ಕಾಂಗ್ರೆಸ್ ಭಯೋತ್ಪಾದನಾ ಸಂಘಟನೆ: ನಳಿನ್ ಕುಮಾರ್ ಕಟೀಲ್
ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್ ಭಯೋತ್ಪಾದನಾ ಸಂಘಟನೆಯಾಗಿದ್ದು, ಅದು ಕೋಮಗಲಭೆ ಹಾಗೂ ರಕ್ತಸಿಕ್ತ ಇತಿಹಾಸ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾರವಾರ (ಫೆ.09): ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್ ಭಯೋತ್ಪಾದನಾ ಸಂಘಟನೆಯಾಗಿದ್ದು, ಅದು ಕೋಮಗಲಭೆ ಹಾಗೂ ರಕ್ತಸಿಕ್ತ ಇತಿಹಾಸ ಹೊಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾರವಾರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಮತ್ತು ಮತಗಟ್ಟೆಪೇಜ್ ಪ್ರಮುಖರ ಸಮಾವೇಶಕ್ಕೆ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಅತಿಹೆಚ್ಚು ಗಲಭೆಗಳಾಗಿರೋದು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ. ಕಾಂಗ್ರೆಸ್ ಆಡಳಿತ ನಡೆಸಿದಾಗಲೆಲ್ಲ ಮತೀಯ ಗಲಭೆಗಳು ಪ್ರಾರಂಭವಾಗಿವೆ.
ಕಾಂಗ್ರೆಸ್‌ನ ಆಡಳಿತದ ಅವಧಿಯಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಎಂಬ ತುಷ್ಟೀಕರಣ ನೀತಿಯಿಂದ ಕೋಮುಗಲಭೆಗಳು ನಡೆದಿವೆ ಎಂದು ಅವರು ಆಪಾದಿಸಿದರು. ಪಿಎಫ್‌ಐನ 2000 ಜನರನ್ನು ಬಿಡುಗಡೆಗೊಳಿಸಿದವರು ಸಿದ್ಧರಾಮಯ್ಯ. ಹಿಂದೂಗಳ ಅತಿಹೆಚ್ಚು ಕೊಲೆಯಾಗಿರುವುದು ಸಿದ್ದರಾಮಯ್ಯ ಆಡಳಿತದಲ್ಲಿ. ಆದರೆ ಯಾರನ್ನು ಕೂಡ ಈ ತನಕ ಬಂಧಿಸಲಾಗಿಲ್ಲ. ಗೋಹಂತಕನ ಹತ್ಯೆಯಾದಾಗ ಆ ಮನೆಗೆ .10 ಲಕ್ಷ ಪರಿಹಾರ ನೀಡಿದರು.
ಕಟೀಲ್ ಅನ್ನುವ ಹೆಸರು ಬದಲು ಪಿಟೀಲು ಅಂತಾ ಇಟ್ಟುಕೊಳ್ಳಲಿ: ಎಚ್.ಡಿ.ಕುಮಾರಸ್ವಾಮಿ
ಮತೀಯ ಗಲಭೆಗೆ ಪ್ರೇರಣೆ ನೀಡಿ ರಕ್ತಸಿಕ್ತ ಆಡಳಿತ ನಡೆಸಿದವರು ಸಿದ್ದರಾಮಯ್ಯ ಎಂದು ಕಿಡಿ ಕಾರಿದರು. ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಆದಾಗಲೂ ಭಯೋತ್ಪಾದಕರ ಪರವಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ನಿಂತಿದ್ದರು. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ನಡೆದಾಗ ಅವರ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಹಾಕಿದರೂ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಂಡಿಲ್ಲ. ಭಯೋತ್ಪಾದನೆಗೆ ಬೆಂಬಲ ನೀಡುವ ಕಾಂಗ್ರೆಸ್ ಭಯೋತ್ಪಾದನಾ ಸಂಘಟನೆಯಾಗಿದೆ ಎಂದು ಅವರು ಪುನರುಚ್ಚರಿಸಿದರು.
ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ: ಸಿಎಂ ಬೊಮ್ಮಾಯಿ
ಬ್ರಾಹ್ಮಣ ವಿರೋಧ ಕುಮಾರಸ್ವಾಮಿ ರಕ್ತದಲ್ಲಿದೆ: ಮಾಜಿ ಸಿಎಂ ಕುಮಾರಸ್ವಾಮಿ ಸಮುದಾಯವನ್ನು ಕೆರಳಿಸುವ ಕಾರ್ಯ ಮಾಡಬಾರದು. ಗಾಂಧೀಜಿಯವರ ಕೊಲೆಯನ್ನು ಒಂದು ಸಮುದಾಯಕ್ಕೆ ಕಟ್ಟಿದ್ದಾರೆ. ರಾಮಕೃಷ್ಣ ಹೆಗಡೆಯವರಿಗೆ ಹೊಡೆದವರು ಯಾರು? ಎಂದು ಪ್ರಶ್ನಿಸಿದ ಕಟೀಲ್, ಬ್ರಾಹ್ಮಣ ವಿರೋಧ ಕುಮಾರಸ್ವಾಮಿ ಅವರ ರಕ್ತದಲ್ಲೇ ಬಂದಿದೆ ಎಂದು ವ್ಯಂಗ್ಯವಾಡಿದರು. ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ನೋಡುವುದು ಮಾಜಿ ಸಿಎಂಗೆ ಶೋಭೆಯಲ್ಲ. ಸಿಎಂ ಆಗಲು ಕುಮಾರಸ್ವಾಮಿ ಶರ್ಚ್ ಹೊಲಿಸಿದ್ದಾರೆ. ಮೂರು ಜಿಲ್ಲೆ ಇಟ್ಟುಕೊಂಡು ಕರ್ನಾಟಕ ಆಳುವ ಕನಸು ಕಾಣುತ್ತಿದ್ದಾರೆ. ಈ ಬಾರಿ 20ಕ್ಕಿಂತ ಹೆಚ್ಚು ಸ್ಥಾನವನ್ನು ಅವರ ಪಕ್ಷ ಗೆಲ್ಲುವುದಿಲ್ಲ. ಅಧಿಕಾರಕ್ಕೆ ಬರುವುದಿಲ್ಲ ಎನ್ನುವ ಮಾನಸಿಕ ಚಂಚಲತೆಯಿಂದ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಕಟೀಲ್ ಹೇಳಿದರು.