲ

ನಾವು ಮೇಕೆದಾಟು ಪಾದಯಾತ್ರೆಗೆ (Mekedatu Padayatre) ವಿರೋಧ ಮಾಡುತ್ತಿಲ್ಲ. ಸೋಂಕು ಇಳಿಕೆಯಾಗುವವರೆಗೂ ಮುಂದೂಡುವಂತೆ ತಿಳಿಸಿದ್ದೇವೆ. ವಿಶ್ವದೆಲ್ಲೆಡೆ ಕೊರೋನಾ ವಿಚಾರವಾಗಿ ಆಡಳಿತ ಪಕ್ಷಗಳಿಗೆ ವಿರೋಧ ಪಕ್ಷಗಳು ಸಹಕಾರ ನೀಡುತ್ತಿವೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರು ಸರ್ಕಾರದ ಕಾನೂನು ನಿಯಮ ಪಾಲನೆ ಮಾಡದೇ ಇರೋದು ದುರಾದೃಷ್ಟ. ಸರ್ಕಾರದ ಕಾನೂನು ಪಾಲನೆ ಮಾಡದ ಪಕ್ಷಕ್ಕೆ ವಿರೋಧ ಪಕ್ಷ ಅಂತಾ ಕರೆಯುವುದಕ್ಕೆ ಆಗುತ್ತದೆಯೇ? ಮುಂದೊಂದು ದಿನ ಇವರೇ ಆಡಳಿತ ಮಾಡಿದಾಗ, ವಿಪಕ್ಷಗಳು ಛೀಮಾರಿ ಹಾಕಿದಾಗ ಹೇಗೆ ಅನಿಸುತ್ತದೆ? ಇದರ ಕನಿಷ್ಠ ತಿಳುವಳಿಕೆ ಅವರಿಗೆ ಇರಬೇಕಿತ್ತು ಎಂದು ಛೇಡಿಸಿದರು.

ಇದನ್ನೂ ಓದಿ: Mekedatu Politics: ಪಾದಯಾತ್ರೆ ತಡೆಯಲೆಂದೇ ನಿಷೇಧಾಜ್ಞೆ ಜಾರಿ: ಸಿದ್ದು ಕಿಡಿ

ಡಿಕೆಶಿಗೆ ಮಾಹಿತಿ ಕೊರತೆ:

ಕೊರೋನಾ ಪಾಸಿಟಿವಿಟಿ ದರದಲ್ಲಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕೊರೋನಾ ಬಗ್ಗೆ ಅವರಿಗೆ ಮಾಹಿತಿಯ ಕೊರತೆ ಇದೆ. ಅವರ ಆರೋಪಕ್ಕೆ ನಾನು ಏನೂ ಮಾತಾಡುವುದಿಲ್ಲ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ. ಮೊಸರಿನಲ್ಲಿ ಕಲ್ಲು ಹುಡುಕುವ ಮನಸ್ಥಿತಿ ಬಿಡಬೇಕು.

ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದೆ:

ಸಚಿವ ಆರ್‌.ಅಶೋಕ್‌ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರ ಪ್ರಾಥಮಿಕ ಸಂಪರ್ಕಿತರಲ್ಲಿ ನೀವು ಒಬ್ಬರು ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅಶೋಕ್‌ ಅವರ ಆರೋಗ್ಯ ಉತ್ತಮವಾಗಿದೆ. ಕೋವಿಡ್‌ ಕರ್ಫ್ಯೂ ಮಾರ್ಗಸೂಚಿ ಪ್ರಕಟಿಸಿದ ದಿನ ಅಶೋಕ್‌ ಅವರನ್ನು ಭೇಟಿಯಾಗಿದ್ದು, ನಾನು ಮಾಸ್ಕ್‌ ಹಾಕಿದ್ದೆ, ಅವರು ಕೂಡಾ ಮಾಸ್ಕ್‌ ಹಾಕಿದ್ದರು. ಇನ್ನು ಎರಡು ದಿನಗಳ ಹಿಂದೆ ಮುಖ್ಯಮಂತ್ರಿಗಳು ನಾನು ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಂಡಿದ್ದು, ವರದಿ ನೆಗೆಟಿವ್‌ ಬಂದಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Covid 19 Threat: ರ‍್ಯಾಲಿಗಳಿಗೆ ಅವಕಾಶವಿಲ್ಲ, ನಿರ್ಧಾರದ ಹಿಂದೆ ರಾಜಕೀಯ ಉದ್ದೇಶವಿಲ್ಲ: ಸುಧಾಕರ್‌!

ಐದಾರು ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹೆಚ್ಚಳ

ಹೊಸ ರೂಪಾಂತರಿ ಒಮಿಕ್ರಾನ್‌ ವೇಗವಾಗಿ (Omicron Variant) ಹರಡುತ್ತಿದೆ. ಇದನ್ನು ನಿಯಂತ್ರಿಸಲು ವಾರಾಂತ್ಯದ ಕಫä್ರ್ಯ ವಿಧಿಸಲಾಗಿದೆ. ಇದು ಸಂಪೂರ್ಣ ಲಾಕ್‌ಡೌನ್‌ ಅಲ್ಲ. ಜನರಲ್ಲಿ ಶಿಸ್ತು ಬರಲು ಕಫä್ರ್ಯ ಜಾರಿ ಮಾಡಲಾಗಿದೆ. ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದರೆ ಸೋಂಕು ನಿಯಂತ್ರಣ ಸಾಧ್ಯತೆ ಇದೆ. ಶುಕ್ರವಾರ ಬೆಂಗಳೂರಿನಲ್ಲಿ ಶೇ.7.8ರಷ್ಟುಪಾಸಿಟಿವಿಟಿ ಆಗಿದೆ. ಐದಾರು ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಹೆಚ್ಚಳವಾಗಿದೆ. ಮೊದಲನೇ, ಎರಡನೇ ಅಲೆಗಳಲ್ಲಿ ಸೋಂಕು ಮಿತಿ ಮೀರಿ ಬಹಳ ಅನುಭವಿಸಿದ್ದು, ಎಲ್ಲ ಸಂದರ್ಭಗಳನ್ನು ಅವಲೋಕಿಸಿಯೇ ಅಗತ್ಯ ಕ್ರಮಕೈಗೊಂಡಿದ್ದೇವೆ ಎಂದು ಆರೋಗ್ಯ ಸಚಿವರು ತಿಳಿಸಿದರು.

Follow Us:
Download App:
  • android
  • ios