ನವಲಗುಂದ: ಟಿಕೆಟ್ ಘೋಷಣೆಗೂ ಮುನ್ನವೇ ಪ್ರಚಾರಕ್ಕಿಳಿದ ಕೋನರೆಡ್ಡಿ..!
ಡಿಕೆಶಿ, ಸಿದ್ದು ಅವರು ನಮಗೆ ಟಿಕೆಟ್ ಕೊಡ್ತಾರೆ ಎಂದು ಭರವಸೆಯನ್ನ ಕೊಟ್ಟಿದ್ದಾರೆ, ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆಯಲ್ಲಿ ಸದ್ಯ ಎನ್.ಎಚ್.ಕೋನರೆಡ್ಡಿ ನವಲಗುಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರವನ್ನ ಆರಂಭ ಮಾಡಿದ್ದಾರೆ.
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಏ.14): ಬಂಡಾಯದ ನಾಡು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ನಾನಾ, ನೀನಾ ಅನ್ನೋ ಪ್ರಶ್ನೆ ಕಾಂಗ್ರೆಸ್ ಪಾಳಯದಲ್ಲಿ ಎದ್ದು ಕಾಣುತ್ತಿದೆ. ಇನ್ನು ಕಾಂಗ್ರೆಸ್ ಎರಡನೆ ಪಟ್ಟಿಯಲ್ಲೂ ನವಲಗುಂದ ವಿಧಾನಸಭಾ ಕ್ಷೇತ್ರದ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂದು ಗೊತ್ತಿಲ್ಲ. ಆದರೆ ಸದ್ಯ ಕಾಂಗ್ರೆಸ್ ಹೈಕಮಾಂಡ್ ಮೂರನೇ ಲಿಸ್ಟ್ ಬಿಡುಗಡೆಯ ಮುನ್ನವೇ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಅಬ್ಬರದ ಪ್ರಚಾರವನ್ನ ಆರಂಭ ಮಾಡಿದ್ದಾರೆ.
ಒಂದು ಕಡೆ ಜೆಡಿಎಸ್ ನಿಂದ ನವಲಗುಂದ ಶಾಸಕನಾಗಿ ಐದು ವರ್ಷ ಆಡಳಿತ ನಡೆಸಿದ ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಕಳೆದ ವರ್ಷವಷ್ಟೆ ಕೈ ಹಿಡಿದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ರು. ಆದರೆ ಡಿಕೆಶಿ, ಸಿದ್ದು ಅವರು ನಮಗೆ ಟಿಕೆಟ್ ಕೊಡ್ತಾರೆ ಎಂದು ಭರವಸೆಯನ್ನ ಕೊಟ್ಟಿದ್ದಾರೆ, ನನಗೆ ಟಿಕೆಟ್ ಸಿಗುತ್ತೆ ಎಂಬ ನಂಬಿಕೆಯಲ್ಲಿ ಸದ್ಯ ಎನ್.ಎಚ್.ಕೋನರೆಡ್ಡಿ ನವಲಗುಂದ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರವನ್ನ ಆರಂಭ ಮಾಡಿದ್ದಾರೆ.
KARNATAKA ELECTION 2023: ದೋಸ್ತಿಗಳ ಕಾಳಗ: ಹೈವೋಲ್ಟೇಜ್ ಕ್ಷೇತ್ರವಾದ ಕಲಘಟಗಿ
ಇನ್ನು ಇವೆಲ್ಲುದರ ಮಧ್ಯ ಕಳೆದ 2018 ರ ವಿಧಾನಸಭಾ ಚುಣಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದ ಯವ ನಾಯಕ ವಿನೋದ್ ಅಸೋಟಿ ಅವರಿಗೆ ಟಿಕೆಟ್ ನೀಡಬೇಕು ಎಂದು ಯೂಥ್ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟು ಹಿಡದಿದ್ದಾರೆ. ಇನ್ನು ಇವತ್ತು ರಾತ್ರಿ 8:30 ಕ್ಕೆ ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆಯಾಗಲಿದೆ. ಆದರೆ ಬಿಡುಗಡೆ ಮುನ್ನವೇ ಯುವ ನಾಯಕ ವಿನೋದ್ ಅಸೂಟಿಗೆ ಟಿಕೆಟ್ ನೀಡಬೇಕು ಎಂದು ಯೂಥ್ ಕಾಂಗ್ರೆಸ್ ಅದ್ಯಕ್ಷ ಮಹ್ಮದ್ ನಲಪಾಡ ಸೇರಿದಂತೆ 10 ಜಿಲ್ಲೆಯ ಪದಾಧಿಕಾರಿಗಳು, 10 ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, 50 ಜನ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆಯನ್ನ ಕೊಡುತ್ತೇವೆ ಎಂಬ ನಿರ್ಧಾವನ್ನ ಯೂಥ್ ಕಾಂಗ್ರೆಸ್ ಸದ್ಯ ತಿರ್ಮಾನ ಮಾಡಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿನೋದ್ ಅಸೋಟಿಗೆ ಬಿಟ್ಟು ಬೇರೆ ಯಾರಿಗೂ ಟಿಕೆಟ್ ನೀಡಬಾರದು ಎಂದು ಯೂಥ್ ಕಾಂಗ್ರೆಸ್ ಪಟ್ಟು ಹಿಡದಿದೆ.
ಒಂದು ಕಡೆ ವಿನೋದ್ ಅಸೂಟಿ ಬೆಂಗಳೂರಿನಲ್ಲಿ ಟಿಕೆಟ್‌ಗಾಗಿ ಪೈಪೋಟಿ ಮಾಡುತ್ತಿದ್ದರೆ ಮತ್ತೊಂದಡೆ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ಅವರು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರವನ್ನ ಮಾಡುತ್ತಿದ್ದಾರೆ.
ಇನ್ನು ಎನ್.ಎಚ್. ಕೋನರೆಡ್ಡಿಗೆ ಮೂರನೇ ಲಿಸ್ಟ್‌ನಲ್ಲಿ ಟಕೆಟ್ ಸಿಗುತ್ತಾ ಅನ್ನೋ ಮುನ್ಸೂಚನೆ ಏನಾದ್ರೂ ಸಿಕ್ಕಿದೆನಾ ಎಂಬುದನ್ನ ಸಂಜೆ 8 ರವರೆಗೆ ಕಾದು ನೋಡಬೇಕಿದೆ. ಒಂದು ವೇಳೆ ಕೋನರೆಡ್ಡಿಗೆ ಟಿಕೆಟ್ ನೀಡಿದ್ರೆ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ, ವಿನೋದ್ ಅಸೋಟಿ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಗೆಲವು ನಿಶ್ಚಿತ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಮಾತಾಗಿದೆ. ಇನ್ನು ಈ ಗೊಂದಲವನ್ನು ಕಾಂಗ್ರೆಸ್ ಹೈಕಮಾಂಡ್ ಇದನ್ನ ಯಾವ ರೀತಿಯಾಗಿ ಪರಿಗಣಿಸುತ್ತೆ ಎಂಬುದನ್ನ ಎಲ್ಲರ ಕೂತಹಲವಾಗಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.