ನಾಯಕ ಸಮುದಾಯದಲ್ಲೇ ಮೇಲು -ಕೀಳು ರಾಜಕೀಯ ಆರಂಭ: ಟಿಕೆಟ್‌ಗಾಗಿ ಪೈಪೋಟಿ

* ಮೊಳಕಾಲ್ಮೂರಲ್ಲಿ ಚುನಾವಣೆಗೂ ಮುನ್ನವೇ ಜಾತಿ ಟಾಕ್ ವಾರ್ ಶುರು
* ಮ್ಯಾಸನಾಯಕ- ಊರು ನಾಯಕ ಸಮುದಾಯಗಳಲ್ಲಿ ವೈಮಸ್ಸು
* ಎನ್. ವೈ.ಗೋಪಾಲಕೃಷ್ಣ, ಯೋಗೀಶ್ ಬಾಬು ಮಧ್ಯೆ ಟಿಕೆಟ್ ಪೈಪೋಟಿ
 

Molakamuru congress ticket fight Top down politics within the Nayaka community sat

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿತ್ರದುರ್ಗ (ಏ.05):  ಚುನಾವಣೆ ಅಂದ್ಮೇಲೆ ಜಾತಿ ಲೆಕ್ಕಾಚಾರಗಳು ಇರೋದು‌ ಕಾಮನ್.  ಆದರೆ ಟಿಕೆಟ್ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಗೆ ಬ್ಲಾಕ್ ಮೇಲ್ ಶುರುವಾಗಿದೆ. ಮ್ಯಾಸ ನಾಯಕ ಸಮುದಾಯದ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ರೆ ಮಾತ್ರ ಬೆಂಬಲಿಸುವುದಾಗಿ ಕೆಲ ಮುಖಂಡರು ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಸಿದ್ದಾರೆ‌.

ಚುನಾವಣೆ ಬಂತು ಅಂದ್ರೆ ಪಕ್ಷದ  ಅಭ್ಯರ್ಥಿಯನ್ನು ಗೆಲ್ಲಿಸಲು ಜಾತಿ ಲೆಕ್ಕಾಚಾರ ಹಾಕೋದು ಹಳೆಯ ವಿಚಾರ. ‌ಆದ್ರೆ ಚುನಾವಣೆ ಘೋಷಣೆಗೂ ಬೆನ್ನಲ್ಲೇ‌ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಆರಂಭವಾಗಿರುವ ವಿಘ್ನ ಬಗೆ ಬರೆಯುವ ಲಕ್ಷಣ ಕಾಣ್ತಿಲ್ಲ. ಎಸ್ಟಿ ಮೀಸಲಾತಿಯ ಮೊಳಕಾಲ್ಮೂರು ಕ್ಷೇತ್ರದಲ್ಲಿ, ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕ‌ ಎನ್ ವೈ ಗೋಪಾಲಕೃಷ್ಣ‌  ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರೋದು ಈ ಎಲ್ಲಾ ಬೆಳವಣಿಗೆಗೆ  ಪ್ರಮುಖ ಕಾರಣವಾಗಿದೆ.

ಗೋಪಾಲಕೃಷ್ಣ ಕಾಂಗ್ರೆಸ್‌ ಸೇರ್ಪಡೆ ವೇಳೆ ಪ್ರತಿಭಟನೆ: ಆತ್ಮಹತ್ಯೆಗೆ ಯತ್ನ

ಯೋಗಿಶ್‌ಬಾಬುಗೆ ಟಿಕೆಟ್‌ ಕೊಡಿ: 2018 ರಲ್ಲಿ ಮ್ಯಾಸನಾಯಕ ಸಮುದಾಯದ ಯೋಗೀಶ್‌ಬಾಬು ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸಚಿವ ಶ್ರೀರಾಮುಲು ವಿರುದ್ಧ ಸೆಣೆಸಾಡಿ ಸೋಲನ್ನಪ್ಪಿದ್ದರು. ಅಂದಿನಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಸಂಘಟಿಸಿ, ಪಕ್ಷವನ್ನು  ಕ್ಷೇತ್ರದಲ್ಲಿ ಗಟ್ಟಿಯಾಗಿಸಿದ್ದಾರೆ. ಆದ್ರೆ ಇದೀಗ ಪಕ್ಷದ ವರಿಷ್ಟರು ಹೊಸ ಅಭ್ಯರ್ಥಿಗೆ ಮಣೆ ಹಾಕೋದು ಸರಿಯಲ್ಲ. ಅಲ್ಲದೇ ಎಸ್ಟಿ ಮೀಸಲಾತಿ ಕ್ಷೇತ್ರವಾದ ಮೊಳಕಾಲ್ಮೂರಲ್ಲಿ  ಶೇಕಡ 70% ನಷ್ಟು ಮ್ಯಾಸನಾಯಕ ಮತದಾರರಿದ್ದೂ, ಅದೇ ಸಮುದಾಯದ ಯೋಗೇಶ್ ಬಾಬುಗೆ ಕಾಂಗ್ರೆಸ್ ಟಿಕೇಟ್ ನೀಡಬೇಕು. ಒಂದು ವೇಳೆ ಟಿಕೇಟ್ ತಪ್ಪಿದರೆ ಕಾಂಗ್ರೆಸ್ ಗೆ ಮತ ಹಾಕದಂತೆ ಜಾಗೃತಿ‌ ಮೂಡಿಸುವುದಾಗಿ  ಮ್ಯಾಸನಾಯಕ ಯುವ ಪಡೆಯ ಮುಖಂಡ ಬೋರಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಎಚ್ಚರಿಸಿದ್ದಾರೆ.

ಗೋಪಾಲಕೃಷ್ಣಗೆ ಮಣೆ ಹಾಕಬೇಡಿ:  ಕೂಡ್ಲಿಗಿ ಶಾಸಕ‌ ಎನ್ ವೈ ಗೋಪಾಲಕೃಷ್ಣ ಅಧಿಕಾರಕ್ಕಾಗಿ ಪಕ್ಷದಿಂದ ಪಕ್ಷಕ್ಕೆ ಜಂಪ್ ಆಗ್ತಿದ್ದಾರೆ. ಕಳೆದ ಬಾರಿ ಕೈಗೆ ಟಾಟಾ ಮಾಡಿ ಹೋಗಿದ್ದರು. ಹೀಗಾಗಿ ಇಂತವ್ರಿಗೆ ಮಣೆ ಹಾಕಬಾರದು. ಅಲ್ಲದೇ ಅಂದು ಪ್ರಭಾವಿ‌ ಸಚಿವ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೀಶ್ ಬಾಬು ಸ್ಪರ್ಧಿಸಿ, ಸೋತರು ಸಹ ಎದೆಗುಂದದೇ, ಪಕ್ಷ ನಿಷ್ಠೆಯಿಂದ ಪಕ್ಷ  ಸಂಘಟಿಸಿ, ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಮುನ್ನಡೆ ತಂದಿರುತ್ತಾರೆ. ಆದ್ದರಿಂದ ಈ ಬಾರಿ ಮ್ಯಾಸನಾಯಕ ಜನಾಂಗದ ದ್ವನಿಯಾಗಿಸುವ ನಿಟ್ಟಿನಲ್ಲಿ ಯೋಗೀಶ್ ಬಾಬುಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಸಮಾಜದ ಮುಖಂಡ ಪ್ರಶಾಂತ್ ಆಗ್ರಹಿಸಿದ್ದಾರೆ.

ಒಟ್ಟಾರೆ ಟಿಕೇಟ್ ಘೋಷಣೆಗೂ ಮುನ್ನವೇ ಮೊಳಕಾಲ್ಮೂರು ಕ್ಷೇತ್ರದಲ್ಲಿ ‌ ಜಾತಿ ಲೆಕ್ಕಾಚಾರ ಶುರುವಾಗಿದೆ‌.‌ ಹೀಗಾಗಿ ಈ ಕ್ಯಾಸ್ಟ್ ಫೀಲಿಂಗ್ ಅಭ್ಯರ್ಥಿಗಳಿಗೆ ತುಸು ಹೆಚ್ಚಾದಂತೆ ಕಾಣುತ್ತಿದೆ.

ಮೊಳಕಾಲ್ಮುರು ಟಿಕೆಟ್‌ ಕೈತಪ್ಪಿದ್ರೆ ಸೂಕ್ತ ನಿರ್ಧಾರ: ಪರೋಕ್ಷವಾಗಿ ಹೈಕಮಾಂಡ್‌ಗೆ ಎಚ್ಚರಿಕೆ ಕೊಟ್ಟ ಡಾ.ಯೋಗೀಶ್ ಬಾಬು

ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ: ಮೊಳಕಾಲ್ಮೂರು ಕ್ಷೇತ್ರದಲ್ಲಿ ಡಾ. ಯೋಗೇಶ್‌ ಬಾಬುಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು. ಬಿಜೆಪಿಯಿಂದ ಸೇರ್ಪಡೆಗೊಂಡಿರುವ ಎನ್‌.ವೈ. ಗೋಪಾಲಕೃಷ್ಣ (ಎನ್‌ವೈಜಿ) ಅವರಿಗೆ ಟಿಕೆಟ್‌ ನೀಡಬಾರದು ಎಂದು ಆಗ್ರಹಿಸಿ ಯೋಗೇಶ್‌ ಬಾಬು ಬೆಂಬಲಿಗರು ಗೋಪಾಲಕೃಷ್ಣ ಅವರ ಪಕ್ಷ ಸೇರ್ಪಡೆ ವೇಳೆಯಲ್ಲೇ ಬೆಂಗಳೂರಿನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಕಚೇರಿ ಎದುರು ಧರಣಿ ನಡೆಸಿದ್ದರು. ಇತ್ತೀಚೆಗೆ ಕೂಡ್ಲಿಗಿ ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗೋಪಾಲಕೃಷ್ಣ ಅವರು ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರ್ಪಡೆಗೊಂಡರು.

Latest Videos
Follow Us:
Download App:
  • android
  • ios