Asianet Suvarna News Asianet Suvarna News

ಸರ್ಕಾರ ಕೆಡವಲು ಷಡ್ಯಂತ್ರ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್, 'ಕೈ' ಶಾಸಕ ಹೇಳಿದ್ದಿಷ್ಟು

136 ಜನ ಕಾಂಗ್ರೆಸ್ ಶಾಸಕರಿದ್ದಾರೆ, ಸ್ವತಂತ್ರ ಸರ್ಕಾರ ಇದೆ. ಹೀಗಿರುವಾಗ ಸರ್ಕಾರ ಬೀಳಿಸುವುದು ಅಸಾಧ್ಯದ ಮಾತು ಎಂದು ಹೇಳಿದ ಶಾಸಕ ಕದಲೂರು ಉದಯ್. 

MLA Kadalur Uday React to 50 Crore offer to Congress MLA's in Karnataka grg
Author
First Published Oct 28, 2023, 10:42 AM IST

ಮಂಡ್ಯ(ಅ.28):  ಸರ್ಕಾರ ಬೀಳಿಸಲು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಕದಲೂರು ಉದಯ್ ಅವರು, ನನ್ನನ್ನ ಯಾರು ಸಂಪರ್ಕ ಮಾಡಿಲ್ಲ. ಮೂರೇ ಮೂರು ಶಾಸಕರನ್ನ ಸೆಳೆದು‌‌ ರಾಜೀನಾಮೆ ಕೊಡಿಸೋದು‌ ದೊಡ್ಡ ಕಷ್ಟ. ಸರ್ಕಾರ ತೆಗಿತೀವಿ ಅನ್ನೋದು ತಿರುಕನ‌ ಕನಸ್ಸು ಅಂತ ಹೇಳಿದ್ದಾರೆ. 

ಇಂದು(ಶನಿವಾರ)ಮಂಡ್ಯದ ಮದ್ದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕದಲೂರು ಉದಯ್ ಅವರು, 136 ಜನ ಕಾಂಗ್ರೆಸ್ ಶಾಸಕರಿದ್ದಾರೆ, ಸ್ವತಂತ್ರ ಸರ್ಕಾರ ಇದೆ. ಹೀಗಿರುವಾಗ ಸರ್ಕಾರ ಬೀಳಿಸುವುದು ಅಸಾಧ್ಯದ ಮಾತು ಎಂದು ಹೇಳಿದ್ದಾರೆ. 

ಕಾಂಗ್ರೆಸ್‌ ಶಾಸಕರಿಗೆ ಆಫರ್: ತಮ್ಮ ಎಂಎಲ್‌ಎಗಳಿಗೆ ಖಡಕ್‌ ಎಚ್ಚರಿಕೆ ನೀಡಿದ ಡಿಕೆಶಿ

ಈ ಹಿಂದೆ ಮೈತ್ರಿ ಸರ್ಕಾರದ ಬೀಳಿಸಲು ನೀವು ಶ್ರಮಪಟ್ಟಿದ್ರಿ ಎಂಬ ಮಾತಿಗೆ ಕದಲೂರು ಉದಯ್ ನಸು ನಕ್ಕು ಅದೆಲ್ಲಾ ಮುಗಿದ ಅಧ್ಯಾಯ, ಹಿಂದೆ ಇದ್ದ ಸರ್ಕಾರಕ್ಕೆ ಬಹುಮತ ಇರಲಿಲ್ಲ. ಇಂದಿನ ಸರ್ಕಾರಕ್ಕೆ ಜನರೇ ಬಹುಮತ ಕೊಟ್ಟಿದ್ದಾರೆ. ಹೆಚ್ಡಿಕೆಗೆ ಮಾಡಿದ ತಪ್ಪು, ಅವರ ನಡೆದು‌ಕೊಂಡ ರೀತಿಯಿಂದ ಸರ್ಕಾರ ಕಳೆದುಕೊಂಡ್ರು.ಇವತ್ತು ಈ ಸರ್ಕಾರ ಬಲಿಷ್ಠವಾಗಿದ್ದು, ಯಾರು ಅಲ್ಲಾಡಿಸಲು ಆಗಲ್ಲ. ಕೆಲ‌ ನಿರುದ್ಯೋಗಿಗಳು ಟೈಮ್‌ಪಾಸ್‌ಗೆ ಸರ್ಕಾರ ತೆಗಿತೀವಿ ಅಂತ ಹೇಳಿದ್ದಾರೆ. ಅವರ ಮಾತು ಕೇಳಿ ರವಿಕುಮಾರ್ ಹೇಳಿದ್ದಾರೆ‌ ಅನ್ಸುತ್ತೆ ಅಷ್ಟೇ ಎಂದು ಹೇಳಿದ್ದಾರೆ. 

ನನ್ನನ್ನ ಯಾರು ಸಂಪರ್ಕ‌ ಮಾಡಿಲ್ಲ. 50 ಕೋಟಿ ಕೊಟ್ಟರೇ ಹೊತ್ಕೊಂಡು ಹೋಗೋಕೆ ಆಗುತ್ತಾ. 50 ಕೋಟಿ ಕೊಡ್ತೀನಿ ಅನ್ನೋದು ಗಾಳಿ ಸುದ್ದಿನೆ. ಯಾರೋ ಕೆಲಸ ಇಲ್ಲದವರು ಕ್ರಿಯೇಟ್ ಮಾಡಿದ್ದಾರೆ, ಅದನ್ನ ನಿಜಾ ಅಂತಾ ರವಿಕುಮಾರ್ ನಿಮ್ಮ ಮುಂದೆ ಹೇಳಿದ್ದಾರೆ ಅನ್ಸುತ್ತೆ ಎಂದು ಹೇಳಿದ್ದಾರೆ. ಶಾಸಕ ಕದಲೂರು ಉದಯ್ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರವಹಿಸಿದ್ದರು.

Follow Us:
Download App:
  • android
  • ios