Chikkamagaluru: ಹಳೇ ದೋಸ್ತಿಗಳ ಹೊಸ ಜಗಳ, 18 ವರ್ಷದ ಆಪ್ತಮಿತ್ರ ತಮ್ಮಯ್ಯ ವಿರುದ್ಧ ತಿರುಗಿಬಿದ್ದ ಸಿ.ಟಿ. ರವಿ

ಕಾಫಿನಾಡು ಚಿಕ್ಕಮಗಳೂರಲ್ಲಿ ಗುರು-ಶಿಷ್ಯರ ಕಾಳಗ ಜೋರಾಗಿದೆ. ಅತ್ತ 18 ವರ್ಷದ ಆಪ್ತಮಿತ್ರ ತಮ್ಮಯ್ಯ ಕಾಂಗ್ರೆಸ್ ಸೇರುತ್ತಿದ್ದಂತೆ ಇತ್ತ ಶಾಸಕ ಸಿ.ಟಿ. ರವಿ ಕೂಡ ಚುನಾವಣೆಯ ರಣಕಹಳೆ ಊದಿದ್ದಾರೆ. ತಮ್ಮಯ್ಯ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಜಿಲ್ಲೆಗೆ ಆಗಮಿಸದ ಜೆ.ಪಿ.ನಡ್ಡಾರಿಂದ ಮೂರು ಲಿಂಗಾಯಿತ ಸಮುದಾಯದ ಸ್ವಾಮಿಗಳ ಕಾಲಿಗೆ ಬೀಳಿಸಿ ಆಶೀರ್ವಾದ ಪಡೆದಿದ್ದಾರೆ.

new political fight between 18 year old friend CT Ravi and Thammaiah gow

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.21): ಕಾಫಿನಾಡು ಚಿಕ್ಕಮಗಳೂರಲ್ಲಿ ಗುರು-ಶಿಷ್ಯರ ಕಾಳಗ ಜೋರಾಗಿದೆ. ಅತ್ತ 18 ವರ್ಷದ ಆಪ್ತಮಿತ್ರ ತಮ್ಮಯ್ಯ ಕಾಂಗ್ರೆಸ್ ಸೇರುತ್ತಿದ್ದಂತೆ ಇತ್ತ ಶಾಸಕ ಸಿ.ಟಿ. ರವಿ ಕೂಡ ಚುನಾವಣೆಯ ರಣಕಹಳೆ ಊದಿದ್ದಾರೆ. ತಮ್ಮಯ್ಯ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಜಿಲ್ಲೆಗೆ ಆಗಮಿಸದ ಜೆ.ಪಿ.ನಡ್ಡಾರಿಂದ ಮೂರು ಲಿಂಗಾಯಿತ ಸಮುದಾಯದ ಸ್ವಾಮಿಗಳ ಕಾಲಿಗೆ ಬೀಳಿಸಿ ಆಶೀರ್ವಾದ ಪಡೆದಿದ್ದಾರೆ. ಹಾಗಾಂತ, ಬಿಜೆಪಿ ಗರಡಿಯಲ್ಲೇ ಪಳಗಿದ ತಮ್ಮಯ್ಯ ಏನು ಸೈಲೆಂಟಾಗಿಲ್ಲ. ಡಿಕೆಶಿ ಕೈನಲ್ಲಿ ಹಾರ ಹಾಕಿಸ್ಕೊಂಡು ಬಂದು ಸಿ.ಟಿ.ರವಿ ವಿರುದ್ಧ ಫುಲ್ ವೈಲೆಂಟಾಗಿ ಬೈಕ್ ರ್ಯಾಲಿ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಹೇಗಿದೆ ಗೊತ್ತಾ ಕಾಫಿನಾಡಲ್ಲಿ ಹಳೇ ದೋಸ್ತಿಗಳ ಹೊಸ ರಾಜಕೀಯ ಜಗಳ.

