ಮಾ.31-ಏ.6ರ ಅವಧಿಯಲ್ಲಿ ದುಬೈಗೆ ತೆರಳಲು ಅನುಮತಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ಡಿಕೆ ಬಂಧನಕ್ಕೊಳಗಾಗಿದ್ದ ಡಿಕೆಶಿಗೆ 2019ರಲ್ಲಿ ದೆಹಲಿ ಹೈಕೋರ್ಟ್‌ ಜಾಮೀನು  

ನವದೆಹಲಿ(ಮಾ.31): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವಿದೇಶ ಭೇಟಿಗೆ ದೆಹಲಿ ಹೈಕೋರ್ಟ್‌ ಅನುಮತಿ ನೀಡಿದೆ.

ದುಬೈನಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮವೊಂದರಲ್ಲಿ ತಾವು ಅತಿಥಿಯಾಗಿರುವ ಕಾರಣ ಅಲ್ಲಿಗೆ ತೆರಳುವ ಅವಶ್ಯಕತೆ ಇದೆ. ಹೀಗಾಗಿ ಅನುಮತಿ ನೀಡಬೇಕು ಎಂದು ಡಿ.ಕೆ.ಶಿವಕುಮಾರ್‌ ಕೋರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆಶಾ ಮೆನನ್‌ ‘ಅರ್ಜಿದಾರರು ಪರಾರಿಯಾಗುವ ಯಾವುದೇ ಸಾಧ್ಯತೆ ಇಲ್ಲ. ಹೀಗಾಗಿ ಅರ್ಜಿದಾರರಿಗೆ ಮಾ.31ರಿಂದ ಏ.6ರ ಅವಧಿಯಲ್ಲಿ ದುಬೈ ಮತ್ತು ಅಬುಧಾಬಿಗೆ ತೆರಳಲು ಅನುಮತಿ ನೀಡಲಾಗುತ್ತಿದೆ. ಅಲ್ಲಿಂದ ಮರಳಿದ ಕೂಡಲೇ ಅವರು ಈ ಬಗ್ಗೆ ತನಿಖಾಧಿಕಾರಿಗಳಿಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

Karnataka Election ನ.27ಕ್ಕೆ ರಾಜ್ಯ ವಿಧಾನಸಭೆ ಚುನಾವಣೆ: ಡಿಕೆಶಿ ಭವಿಷ್ಯ!

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಡಿ.ಕೆ.ಶಿವಕುಮಾರ್‌ ಅವರಿಗೆ 2019ರಲ್ಲಿ ದೆಹಲಿ ಹೈಕೋರ್ಟ್‌ ಜಾಮೀನು ನೀಡಿತ್ತು. ಈ ವೇಳೆ ನ್ಯಾಯಾಲಯದ ಅನುಮತಿ ಇಲ್ಲದೇ ವಿದೇಶಕ್ಕೆ ತೆರಳುವಂತಿಲ್ಲ ಎಂಬ ಷರತು ವಿಧಿಸಲಾಗಿತ್ತು.

ಡಿಕೆಶಿಗೆ ಹಾಕುವಾಗ ತುಂಡಾದ 50 ಕೇಜಿ ಬೃಹತ್‌ ಹೂ ಹಾರ
ಕಾಂಗ್ರೆಸ್‌ ಡಿಜಿಟಲ್‌ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆಗೆ ನಗರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕ್ರೇನ್‌ ಮೂಲಕ ಬೃಹತ್‌ ಹೂವಿನ ಹಾರ ಹಾಕಿ ಅದ್ಧೂರಿ ಸ್ವಾಗತ ನೀಡು​ವ ವೇಳೆ, ಹಾರ ತುಂಡಾಗಿ ಕೆಳಗೆ ಬಿದ್ದ ಘಟನೆ ಗುರು​ವಾರ ನಡೆ​ದಿ​ದೆ. ಡಿ.ಕೆ.​ಶಿ​ವ​ಕು​ಮಾರ್‌ ಅವರು ಬೆಳಗ್ಗೆ 11 ಗಂಟೆಗೆ ಹೊಸಪೇಟೆಗೆ ಆಗಮಿಸಬೇಕಿತ್ತು. ಆದರೆ, ಅವರು ಮಧ್ಯಾಹ್ನ 3 ಗಂಟೆ ಬಳಿಕ ಬಂದರು. ಬೆಳಗ್ಗೆಯಿಂದಲೇ ಡಿಕೆಶಿ ಸ್ವಾಗತಿಸಲು ನಗರದ ಟಿಬಿ ಡ್ಯಾಂ ಬಳಿ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಕಾರ್ಯಕರ್ತರು ಕಾಯು​ತ್ತಿ​ದ್ದರು. ಡಿ.ಕೆ.​ಶಿ​ವ​ಕು​ಮಾರ್‌ ಆಗ​ಮಿ​ಸು​ತ್ತಿದ್ದಂತೆ 50 ಕೆ.ಜಿ.​ತೂ​ಕದ ಬೃಹತ್‌ ಹೂವಿನ ಹಾರ​ವನ್ನು ಕ್ರೇನ್‌ ಮೂಲಕ ಹಾಕಿ ಸ್ವಾಗ​ತಿ​ಸಲು ಮುಂದಾ​ದರು. ಆಗ ಆ ಹಾರ ಹರಿದು ಕೆಳಗೆ ಬಿದ್ದರೂ ಅದೃ​ಷ್ಟ​ವ​ಶಾತ್‌ ಯಾವುದೇ ಅನಾ​ಹುತ ಸಂಭ​ವಿ​ಸಿ​ಲ್ಲ.

