ಹಣ ಹಂಚುವುದು ಕಾಂಗ್ರೆಸ್‌ ಸಂಸ್ಕೃತಿ : ಡಾ. ಕೆ. ಸುಧಾಕರ್

  • ಉಪ ಚುನಾವಣೆಗಳಲ್ಲಿ ಹಣದ ಹೊಳೆ ಹರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ
  • ಜನತೆಯಲ್ಲಿ ನಮ್ಮ ಅಭಿವೃದ್ಧಿ, ಗುರಿಗಳನ್ನು ಇಟ್ಟುಕೊಂಡು ಮನಸ್ಸು ಗೆಲ್ಲುವುದು ಬಿಜೆಪಿ ಕಾರ್ಯ 
minister Sudhakar slams Congress Leaders at hanagal By Election Campaign snr

ಹಾನಗಲ್ಲ (ಅ.25):  ಉಪ ಚುನಾವಣೆಗಳಲ್ಲಿ (By Election) ಹಣದ ಹೊಳೆ ಹರಿಸುವುದು ಕಾಂಗ್ರೆಸ್‌ನ (congress) ಸಂಸ್ಕೃತಿ, ಜನತೆಯಲ್ಲಿ ನಮ್ಮ ಅಭಿವೃದ್ಧಿ, ಗುರಿಗಳನ್ನು ಇಟ್ಟುಕೊಂಡು ಮನಸ್ಸು ಗೆಲ್ಲುವುದು ಬಿಜೆಪಿ (BJP) ಕಾರ್ಯ ಎಂದು ಆರೋಗ್ಯ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ (Dr K Sudhakar) ಹೇಳಿದರು.

ಹಾನಗಲ್ಲ ವಿಧಾನಸಭಾ ಉಪ ಚುನಾವಣೆ (Hanagal By Election) ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ (Shivaraj Sajjanar) ಪರ ಭಾನುವಾರ ಪಟ್ಟಣದಲ್ಲಿ ರೋಡ್‌ ಶೋ (Road show) ಮೂಲಕ ಮತಯಾಚನೆ ವೇಳೆ ಮಾತನಾಡಿದರು.