ಕಾಫಿನಾಡಲ್ಲಿ ಹಳೇ ದೋಸ್ತಿಗಳ ಹೊಸ ರಾಜಕೀಯ ಜಗಳ:
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 20 ವರ್ಷಗಳಿಂದ ನಡೆದ ಚುನಾವಣೆಯೇ ಬೇರೆ ಈಗ ನಡೆಯೋ ಚುನಾವಣೆಯೇ ಬೇರೆ ಎಂಬಂತಹಾ ವಾತಾವರಣ ನಿರ್ಮಾಣವಾಗಿದೆ‌. ಯಾಕಂದ್ರೆ, 18 ವರ್ಷಗಳಿಂದ ಬಿಜೆಪಿ ಕಟ್ಟಾಳುವಾಗಿದ್ದ ತಮ್ಮಯ್ಯ ಕಾಂಗ್ರೆಸ್ ಸೇರಿ ಸಿ.ಟಿ.ರವಿ ವಿರುದ್ಧ ಕಣಕ್ಕಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ‌ಅತ್ತ ತಮ್ಮಯ್ಯ ಕಾಂಗ್ರೆಸ್ ಸೇರಿತ್ತಿದ್ದಂತೆ ಇತ್ತ ಸಿ.ಟಿ.ರವಿ ಮನೆಗೆ ಬಂದ ಜೆ.ಪಿ.ನಡ್ಡಾರಿಂದ ಮೂವರು ಲಿಂಗಾಯತ ಮಠದ ಸ್ವಾಮಿಜಿಗಳ ಆಶೀರ್ವಾದ ಪಡೆದಿದ್ದಾರೆ. ಸ್ವಾಮೀಜಿಗಳು ಕೂಡ ನಡ್ಡಾ ಹಾಗೂ ಸಿ.ಟಿ.ರವಿಗೆ ಶಾಲು ಹೊದಿಸಿ ಸನ್ಮಾನ ಮಾಡಿ, ಆಶೀರ್ವದಿಸಿದ್ದಾರೆ.

ಇದೇ ವೇಳೆ ಸಿ.ಟಿ.ರವಿ ಪ್ರಬುದ್ಧರಿಗೆಂದೇ ಆಯೋಜಿಸಿದ್ದ ತುಂಬಿದ್ದ ಸಭೆಯಲ್ಲಿ, ರಾಣಿ ಚೆನ್ನಮ್ಮಳಿಗೆ ಮಲ್ಲಪ್ಪಶೆಟ್ಟಿ ಮೋಸ ಮಾಡಿದಂತೆ, ಎಲ್ಲವನ್ನೂ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುವವರು ಇರುತ್ತಾರೆ‌. ಆದರೆ, ಎಲ್ಲಿವರೆಗೆ ಜನರ ಪ್ರೀತಿಯ ನಿಮ್ಮ ರಕ್ಷಾಕವಚ ಇರುತ್ತೋ ಅಲ್ಲಿವರೆಗೆ ಯಾರೂ ಏನೂ ಮಾಡಲಾಗದು ಎಂದು ಹೆಚ್.ಡಿ.ತಮ್ಮಯ್ಯಗೆ ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿಗೆ ಗುಡ್ ಬೈ ಹೇಳಿದ ಶಾಸಕ ಸಿ.ಟಿ ರವಿ ಅಪ್ತಬಣದಲ್ಲಿ ಗುರುತಿಸಿಕೊಂಡಿದ್ದ ಹೆಚ್.ಡಿ. ತಮ್ಮಯ್ಯ