Hijab ಬಗ್ಗೆ ಹಟ ಬೇಡ, ಮಕ್ಕಳನ್ನು ಪರೀಕ್ಷೆಗೆ ಕಳಿಸಿ: ಡಿ.ಕೆ.ಶಿವಕುಮಾರ್‌

ಜೀವಮಾನದಲ್ಲಿ ಬಿಜೆಪಿಯಂತಹ ನೀಚ ಸರ್ಕಾರ ಕಂಡಿಲ್ಲ
ದೇಶದ ಜನರ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಭಾರ, ಜಾತಿ-ಧರ್ಮದ ಕಲಹ, ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯಂತಹ ನೀಚ ಸರ್ಕಾರವನ್ನು ನಾನು ಜೀವಮಾನದಲ್ಲಿ ಕಂಡಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಟೀಕಿಸಿದರು. ಸ್ಥಳೀಯ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಬುಧವಾರ ಮಾತನಾಡಿ, ಅಡುಗೆ ಅನಿಲ, ಪೆಟ್ರೋಲ್‌, ಡಿಸೇಲ್‌ ಸೇರಿದಂತೆ ದಿನ ಬಳಕೆ ಸಾಮಾನುಗಳ ಬೆಲೆ ಏರಿಕೆಯಿಂದ ಬಡವರ, ಸಾಮಾನ್ಯಜನರ ಬದುಕಿನ ಹೊರೆಯನ್ನು ಜಾಸ್ತಿ ಮಾಡಿದೆ. ಪದೇ ಪದೆ ಇಂಧನ ದರ ಹೆಚ್ಚಿಸುತ್ತಾ ಜನರ ಜೇಬಿನಿಂದ ಹಣವನ್ನು ಪಿಕ್‌ ಪಾಕೇಟ್‌ ಮಾಡುತ್ತಿದೆ. ಬಿಜೆಪಿ ಸರ್ಕಾರವು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಎಸ್ಸಿ-ಎಸ್ಟಿಹಾಗೂ ಒಬಿಸಿ ವರ್ಗಕ್ಕೆ ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳಲ್ಲಿ ಕಮಿಷನ್‌ ಪಡೆಯಲಾಗುತ್ತಿದೆ. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ ಹೋರಾಟಕ್ಕಿಳಿಯಲಿದೆ ಎಂದು ತಿಳಿಸಿದರು.

ಬೆಲೆ ಏರಿಕೆ ಹೆಸರಲ್ಲಿ ಬಿಜೆಪಿ ಪಿಕ್‌ಪಾಕೆಟ್‌: ಡಿಕೆಶಿ
ಪೆಟ್ರೋಲ್‌, ಗ್ಯಾಸ್‌ ಬೆಲೆ ಏರಿಕೆ ಮೂಲಕ ಬಿಜೆಪಿ ಜನರ ಪಿಕ್‌ಪಾಕೆಟ್‌ ಮಾಡೋದಕ್ಕೆ ಶುರು ಮಾಡಿದೆ. ಚುನಾವಣೆವರೆಗೂ ಸುಮ್ಮನಿದ್ದರು. ಚುನಾವಣೆ ಮುಗಿದ ಮೇಲೆ ಮತ್ತೆ ಬೆಲೆ ಏರಿಕೆ ಆರಂಭಿಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದರು. ಜನರು ತಮ್ಮ ತಾಳ್ಮೆ ಕಳೆದುಕೊಳ್ಳುವಂತಹ ಸಮಯ ಸೃಷ್ಟಿಯಾಗ್ತಿದೆ.