Asianet Suvarna News Asianet Suvarna News

ನಿಗಮ-ಮಂಡಳಿ ಪಟ್ಟಿ ಬಗ್ಗೆ ಯಾರಿಗೂ ಅತೃಪ್ತಿ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾ‌ರ್

ಕ್ರೀಡಾ ಪ್ರಾಧಿಕಾರಕ್ಕೆ ಸಚಿವರೇ ಅಧ್ಯಕ್ಷರಾಗಿರುತ್ತಾರೆ ಎಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಬೈಲಾ ಮಾಡಲಾಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಈ ಹುದ್ದೆ ನೀಡಿರುವುದರಿಂದ ಅವರಿಗೆ ಅದನ್ನು ಪಡೆಯಲು ಸಾಧ್ಯವಾಗಲ್ಲ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಹೀಗಾಗಿ ಬೈಲಾಗೆ ತಿದ್ದುಪಡಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ 

No One is Unhappy with the Corporation Board List Says DCM DK Shivakumar grg
Author
First Published Jan 28, 2024, 10:33 AM IST

ಬೆಂಗಳೂರು(ಜ.28):  ನಿಗಮ-ಮಂಡಳಿ ನೇಮಕದ ಪಟ್ಟಿ ಬಗ್ಗೆ ಯಾರಿಗೂ ಅಸಮಾಧಾನ ಇಲ್ಲ. ಎಲ್ಲರ ಬಳಿಯೂ ಚರ್ಚಿಸಿಯೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದ ಸೇವೆ ಮಾಡಬೇಕು ಎಂದುಕೊಂಡವರು ಏನು ಕೊಟ್ಟರೂ ಸೇವೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್ ತಿಳಿಸಿದ್ದಾರೆ. ಇನ್ನು ಕ್ರೀಡಾ ಪ್ರಾಧಿಕಾರಕ್ಕೆ ಸಚಿವರೇ ಅಧ್ಯಕ್ಷರಾಗಿರುತ್ತಾರೆ ಎಂಬ ಬೈಲಾ ತಿದ್ದುಪಡಿಮಾಡಿ ವಿಜಯಾನಂದ ಕಾಶಪ್ಪನ ವರ್ ಅವರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದೂ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ರೀಡಾ ಪ್ರಾಧಿಕಾರಕ್ಕೆ ಸಚಿವರೇ ಅಧ್ಯಕ್ಷರಾಗಿರುತ್ತಾರೆ ಎಂದು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಬೈಲಾ ಮಾಡಲಾಗಿದೆ. ಶಾಸಕ ವಿಜಯಾನಂದ ಕಾಶಪ್ಪನವರ್ ಅವರಿಗೆ ಈ ಹುದ್ದೆ ನೀಡಿರುವುದರಿಂದ ಅವರಿಗೆ ಅದನ್ನು ಪಡೆಯಲು ಸಾಧ್ಯವಾಗಲ್ಲ ಎಂಬುದು ನಮ್ಮ ಗಮನಕ್ಕೂ ಬಂದಿದೆ. ಹೀಗಾಗಿ ಬೈಲಾಗೆ ತಿದ್ದುಪಡಿ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ನನಗೆ ನಿಗಮ ಮಂಡಳಿ ಜವಾಬ್ದಾರಿ ಬೇಡ: ಶಾಸಕ ಸುಬ್ಬಾರೆಡ್ಡಿ ಅಸಮಾಧಾನ

ಇನ್ನು ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರಿಗೆ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಲಾಗಿತ್ತು. ಆದರೆ ಅಧ್ಯಕ್ಷರ ನೇಮಕದ ವಿಚಾರ ನ್ಯಾಯಾಲ ಯದಲ್ಲಿರುವುದರಿಂದ ನರೇಂದ್ರ ಸ್ವಾಮಿ ಅವರ ನೇಮಕಕ್ಕೆ ಪ್ರಕರಣ ಅಡ್ಡಿಯಾಗಿದೆ. ಒಟ್ಟಾರೆ ಅವರಿಗೆ ಅವಕಾಶ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಯಾರಿಗೂ ಅಸಮಾಧಾನ ಇಲ್ಲ: 

ನಿಗಮ-ಮಂಡಳಿ ನೇಮಕದ ಬಗ್ಗೆ ಅಸ ಮಾಧಾನ ವಿಚಾರ ಮಾಧ್ಯಮಗಳು ಹೇಳು ತ್ತಿರುವುದೇ ಹೊರತು ವಾಸ್ತವವಾಗಿ ಅಂತಹದ್ದೇನೂ ಇಲ್ಲ. ಎಲ್ಲರ ಅಭಿಪ್ರಾ ಯವನ್ನು ಸಂಗ್ರಹಿಸಿ, ಸುದೀರ್ಘ ಚರ್ಚೆ ಬಳಿಕವೇನಿಗಮ-ಮಂಡಳಿಗಳಿಗೆ ನೇಮಕ ಮಾಡಲಾಗಿದೆ. ಈ ಬಗ್ಗೆ ಸಚಿವರೂ ಸೇರಿ ದಂತೆ ಯಾರಿಗೂ ಅಸಮಾಧಾನ ಇಲ್ಲ ಎಂದರು.