ಸಿ ಟಿ ರವಿ ಹೇಳಿಗೆ ತಮ್ಮಯ್ಯ ಕೂಡ ಕಿಡಿ:
ತಮ್ಮಯ್ಯ ವಿರುದ್ಧ ಸಿ.ಟಿ.ರವಿ ಉಂಡ ಮನೆಗೆ ದ್ರೋಹ ಬಗೆದವರು ಎಂದಿದ್ದಕ್ಕೆ ತಮ್ಮಯ್ಯ ಕೂಡ ಕಿಡಿಕಾರಿದ್ದಾರೆ. ಅವರ ಒಮ್ಮೆ ಅವರ ಆತ್ಮವನ್ನ ಮುಟ್ಟಿ ನೋಡಿಕೊಳ್ಳಲಿ. ಅವರು ಪಕ್ಷದಲ್ಲೇ ಇದ್ದು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ.2004, 2008, 2108ರಲ್ಲಿ ಯಾರ ಹೆಸರೇಳಿಕೊಂಡು ನೀವು ಗೆದ್ದದ್ದು ನೀವು. ಯಡಿಯೂರಪ್ಪ ಹೇಸರೇಳಿಕೊಂಡು ಗೆದ್ದು, ಈಗ ನೀವು ಯಾರನ್ನ ಲೇವಡಿ ಮಾಡ್ತಿರೋದು. ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಈ ರಾಜ್ಯ ಕಂಡ ಮಹಾನ್ ನಾಯಕರು. ಅವರಿಂದ ನೀವು ಸಹಾಯ ಪಡೆದಿಲ್ಲವಾ‌. ಅವರಿಂದ ಸಹಾಯ ಪಡೆದಿಲ್ಲ, ಯಡಿಯೂರಪ್ಪನ ಹೆಸರೇಳಿ ಗೆದ್ದಿಲ್ಲ ಎಂದು ಹೇಳಲಿ ನೋಡೋಣ‌.‌

ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ಮುಂದಾದ ಸಿ.ಟಿ.ರವಿ ಆಪ್ತ ಹೆಚ್.ಡಿ.ತಮ್ಮಯ್ಯ

ಕತ್ತೆ ಅಡ್ಡೆ ಹೊತ್ಕಂಡು ಹೋಗ್ತಿದ್ರೆ ಕತ್ತೆಗೆ ಗೌರವ ಕೊಡ್ತಾರೆ, ಅಡ್ಡೆಗಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೋರು ನೀವು. ಕಾರ್ಯಕರ್ತರನ್ನ ಕತ್ತಿಗೆ ಹೋಲಿಸೋರು ನೀವು. ಕಾರ್ಯಕರ್ತರೇ ಇನ್ನೂ ಎಷ್ಟು ದಿನ ಜೀ... ಹೂಜೂರ್ ಆಗಿರ್ತೀರಾ ಎಂದು ಸಿ.ಟಿ.ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಒಟ್ಟಾರೆ, ಕಾಫಿನಾಡಲ್ಲಿ ಹೊಸದೊಂದು ರಾಜಕೀಯ ಯುಗ ಆರಂಭವಾಗಿದೆ. ಆದರೆ, ತಮ್ಮಯ್ಯಗೆ  ಟಿಕೆಟ್ ಸಿಗೋದೆ ಡೌಟ್ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲೇ ಬಲವಾಗಿವೆ. ಈ ಮಧ್ಯೆ ಸಿ.ಟಿ.ರವಿ ಹಾಗೂ ತಮ್ಮಯ್ಯ ಕಾಂಗ್ರೆಸ್-ಬಿಜೆಪಿಗಿಂತ ವೈಯಕ್ತಿಕ ತೇಜೋವಧೆಗೆ ಇಳಿದಂತೆ ಕಾಣ್ತಿದೆ. ಆದರೆ, ಸಿ.ಟಿ.ರವಿಗಿರುವ ಜನಬೆಂಬಲ, ತಮ್ಮಯ್ಯ ಬೆನ್ನಿಗಿರುವ ಜಾತಿ ಬೆಂಬಲ. ಜನ ಎಲ್ಲವನ್ನು ಗಮನಿಸುತ್ತಿದ್ದಾರೆ. ಅಂತಿಮವಾಗಿ ಮತದಾರ ಪ್ರಭು ಯಾರ ಕೈಹಿಡಿಯುತ್ತಾರೋ ಕಾದುನೋಡ್ಬೇಕು.

Latest Videos
Follow Us:
Download App:
  • android
  • ios