ಬಾಂಬ್ ಸ್ಫೋಟ ಪ್ರಕರಣ: ಸಿಎಂ ರಾಜೀನಾಮೆಗೆ ಶಾಸಕ ಬಸನಗೌಡ ಯತ್ನಾಳ್ ಒತ್ತಾಯ
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ನಿಜ, ಇದನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸೋದು ಬೇಡ, ಟೆಸ್ಟ್ ಅನಾವಶ್ಯಕ ಎಂದಿದ್ದೆ. ಇದೀಗ ಅದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ವಿಜಯಪುರ (ಮಾ.03): ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ನಿಜ, ಇದನ್ನು ಎಫ್ ಎಸ್ ಎಲ್ ಪರೀಕ್ಷೆಗೆ ಒಳಪಡಿಸೋದು ಬೇಡ, ಟೆಸ್ಟ್ ಅನಾವಶ್ಯಕ ಎಂದಿದ್ದೆ. ಇದೀಗ ಅದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದು ನಿಜ ಎಂದು ನಾನೇ ಮೊದಲು ಟ್ವಿಟ್ ಮಾಡಿದ್ದೆ. ಆದರೆ ಖರ್ಗೆ ಹಾಗೂ ಜಿ.ಪರಮೇಶ್ವರ ಸಮರ್ಥನೆ ಮಾಡಿದ್ದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ನಾಸಿರ್ ಹುಸೇನ್ ಮೇಲೆ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಯೋತ್ಪಾದನಾ ಕೃತ್ಯಗಳಿಗೆ ಕರ್ನಾಟಕ ಸಂರಕ್ಷಿತ ತಾಣವಾದಂತಾಗಿದೆ. ರಾಜ್ಯದಲ್ಲಿ ಭಯೋತ್ಪಾದನೆ ಇಂಬು ಕೊಡುತ್ತಿವೆ, ಎನ್.ಐ.ಎ ತನಿಖೆ ಮಾಡುತ್ತಿದ್ದು, ಬ್ರ್ಯಾಂಡ್ ಬೆಂಗಳೂರು ಅಲ್ಲಾ, ಬಾಂಬ್ ಬೆಂಗಳೂರು ಎಂಬಂತಾಗಿದೆ. ಕುಕ್ಕರ್ ಬಾಂಬ್ ಸ್ಪೋಟದಲ್ಲೂ ಕಾಂಗ್ರೆಸ್ ನವರು ಹೀಗೆ ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಅವರಿಗೆ ಇವೆಲ್ಲ ನಿಭಾಯಿಸಲು ಆಗದಿದ್ದರೆ ರಾಜೀನಾಮೆ ನೀಡಬೇಕೆಂದು ಯತ್ನಾಳ ಒತ್ತಾಯಿಸಿದರು. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ವಿಚಾರದಲ್ಲಿ ಸರಿಯಾಗಿ ತನಿಖೆ ಮಾಡಲಿಲ್ಲ ಎಂದು ಆರೋಪಿಸಿದರು.
ಬಿಜೆಪಿಯವರು ಭಾವನೆಯ ಮೇಲೆ ರಾಜಕೀಯ ಮಾಡುತ್ತಾರೆ: ಡಿ.ಕೆ.ಶಿವಕುಮಾರ್
ಇನ್ನು, ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯತ್ನಾಳ, ರಾಜ್ಯ ಪ್ರಯೋಗ ಶಾಲೆಯಾಗಿದೆ. ಜನನಿಬಿಡ ಸ್ಥಳ, ಮಾರುಕಟ್ಟೆ, ಸಿನೆಮಾ ಹಾಲ್ ನಲ್ಲಿ ಆಗಿದ್ದರೆ ಅನಾಹುತವಾಗುತ್ತಿತ್ತು. ಇವೆಲ್ಲ ನಿಭಾಯಿಸಲು ಆಗದಿದ್ದರೆ ಮನೆಗೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಮೇಶ್ವರ ಹೊಟೇಲ್ ನಲ್ಲಿ ಶುಕ್ರವಾರ ದಿನವೇ ಉದ್ದೇಶ ಪೂರ್ವಕವಾಗಿ ಬ್ಲಾಸ್ಟ್ ಮಾಡಿದ್ದಾರೆ. ಅಯೋಧ್ಯ ರಾಮ ಮಂದಿರ ನಿರ್ಮಾಣವಾದ ಕಾರಣ ಹೀಗೆ ಮಾಡಿದ್ದಾರೆ. ಇವರೆಲ್ಲ ನಾಶವಾಗೋ ಕಾಲ ಬಂದಿದೆ ಎಂದರು.
ರಾಮೇಶ್ವರ ಹೊಟೇಲ್ ಸ್ಪೋಟವನ್ನು ಭಜರಂಗ ದಳದ ಮೇಲೆ ಹಾಕುವವರಿದ್ದರು ಅಯೋಗ್ಯ ನನ್ಮಕ್ಕಳು ಎಂದು ಪರೋಕ್ಷವಾಗಿ ಕಾಂಗ್ರೆಸ್ ನವರಿಗೆ ಅಯೋಗ್ಯ ನನ್ಮಕ್ಕಳು ಎಂದು ಯತ್ನಾಳ ಕಿಡಿಕಾರಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ, ಸಮಾನ ನಾಗರಿಕ ಕಾಯ್ದೆ ಜಾರಿ ಮಾಡುತ್ತೇವೆ, ಒಂದು ಕುಟುಂಬಕ್ಕೆ ಎರಡೇ ಮಕ್ಕಳು ಕಾನೂನು ಜಾರಿ ಮಾಡುತ್ತೇವೆ, ಯಾರಿಗೆ ಪಾಕಿಸ್ತಾನ್ ಮೇಲೆ ಪ್ರೀತಿ ಇದ್ರೆ ಅವರು ಪಾಕಿಸ್ತಾನಕ್ಕೆ ಹೋಗಲಿ. ಪಾಕಿಸ್ತಾನ್ ಜಿಂದಾಬಾದ್ ಎನ್ನುವವರು ಅಲ್ಲಿ ಹೋಗಿ ಎಂದು ವಾಗ್ದಾಳಿ ನಡೆಸಿದರು.
ಗ್ಯಾರಂಟಿ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ: ಸಿದ್ದರಾಮಯ್ಯ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ವಿಚಾರದಲ್ಲಿ ಸ್ಪೀಕರ್ ಯು.ಟಿ.ಖಾದರ್ ಖಡಕ್ ಆಗಿ ಮಾತನಾಡಿ ಎಂದರು. ನಾನು ಅವರಿಗೆ ಅಭಿನಂದನೆ ಸಲ್ಲಿಸುವೆ. ಮಯನ್ಮಾರ್ ನಲ್ಲಿ ರೋಹಿಂಗ್ಯಾಗಳನ್ನು ಹೊಡೆದು ಹೊರ ಹಾಕಿದಂತೆ ಇಲ್ಲಿಯೂ ಹೊಡೆದು ಹೊರ ಹಾಕಬೇಕಾಗುತ್ತದೆ ಎಂದು ದೇಶದ್ರೋಹಿಗಳಿಗೆ ಪಾಕ್ ಪರ ಘೋಷಣೆ ಕೂಗುವವರಿಗೆ ಯತ್ನಾಳ ಎಚ್ಚರಿಕೆ ನೀಡಿದರು.