ಈ ನೇಮಕದ ಬಗ್ಗೆ ಸಿದ್ದರಾಮಯ್ಯ ಅವರು, ನಾನು ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕುಳಿತು ಚರ್ಚೆ ಮಾಡಿದ್ದೇವೆ. ಎಲ್ಲರ ಅಭಿಪ್ರಾಯವನ್ನು ಪಡೆದಿದ್ದೇವೆ. ಕೆಲವರು ಇಂತಹವರಿಗೆ ಸ್ಥಾನನೀಡಬೇಕು ಎಂಬ ಪಟ್ಟಿ ಕೊಟ್ಟಿದ್ದರು. ಆ ಪತ್ರವನ್ನು ನಿಮ್ಮ ಮುಂದೆ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್ನು ಮಂತ್ರಿ ಆಗಬೇಕು, ದೊಡ್ಡ ನಿಗಮ-ಮಂಡಳಿಗಳು ಸಿಗಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. 2 ವರ್ಷಗಳ ನಂತರ ಮತ್ತೆ ಬದಲಾವಣೆ ಆಗುತ್ತದೆ. ಅವಧಿ ಮುಗಿದ ನಂತರ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಸೂಚನೆ ನೀಡಿದ್ದೇವೆ. ಪಕ್ಷ ಯಾವುದೇ ಹುದ್ದೆ ಕೊಟ್ಟರೂ ಸೇವೆ ಮಾಡಬೇಕು ಎಂದರು.

ಬಿಜೆಪಿ ಸಂಸದರ ಪರ ಶಾಮನೂರು ಬ್ಯಾಟಿಂಗ್; ಸಚಿವ ಪ್ರಿಯಾಂಕ್ ಖರ್ಗೆ ಕೊಟ್ಟ ವಾರ್ನಿಂಗ್ ಏನು?

ಶೆಟ್ಟರ್ ಕಾಂಗ್ರೆಸ್ ನಿರ್ನಾಮ ಮಾಡಿ ಎಂದು ಕರೆ ಕೊಟ್ಟಿದ್ದಾರಲ್ಲ ಎಂಬ ಪ್ರಶ್ನೆಗೆ, ಈ ಹಿಂದೆ ಕಾಂಗ್ರೆಸ್ ಗೆಲ್ಲಿಸಿ, ಬಿಜೆಪಿ ನಿರ್ನಾಮ ಮಾಡಿ ಎಂದು ಹೇಳಿದ್ದರು ಎಂದು ವ್ಯಂಗ್ಯವಾಡಿದರು.

ಕಾರ್ಯಕರ್ತರಿಗೂ ಅವಕಾಶವಿದೆ

ಮೊದಲ ಪಟ್ಟಿಯಲ್ಲಿ ಶಾಸಕರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಯಾರೂ ಗಾಬರಿಯಾಗುವ ಅವಶ್ಯಕತೆಯಿಲ್ಲ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಬ್ಲಾಕ್ ಮಟ್ಟದಲ್ಲಿ ದುಡಿದಂತಹ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸುತ್ತೇವೆ. ಜತೆಗೆ ನೂರಾರು ಕಾರ್ಯಕರ್ತರಿಗೆ ಅವಕಾಶ ನೀಡಲು ಇನ್ನೂ ಹುದ್ದೆಗಳನ್ನು ಸೃಷ್ಟಿ ಮಾಡಿದ್ದೇವೆ. ಸ್ಥಳೀಯ ಮಟ್ಟದಲ್ಲಿ ಆಸ್ಪತ್ರೆ ಸಮಿತಿ, ಬಗರ್ ಹುಕುಂ ಸಾಗುವಳಿ ಸಮಿತಿ, ಆಶ್ರಯ ಸಮಿತಿ, ಮುನಿಸಿಪಾಲಿಟಿ ಸೇರಿದಂತೆ ವಿವಿಧ ಸಮಿತಿಗಳಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದರು.

Latest Videos
Follow Us:
Download App:
  • android
  • ios