ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ: ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಗೂಳಿಹಟ್ಟಿ ಶೇಖರ್ ಆರೋಪ
ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ.
ಚಿತ್ರದುರ್ಗ (ಜೂ.06): ಬೋವಿ ನಿಗಮದಲ್ಲಿ 100 ಕೋಟಿ ಅವ್ಯವಹಾರ ಆಗಿದೆ ಎಂದು ಬೋವಿ ನಿಗಮದ ಮಾಜಿ ಅಧ್ಯಕ್ಷ, ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಅವರು ಕೋಟ ಶ್ರೀನಿವಾಸ್ ಪೂಜಾರಿ ವಿರುದ್ಧ ಆರೋಪ ಮಾಡಿದ್ದಾರೆ. ಉಡುಪಿ-ಚಿಕ್ಕಮಗಳೂರು ನೂತನ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ ಅವರು ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಸಚಿವರಾಗಿದ್ದಾಗ ಹಗರಣ ನಡೆದಿದೆ. ಬೋವಿ ನಿಗಮದ ಹಗರಣವನ್ನು ಸಿಐಡಿ ತನಿಖೆಗೆ ನೀಲಾಗಿದೆ.
ಪ್ರಕರಣ ಸಂಬಂಧ ಇಬ್ಬರ ಕೊಲೆ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪ ಮಾಡಿದ್ದಾರೆ. ಸಿಬಿಐ ತನಿಖೆ ಬೇಡ, ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಮಾಡಿಸಿ. ಕೋಟ ಶ್ರೀನಿವಾಸ್ ಪೂಜಾರಿಯಂಥ ಪ್ರಾಮಾಣಿಕರು ದೇಶದಲ್ಲಿಲ್ಲ. ಈಗ 50-60 ಕೋಟಿ ಆಸ್ತಿ ಮಾಡಿದ್ದು ಎಲ್ಲಿಂದ ಬಂತು? ಎಸ್ಟಿ ನಿಗಮ, ಬೋವಿ ನಿಗಮ ಎಲ್ಲ ಹಗರಣಗಳ ಬಗ್ಗೆ ತನಿಖೆ ಮಾಡಿ. ಸಿದ್ದರಾಮಯ್ಯ ಸಿಎಂ ಆದ ಬಳಿಕ ತನಿಖೆ ಸ್ಥಗಿತ ಆಗಿದೆ. ಬಿಎಸ್ ಯಡಿಯೂರಪ್ಪ ಕೇಸ್ ತನಿಖೆ ಮಾಡದೆ ಯಾಕೆ ಮುಚ್ಚಿ ಹಾಕಿದ್ರಿ? ದೂರುದಾರ ಮಹಿಳೆ ಸಾವಿಗೀಡಾದ ಸುದ್ದಿ ಎಲ್ಲೆಡೆ ಬಂದಿದೆ. ಪ್ರಜ್ವಲ್ ಕೇಸ್ ಮಾತ್ರ ತನಿಖೆ ಮಾಡ್ತೀರಾ ಎಂದು ಶೇಖರ್ ಕಿಡಿಕಾರಿದ್ದಾರೆ.
ರೇಪ್ ಕೇಸ್: ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸಿದ ವೈದ್ಯರು
ಭದ್ರಾ ಡ್ಯಾಂನಿಂದ ನೀರು ತರಲು ಯೋಜನೆ: ನಮ್ಮಲ್ಲೇ ಡ್ಯಾಂ ಇದೆ, ಸಾಕಷ್ಟು ನೀರೂ ಇದೆ. ಅದನ್ನು ಬಳಕೆ ಮಾಡಿಕೊಳ್ಳಲು ಮುಂದಾಗದೆ ಬೇರೆಯವರ ಬಳಿ ನಮ್ಮಲ್ಲಿ ನೀರಿಲ್ಲ ನಮಗೆ ಜೀವಜಲ ಕೊಡಿ ಎಂದು ಬೇಡುವ ಪರಿಸ್ಥಿತಿ ನಮ್ಮ ನಾಯಕರಿಗೆ ಬರಬಾರದಿತ್ತು ಎಂದು ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಶಾಸಕ ಗೋವಿಂದಪ್ಪ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ.ತರೀಕೆರೆ ಸಮೀಪದ ಲಕ್ಕವಳ್ಳಿ ಜಲಾಶಯದ ಬಳಿ ಬಹು ಗ್ರಾಮ ಕುಡಿಯುವ ನೀರಿನ ಶುದ್ಧ ನೀರಿನ ಘಟಕಕ್ಕೆ ಶಂಕು ಸ್ಥಾಪನೆ ವೇಳೆ ಅಲ್ಲಿನ ಜನರಿಗೆ ‘ನಮ್ಮ ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರವಾಗಿದೆ. ದಯವಿಟ್ಟು ಈ ಯೋಜನೆ ಯಶಸ್ವಿಗೆ ಸಹಕರಿಸಿ, ಕೆಲಸ ಮಾಡಲು ತೊಂದರೆ ಮಾಡಬೇಡಿ’ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಮನವಿ ಮಾಡಿಕೊಂಡಿದ್ದರು.
