ಮಾಜಿ ಶಾಸಕರೊಬ್ಬರು ದೇವರಿಗೆ ಪೂಜೆ ಮಾಡುವಾಗಲೇ ಪ್ರಾಣ ಬಿಟ್ಟಿರುವ ಸಿಸಿ ಟಿವಿಯ ವಿಡಿಯೋ ವೈರಲ್ ಆಗುತ್ತಿವೆ.

ಭೋಪಾಲ್, (ನ.16): ಮಧ್ಯಪ್ರದೇಶದ ಕಾಂಗ್ರೆಸ್ ಮಾಜಿ ಶಾಸಕ ವಿನೋದ್ ದಗಾ ಅವರು ದೇವರಿಗೆ ಪೂಜೆ ಮಾಡುವಾಗಲೇ ಪ್ರಾಣ ಬಿಟ್ಟಿದ್ದು ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿನೋದ್ ದಗಾ ಅವರು ನವೆಂಬರ್ 12ರಂದೆ ಮೃತಪಟ್ಟಿದ್ದರು. ಆದರೆ ಇದೀಗ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.

ಕೈ ಮುಖಂಡಗೆ ಬಿಜೆಪಿ ಆಹ್ವಾನ, ನಿಯಮ ಉಲ್ಲಂಘಿಸಿದ ಪಾಕಿಸ್ತಾನ; ನ.16ರ ಟಾಪ್ 10 ಸುದ್ದಿ!

ಸಿಸಿಟಿವಿಯಲ್ಲಿ ಕಾಣಿಸಿರುವಂತೆ ಮೊದಲಿಗೆ ದೇವರಿಗೆ ನಮಸ್ಕಾರ ಮಾಡಿ ವಿಗ್ರಹದ ಹತ್ತಿರಕ್ಕೆ ಹೋದ ವಿನೋದ್ ಅವರು ನಂತರ ಹೃದಯಾಘಾತದಿಂದ ಎದೆಯನ್ನು ಹಿಡಿದುಕೊಂಡು ಕೆಳಗೆ ಬೀಳುತ್ತಾರೆ. ಆ ಕ್ಷಣವೇ ಅವರು ಮೃತಪಟ್ಟಿದ್ದಾರೆ.

Scroll to load tweet…