ಬೆಂಗಳೂರು, [ನ.03]: ದೇಶದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಅಯೋಧ್ಯೆ ಪ್ರಕರಣದ ತೀರ್ಪು ಪ್ರಕಟಣೆಗೆ ದಿನಗಣನೆ ಆರಂಭವಾಗಿದೆ.  ತೀರ್ಪು ಬರುವವರೆಗೆ ಮತ್ತು ನಂತರದಲಲ್ಲೂ ಯಾರೊಬ್ಬರೂ ಎಲ್ಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ಹೈಕಮಾಂಡ್ ತನ್ನ ರಾಜ್ಯ ಘಟಕಗಳಿಗೆ ಸೂಚನೆ ನೀಡಿದೆ.

ಹೈಕಮಾಂಡ್ ಸೂಚನೆ ಬಂದಿರುವುದನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಇಂದು [ಭಾನುವಾರ] ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳಿಗೆ ತಿಳಿಸಿದರು.

'ಅಯೋಧ್ಯೆ ಬಗ್ಗೆ ಮಾತು ಆಡುವಾಗ ಹುಷಾರ್‌' ಸಚಿವರಿಗೆ ಸಿಎಂ ವಾರ್ನಿಂಗ್

ಅಯೋಧ್ಯೆ ತೀರ್ಪು ಪರ-ವಿರೋಧ ಏನೇ ತೀರ್ಪು ಬರಲಿ.  ಯಾರೂ ಪ್ರತಿಕ್ರಿಯೆ ಕೊಡಬೇಡಿ. ಈ ಬಗ್ಗೆ ಹೈಕಮಾಂಡ್ ಸೂಚಿಸಿದ್ದು, ಇದನ್ನು ನಾವು ಪಾಲಿಸಬೇಕು. ಜತೆಗೆ ಕಾರ್ಯಕರ್ತರು ಪಾಲಿಸುವಂತೆ ನೋಡಿಕೊಳ್ಳಿ ಎಂದು ಪಕ್ಷದ ವಿವಿಧ ಪದಾಧಿಕಾರಿಗಳಿಗೆ ಸೂಚಿನೆ ನೀಡಿದರು.

ಹೈಕಮಾಂಡ್ ಸೂಚನೆ
ರಾಮಮಂದಿರ ನಿರ್ಮಾಣ ಆಗತ್ತೋ ಇಲ್ಲವೊ ಎನ್ನುವುದು ಸುಪ್ರಿಂ ಕೋರ್ಟ್ ತೀರ್ಪಿನ ಬಳಿಕ ತಿಳಿಯಲಿದೆ. ಅದಕ್ಕೆ ಸಂಬಂಧಿಸಿದ ಸುದೀರ್ಘ ವಿಚಾರಣೆ ಮುಕ್ತಾಯವಾಗಿದೆ. ಕೋರ್ಟ್ ಅಂತಿಮ ತೀರ್ಪನ್ನು ನೀಡೋದೊಂದೆ ಬಾಕಿ ಇದೆ. 

ಕೋರ್ಟ್ ತೀರ್ಪು ಯಾರ ಪರವೇ ಬರಲಿ ಅಥವಾ ವಿರುದ್ಧ ಬರಲಿ. ನೀವ್ಯಾರು ಪ್ರತಿಕ್ರಿಯೆ ನೀಡಬಾರದು, ವಿಜಯೋತ್ಸವ ಆಚರಿಸಬಾರದು. ಅದನ್ನು ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಬೈಟೆಕ್ ನಡೆಸುವ ಮೂಲಕ ಸಂದೇಶ ರವಾನಿಸಿ, ಎಲ್ಲರಿಗೂ ತಿಳಿ ಹೇಳಿ ಎಂದು ಪ್ರತಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸಂದೇಶ ನೀಡಿದೆ. 

ಪ್ರಮುವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು, ಪ್ರಮುಖರು ಪೋಸ್ಚ್ ಮಾಡದಂತೆ ತಿಳಿ ಹೇಳಿ. ಕಾರಣ ಪರಸ್ಪರ ಪ್ರಚೋದನೆ, ನಿಂದನೆ ಮಾಡಿದ್ರೆ ಕಾನೂನು ಸುವ್ಯವಸ್ಥೆ ಹದಗೆಡಲಿದೆ. 

ಜೊತೆಗೆ ಕಾಂಗ್ರೆಸ್ ಪಕ್ಷ ಸಣ್ಣ ಅವಕಾಶಕ್ಕಾಗಿ ಕಾಯುತ್ತಿದೆ, ಇದ್ಯಾವುದಕ್ಕೂ ಅವಕಾಶ ನೀಡದಂತೆ, ತೀರ್ಪಿನ ದಿನ ಶಾಸಕರು, ಸಂಸದರು, ಪದಾಧಿಕಾರಿಗಳು ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿದ್ದು ಎಲ್ಲವನ್ನೂ ನಿಭಾಯಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿದ್ದು, ಇದನ್ನು ಚಾಚು ತಪ್ಪದೆ ಪಾಲಿಸಬೇಕೆಂದು ಖಡಕ್ ಆಗಿಯೇ ಹೇಳಿದೆ.