ಈ ಕುರಿತು ಗುರುವಾರ ಪತ್ರಿಕೆಗಳಲ್ಲಿ ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡಿರುವ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ನಮ್ಮ ನೆಲದಲ್ಲಿಯೇ ಡ್ಯಾಂ ಇದೆ. ಈ ಡ್ಯಾಂಗಾಗಿ ತಾಲೂಕಿನ ಜನ ಸುಮಾರು 30 ಸಾವಿರ ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಹೀಗಿದ್ದರೂ ಈ ಡ್ಯಾಂನಿಂದ ನಮ್ಮ ತಾಲೂಕಿಗೆ ನಯಾಪೈಸೆ ಅನುಕೂಲವಿಲ್ಲ. ಅಲ್ಲದೆ, ಈ ಡ್ಯಾಂ ನಮಗೆ ಸೇರುವುದಿಲ್ಲ ಎಂದು ಹೇಳಿ ಇದೇ ಶಾಸಕರು ಸುಮ್ಮನಾಗಿದ್ದರು. ಕಳೆದ ಸಾಲಿನಲ್ಲಿ ನಾನು ಶಾಸಕನಾಗಿದ್ದಾಗ ಈ ಡ್ಯಾಂ ನಮಗೆ ಸೇರಿದ್ದು, ಎಂಬುದನ್ನು ಶಾಸನ ಸಭೆಯಲ್ಲಿಯೇ ಚರ್ಚಿಸಿ ಸಾಬೀತು ಪಡಿಸಿದ್ದೇನೆ. ಅಲ್ಲದೆ ನಮ್ಮ ಡ್ಯಾಂನಿಂದಲೇ ನಮ್ಮ ತಾಲೂಕಿಗೆ ನೀರು ತರಲು ನಮ್ಮ ಹಕ್ಕು ಕಾಯ್ದಿರಿಸಲು 2008ರಲ್ಲಿ ನಾನು ಸಚಿವನಾಗಿದ್ದಾಗ ಹೋರಾಟ ಮಾಡಿದ್ದೆ.
ವಾಲ್ಮೀಕಿ ನಿಗಮ ಕೇಸಿಗೆ ಈಗ ಸಿಬಿಐ ಪ್ರವೇಶ: 5 ಮಂದಿ ವಿರುದ್ಧ ಎಫ್‌ಐಆರ್
ಅಲ್ಲದೆ, ಅದು ಅಂದು ಮಂಜೂರಾಗುವ ಹಂತ ತಲುಪಿತ್ತು. ಆದರೆ, 2013ರಲ್ಲಿ ಸರ್ಕಾರ ಬದಲಾಗಿ ಈಗಿನ ಶಾಸಕರೇ ಅಂದು ಶಾಸಕರಾದರು. ವಿವಿ ಸಾಗರ ಜಲಾಶಯದಿಂದ ನೀರು ತಂದರೆ ಎಲ್ಲಿ ನನಗೆ ಹೆಸರು ಬರುತ್ತದೆಯೆಂದು ತಿಳಿದು ಸಾಧುವಲ್ಲದ ಭದ್ರಾ ಡ್ಯಾಂ ನಿಂದ ನೀರು ತರಲು ಯೋಜನೆ ರೂಪಿಸಿ, ಭದ್ರಾ ಡ್ಯಾಂನಲ್ಲಿ ನೀರು ಕಾಯ್ದಿರಿಸಿದರು. ಯಾವುದೇ ಕಾರಣಕ್ಕೂ ಭದ್ರಾ ಡ್ಯಾಂನಿಂದ ನೀರು ತರಲು ಸಾಧ್ಯವಿಲ್ಲ ಎಂಬುದು ಈಗಿನ ಶಾಸಕರಿಗೂ ಗೊತ್ತು. ಆದರೆ, ಈ ಯೋಜನೆಗೆ ಹೆಚ್ಚು ಅನುದಾನ ನಿಗದಿ ಯಾಗುವುದರಿಂದ ಹೆಚ್ಚು ಕಮಿಷನ್ ಬರುತ್ತದೆ ಎಂಬ ಕಾರಣಕ್ಕಾಗಿ, ಅಲ್ಲದೆ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಈ ಸಾಧುವಲ್ಲದ ಕಾರ್ಯಕ್ಕೆ ಕೈ ಹಾಕಿದ್ದಾರೆ ಎಂದು ದೂರಿದರು.