ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅವಶ್ಯ: ಚಕ್ರವರ್ತಿ ಸೂಲಿಬೆಲೆ
ಭಾರತವನ್ನು ವಿಶ್ವದಲ್ಲಿ ವಿಶ್ವಗುರುವನ್ನಾಗಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ನಮೋಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ದಾಬಸ್‌ಪೇಟೆ (ಅ.15): ಭಾರತವನ್ನು ವಿಶ್ವದಲ್ಲಿ ವಿಶ್ವಗುರುವನ್ನಾಗಿ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಜಿ ಅವರನ್ನು ಇನ್ನೊಮ್ಮೆ ಪ್ರಧಾನಿಯಾಗಿಸಲು ಎಲ್ಲರೂ ಸಂಕಲ್ಪ ಮಾಡೋಣ ಎಂದು ನಮೋಬ್ರಿಗೇಡ್ ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಉದ್ದಾನೇಶ್ವರ ವೃತ್ತದಲ್ಲಿ ಹಮ್ಮಿಕೊಂಡಿದ್ದ ನಮೋಬ್ರಿಗೇಡ್ ವತಿಯಿಂದ ಹಮ್ಮಿಕೊಂಡಿದ್ದ ಜನಗಣಮನ ಬೈಕ್ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಂದ್ರ ಮೋದಿಯವರು ದೇಶದ ಪ್ರಧಾನಿಗಳಾದ ನಂತರ ದೇಶದಲ್ಲಿ ಉಗ್ರರ ಅಟ್ಟಹಾಸಕ್ಕೆ ನಿಯಂತ್ರಣ ಹಾಕಿದ್ದಾರೆ. ಭಾರತ ಈಗ ವಿಶ್ವಗುರು ಸ್ಥಾನದಲ್ಲಿ ನಿಂತಿದೆ.
ಈ ಉದ್ದೇಶದಿಂದ ಸಮಾಜದ ಎಲ್ಲ ಜನರೊಂದಿಗೆ ಬೆಸೆಯುವ ಅವರ ಅನಿವಾರ್ಯತೆ ಮತ್ತು ಅವಶ್ಯಕತೆಯ ಬಗ್ಗೆ ಜನರಲ್ಲಿ ತಲುಪಿಸುವ ಉದ್ದೇಶದಿಂದ ಜನ ಗಣ ಮನ ಬೆಸೆಯೋಣ ಯಾತ್ರೆ ನಡೆಸಲಾಗುತ್ತಿದೆ ಎಂದರು. ಬಿಜೆಪಿ ತಾಲೂಕು ಉಪಾಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ಭಾರತದ ಶಕ್ತಿಯನ್ನು ನಮ್ಮ ಪ್ರಧಾನಿಗಳು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ನಡುವಿನ ಯುದ್ಧ, ಬೇರೆ ದೇಶಗಳಿಗೂ ಹಲವಾರು ಪಾಠ ಹೇಳಿದೆ, ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಇಡೀ ವಿಶ್ವ ಈ ಯುದ್ಧ ದ ಮೂಲಕ ಒಂದಾಗುತ್ತಿದೆ ಎಂದರು.
ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿಯಾಗಿಸುವುದೇ ಜನಗಣಮನ ಯಾತ್ರೆಯ ಮೂಲ ಕಲ್ಪನೆಯಾಗಿದೆ ಎಂದು ವಾಗ್ಮಿ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಇಲ್ಲಿನ ಮೂರುಸಾವಿರ ಮಠದ ಆವರಣದಲ್ಲಿ ಆರಂಭವಾದ ಜನಗಣಮನ ಯಾತ್ರೆಯ ಬೈಕ್ ರ್‍ಯಾಲಿಯಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿರುವ ಭಿನ್ನಭಿನ್ನ ಜನರನ್ನು ಮುನ್ನೆಲೆಗೆ ಕರೆದುಕೊಂಡು ಬರುವುದರೊಂದಿಗೆ ಅವರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಯಾತ್ರೆ ಕೋಲಾರದಿಂದ ಆರಂಭವಾಗಿ ಮೈಸೂರು, ಚಾಮರಾಜನಗರ ಸೇರಿದಂತೆ ಉತ್ತರ ಕರ್ನಾಟಕ ಪೂರ್ಣಗೊಳಿಸಿ ಈಗ ಹುಬ್ಬಳ್ಳಿಗೆ ಬಂದಿದೆ.
ಯಾತ್ರೆಗೆ ದಾರಿಯುದ್ದಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಯಾತ್ರೆಯ ವೇಳೆ ಹಕ್ಕಿ ಪಿಕ್ಕಿ ಜನಾಂಗದವರನ್ನು ಭೇಟಿ ನೀಡಿದ ವೇಳೆ ಪ್ರಧಾನಿ ನರೇಂದ್ರ ಮೋದಿ ಗೊತ್ತಾ ಎಂದು ಕೇಳಿದರೆ ಅವರಿಂದ ಬಂದ ಉತ್ತರ ಮೋದಿ ಗೊತ್ತು, ನಮಗೆಲ್ಲ ಉಚಿತ ಗ್ಯಾಸ್ ನೀಡಿದ್ದು ಅವರೆ ಎಂದು ಹೇಳುತ್ತಾರೆ, 370 ಬಗ್ಗೆ, ನೋಟುಗಳ ಅಮಾನ್ಯೀಕರಣದ ಬಗ್ಗೆ ಮಾತನಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳು ಸಮಾಜದ ಮೂಲೆ ಮೂಲೆಗಳಲ್ಲಿ ತಲುಪಿವೆ. ಅದನ್ನು ಈ ಯಾತ್ರೆಯ ಮೂಲಕ ಜಾಗೃತಗೊಳಿಸಿ ಮೂರನೇ ಬಾರಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಕೆಲಸ ಕೈಗೊಳ್ಳಲಾಗುತ್ತಿದೆ ಎಂದರು.
Ramanagara: ನೃತ್ಯಗಾರರನ್ನೂ ನಾಚಿಸಿದ ಶಾಸಕ ಬಾಲಕೃಷ್ಣರ ಡ್ಯಾನ್ಸ್!
ಜನಗಣಮನಕ್ಕೆ ಅದ್ಧೂರಿ ಸ್ವಾಗತ: ಇಡೀ ರಾಜ್ಯಾದ್ಯಂತ ಜನಗಣಮನ ಬೆಸೆಯೋಣ ಕಾರ್ಯಕ್ರಮದ ಅಂಗವಾಗಿ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಬುಧವಾರ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದಂತೆ ಡೊಳ್ಳು ಮೇಳಗಳಿಂದ ಹಿಂದೂ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ರೈಲ್ವೆ ನಿಲ್ದಾಣದಲ್ಲಿರುವ ಸ್ವಾಮಿ ವಿವೇಕಾನಂದ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು.