Asianet Suvarna News Asianet Suvarna News

ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ಅವರು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ  ಪ್ರತಿಕ್ರಿಯೆ ನೀಡಿದ್ದಾರೆ.

MLA Lakshmi Hebbalkar confirmed Laxman Savadi joining Congress gow
Author
First Published Apr 14, 2023, 12:07 PM IST

ಬೆಂಗಳೂರು (ಏ.14): ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆ ಅಸಮಾಧಾನ ಗೊಂಡಿರುವ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರೋದು ಪಕ್ಕಾ ಆಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್  ಅವರು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯನ್ನು ಖಚಿತ ಪಡಿಸಿದ್ದಾರೆ. ಈ ಬಗ್ಗೆ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ  ಪ್ರತಿಕ್ರಿಯೆ ನೀಡಿದ್ದಾರೆ.

ಲಕ್ಷ್ಮಣ ಸವದಿ ಆಗಮನದಿಂದ ನಮ್ಮ ಪಕ್ಷಕ್ಕೆ ಬಲ ಬರಲಿದೆ. ಅವರು ರಾಜ್ಯ ಮಟ್ಟದ ನಾಯಕ, ಪ್ರಭಾವಿ ನಾಯಕ. ಸವದಿ ಪಕ್ಷ ಸೇರ್ಪಡೆ ಕಿತ್ತೂರು ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ದೊಡ್ಡ ಬಲ ಬರಲಿದೆ. ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಜೊತೆಗೂ ಮಾತುಕತೆ ನಡೆದಿದೆ. ನಮ್ಮ ನಾಯಕರು ಕೂಡ ಅನಿಲ್ ಬೆನಕೆ ಜೊತೆಗೆ ಸಂಪರ್ಕದಲ್ಲಿದ್ದಾರೆ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

ಬಿಜೆಪಿಯ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಿದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಕಾಲಾಯ ತಸ್ಸೈ ನಮಃ ಎಂದರು. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಸಂಬಂಧ ಮಾತುಕತೆ ನಡೆದಿದೆ, ಎಲ್ಲವನ್ನೂ ಈಗಲೇ ಹೇಳಲು ಸಾಧ್ಯವಿಲ್ಲ. ಲಕ್ಷ್ಮಣ ಸವದಿ ಅವರ ಸೇರ್ಪಡೆ ಎಲ್ಲವೂ ಹೈಕಮಾಂಡ್‌  ಮಟ್ಟದಲ್ಲಿ ಬೆಳವಣಿಗೆ ಆಗ್ತಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್‌ಗೆ ದೊಡ್ಡ ಶಕ್ತಿ ಬರಲಿದೆ. ಅತೃಪ್ತರೆಲ್ಲರೂ ಈಗಾಗಲೇ ಕಾಂಗ್ರೆಸ್ ಗೆ ಬರುವ ಪ್ರಕ್ರಿಯೆ ಶುರುವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಮುಖಂಡರ ಜತೆ ಮಾತುಕತೆಗೆ ಬೆಂಗಳೂರಿಗೆ ಬಂದ ಲಕ್ಷ್ಮಣ್ ಸವದಿ, ರಹಸ್ಯ ಸ್ಥಳದಲ್ಲಿ ಡಿಕೆಶಿ

ಇನ್ನು ಈ ಎಲ್ಲ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಪಾಲಿಟಿಕ್ಸ್ ಬಗ್ಗೆ ತೋರಿಸುತ್ತಿದೆ. ಲಕ್ಷಣ ಸವದಿ ಆಪರೇಷನ್ ಸಕ್ಸಸ್  ಆಗಿದ್ದು,  ಬೆಳಗಾವಿಯಿಂದ ಬೆಂಗಳೂರಿನ ಎಚ್‌ಎಎಲ್‌ ಗೆ ಬಂದಿಳಿದು ನಂತರ ರಹಸ್ಯ ಸ್ಥಳಕ್ಕೆ ಲಕ್ಷ್ಮಣ್ ಸವದಿ ತೆರಳಿದ್ದಾರೆ. ಅಲ್ಲಿ ಸವದಿ , ಡಿಕೆ ಶಿವಕುಮಾರ್,  ರಣದೀಪ್ ಸುರ್ಜೇವಾಲ ಮಾತುಕತೆ ಮುಕ್ತಾಯವಾಗಿದ್ದು, ಅಲ್ಲಿಂದ ಸಿದ್ದರಾಮಯ್ಯ ನಿವಾಸಕ್ಕೆ ಮೂವರು ನಾಯಕರು ಮುಂದಿನ ಮಾತುಕತೆಗೆ ತೆರಳಿದ್ದಾರೆ.

ಮೂರು ದಿನಗಳ ಹಿಂದೆಯೇ ನಾನು ಬಿಜೆಪಿ ಬಿಟ್ಟು ಆಗಿದೆ: ಲಕ್ಷ್ಮಣ ಸವದಿ

ಇನ್ನು ಈಗಾಗಲೇ  ಲಕ್ಷ್ಮಣ ಸವದಿ  ಅವರು , ಕಾಂಗ್ರೆಸ್ ನಾಯಕರ ಜೊತೆ ಮಾತಕತೆ ಮಾಡಿದ್ದೇನೆ. ರಾಜೀನಾಮೆ ಕೊಟ್ಟ ಬಳಿಕ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ಮಾಡುತ್ತೇನೆ. ಕೆಲವು ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಅದಕ್ಕೆ ಒಪ್ಪಿದ್ರೆ ನಾನು ಇವತ್ತು ನಾಳೆ  ತೀರ್ಮಾನ ತೆಗೆದುಕೊಳ್ಳುತ್ತೇನೆ. ನನ್ನ ಉಪಮುಖ್ಯಮಂತ್ರಿ  ಮಾಡಿದ್ರು. ಯಾಕೆ ನನ್ನನ್ನು ಸಂಪುಟದಿಂದ ಕೈಬಿಟ್ಟರೋ ಗೊತ್ತಿಲ್ಲ. ನಾನು ಏನು ಅನಾಚಾರ ಮಾಡಿದ್ದೇನೆ? ಆತ್ಯಾಚಾರ ಮಾಡಿದ್ದೇನಾ. ಯಾಕೆ ತೆಗೆದಿದ್ದಾರೆ ಗೊತ್ತಿಲ್ಲ. ರಾಜ್ಯ ನಾಯಕರು ಹೈಕಾಂಡ್ ಗೆ ಮಿಸ್ ಗೈಡ್ ಮಾಡಿದ್ದಾರೆ.  ಮುಂದಿನ ತೀರ್ಮಾನ ಚರ್ಚಿಸಿ ತಿಳಿಸುತ್ತೇನೆ‌ ಎಂದು ಹೇಳಿದ್ದಾರೆ.

Follow Us:
Download App:
  • android
  • ios