ಪ್ರಿಯಾಂಕಾ ಕೊಂಡಾಡಿ ಪೂಜಾರಿಗೆ ಜಾಗೃತೆ ಎಂದ ಕೈ ನಾಯಕ
ಕಾಂಗ್ರೆಸ್ ನಾಯಕರ ಹೇಳಿಕೆ ಮತ್ತು ಸದ್ಯದ ರಾಜಕಾರಣದ ಬಗ್ಗೆ ಸಂಸದ ವೀರಪ್ಪ ಮೊಯ್ಲಿ ಮಾತನಾಡಿದ್ದಾರೆ. ಜನಾರ್ದನ ಪೂಜಾರಿ ಅವರಿಗೆ ಸಲಹೆ ನೀಡಿದ್ದು ಮಾತ್ರವಲ್ಲದೇ ಲೋಕಸಭಾ ಚುನಾವಣಾ ಸೀಟು ಹಂಚಿಕೆ ಬಗ್ಗೆಯೂ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರ[ಜ. 25] ಪ್ರಿಯಾಂಕಾ ರಾಜಕೀಯ ಪ್ರವೇಶದಿಂದ ರಾಹುಲ್ ಗಾಂಧಿಗೆ ಶಕ್ತಿ ಬಂದಿದೆ. ಬಿಜೆಪಿ ಯವರಿಗೆ ಒಬ್ಬರೇ ಮೋದಿ ಆದರೆ ಕಾಂಗ್ರೆಸ್ ಗೆ ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಇದ್ದಾರೆ ಎಂದು ಸಂಸದ ವೀರಪ್ಪ ಮೊಯ್ಲಿ ಬಣ್ಣಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮಾತನಾಡಿದ ಮೊಯ್ಲಿ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಚ್ಚೇಗೌಡ ಸ್ಪರ್ಧೆ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಹತ್ತು ವರ್ಷ ದಿಂದ ಸಂಸತ್ ಸದಸ್ಯನಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಮಂತ್ರಿಯಾಗಿದ್ದಾಗ ಬಚ್ಚೇಗೌಡರು ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ಏನು..? ನನ್ನ ಕೊಡುಗೆ ಏನು? ಇದೆಲ್ಲವನ್ನು ಜನ ಚುನಾವಣೆಯಲ್ಲಿ ತೀರ್ಮಾನಿಸಲಿದ್ದಾರೆ ಎಂದು ಮೊಯ್ಲಿ ಹೇಳಿದರು.
ಕಾಂಗ್ರೆಸ್ಸನ್ನು ಮುಗಿಸಲೆಂದೇ ಸಿದ್ದರಾಮಯ್ಯ ಬಂದಿದ್ದಾರೆಂದ ಹಿರಿಯ ಕೈ ನಾಯಕ
ಹಲವು ಸಮೀಕ್ಷೆ ಪ್ರಕಾರ ದಿನದಿಂದ ದಿನಕ್ಕೆ ಬಿಜೆಪಿ ವೀಕ್ ಆಗುತ್ತಿದೆ. ಮುಂದೆ ಸರ್ಕಾರ ರಚಿಸುವ ಸಾಮರ್ಥ್ಯ ಬಿಜೆಪಿಗೆ ಇಲ್ಲ. ದಿನ ಕಳೆದಂತೆ ಬಿಜೆಪಿ ಪಕ್ಷ ಮತ್ತಷ್ಟು ವೀಕ್ ಆಗುತ್ತೆ. ಪ್ರಿಯಾಂಕಾ ಆಗಮನದಿಂದ ಬಿಜೆಪಿ ಮತ್ತಷ್ಟು ಶಕ್ತಿ ಕಳೆದುಕೊಂಡಿದೆ. ರಾಜ್ಯದಲ್ಲಿ ಯಡಿಯೂರಪ್ಪ 20 ಸೀಟು ಅಲ್ಲ 5 ಸೀಟ್ ಗೆದ್ರೆ ಹೆಚ್ಚು ಎಂದು ವ್ಯಂಗ್ಯವಾಡಿದರು.
ಜನಾರ್ದನ ಪೂಜಾರಿ ಯವರು ಬಹಳ ಹಿರಿಯ ನಾಯಕರು. ಹೇಳಿಕೆ ಕೊಡುವಾಗ ಜಾಗೃತೆ ವಹಿಸಿದರೆ ಒಳ್ಳೆಯದು. ಪಕ್ಷದ ಹಿತದೃಷ್ಟಿಯಿಂದ ನಮ್ಮ ನಾಯಕರ ಮೇಲೆ ಟೀಕೆ ಸರಿ ಅಲ್ಲ. ಇದು ಕಾಂಗ್ರೆಸ್ ಪಕ್ಷಕ್ಕೆ ಹಿತ ತರುವುದಿಲ್ಲ ಎಂದು ಜನಾರ್ದನ ಪೂಜಾರಿ ಅವರಿಗೆ ಸಲಹೆ ನೀಡಿದರು. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದಿರುವುದೇ ಕಾಂಗ್ರೆಸ್ ಮುಗಿಸಲು ಎಂದು ಜನಾರ್ದನ ಪೂಜಾರಿ ಹೇಳಿಕೆ ನೀಡಿದ್ದರು.