ಗೋಣಿಚೀಲದಲ್ಲಿ ಹಣ ಹಂಚಿದವರು ಯಾರು?: ಡಿಕೆಶಿಗೆ ಸುಧಾಕರ್‌ ಪ್ರಶ್ನೆ

ಬಿಜೆಪಿಯವರು (BJP) ಮನೆ ಮನೆಗೆ ತೆರಳಿ ಮತ ಕೇಳುತ್ತಿದ್ದೇವೆ. ಆದರೆ, ಕಾಂಗ್ರೆಸ್‌ನವರು (Congress) ಕುತಂತ್ರ ರಾಜಕಾರಣಕ್ಕೆ (Politics) ಹೊರಟಿದ್ದಾರೆ. ಅವರ ಬಣ್ಣದ ಮಾತುಗಳಿಗೆ ಯಾರೂ ಮರಳಾಗಬೇಡಿ. ಅ. 30ರಂದು ನಡೆಯುವ ಮತದಾನದ ದಿನದಂದು ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಮತ ನೀಡುವ ಮೂಲಕ ಬಿಜೆಪಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಹಾನಗಲ್ಲ ಕ್ಷೇತ್ರದ ಜನತೆ ಮುಗ್ಧರು ಹಾಗೂ ವಿದ್ಯಾವಂತರು. ಸಿ.ಎಂ. ಉದಾಸಿ (CM Udasi) ಕಾರ್ಯವೈಖರಿ ಶಿವರಾಜ ಸಜ್ಜನರ ಅವರಲ್ಲಿ ಕಾಣಲು ಈ ಬಾರಿ ಜನತೆ ಬಿಜೆಪಿ ಬೆಂಬಲಿಸಬೇಕು. ವಿಶ್ವದ 700 ಕೋಟಿ ಜನತೆಗೆ ವ್ಯಾಕ್ಸಿನ್‌ (Vaccine) ನೀಡಲಾಗಿದೆ. ಆದರೆ, ಮೋದಿ (Narendra Modi) ಅವರ ದೂರದೃಷ್ಟಿಪರಿಣಾಮ ಭಾರತದಲ್ಲಿಯೆ 100 ಕೋಟಿ ಜನರಿಗೆ ವ್ಯಾಕ್ಸಿನ್‌ ನೀಡಲಾಗಿದೆ. ಇದು ನಮ್ಮ ಸಾಧನೆ. ರಾಜ್ಯದಲ್ಲಿ ಮುಸ್ಲಿಮರನ್ನು (Muslim) ಓಲೈಸಿಕೊಳ್ಳಲು ಆರ್‌ಎಸ್‌ಎಸ್‌ (RSS) ದ್ವೇಷಿಸಲಾಗುತ್ತಿದೆಯೇ ವಿನಹ ಕಾಂಗ್ರೆಸ್‌ ಮತ್ತು ಜೆಡಿಎಸ್‌ನವರಿಗೆ (JDS) ಆರ್‌ಎಸ್‌ಎಸ್‌ನ ಸಂಕಲ್ಪ ತಿಳಿದಿಲ್ಲ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಮಾತನಾಡಿ, ಕಳೆದ 70 ವರ್ಷಗಳ ಕಾಂಗ್ರೆಸ್‌ ಅಧಿಕಾರದಲ್ಲಿ ನಡೆದ ನ್ಯೂನತೆಗಳನ್ನು ಸರಿಪಡಿಸಿದ ಪ್ರಧಾನಿ ನರೇಂದ್ರ ಮೋದಿ (Narendra modi) ಅವರಿಗೆ ಜನತೆ ಬಲತುಂಬಲು ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಈ ಬಾರಿ ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಬೇಕು. ಆ ಮೂಲಕ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಅದ್ಧೂರಿ ರೋಡ್‌ ಶೋ

ಪಟ್ಟಣದ ತಾರಕೇಶ್ವರ ದೇವಸ್ಥಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಡಾ. ಕೆ. ಸುಧಾಕರ (Dr K sudhakar), ರಾಜ್ಯ ಸಚಿವರಾದ ಮುನಿರತ್ನ (Muniratna), ಸಂಸದ ಶಿವಕುಮಾರ ಉದಾಸಿ (Shivakumar Udasi) ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪಕ್ಷದ ಕಾರ್ಯಕರ್ತರೊಂದಿಗೆ ದೇವಸ್ಥಾನದ (Temple) ಆವರಣದಿಂದ ಆರಂಭವಾದ ರೋಡ್‌ ಶೋ ಪೇಟೆಓಣಿ, ದತ್ತಾತ್ರೇಯ ಓಣಿ, ಗೌಳಿಗಲ್ಲಿ, ರಂಜನಿ ಚಿತ್ರಮಂದಿರ ಸರ್ಕಲ್‌, ರಾಣಿ ಚೆನ್ನಮ್ಮ ಮುಖ್ಯ ರಸ್ತೆ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಿಜೆಪಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಶಿವರಾಜ ಸಜ್ಜನರ ಅವರಿಗೆ ಮತ ನೀಡುವಂತೆ ಕೋರಿದರು.

ನನ್ನನ್ನು ಜೈಲಿಗೆ ಕಳಿಸಲಿ, ನಾನು ಸಿದ್ಧ: ಸುಧಾಕರ್‌ಗೆ ರಮೇಶ್ ಕುಮಾರ್ ತೀಕ್ಷ್ಣ ತಿರುಗೇಟು

ಸಂಸದ ಶಿವಕುಮಾರ ಉದಾಸಿ (Shivakumar Udasi), ಪ್ರಮುಖರಾದ ಎನ್‌. ರವಿಕುಮಾರ, ಭೋಜರಾಜ ಕರೂದಿ, ಕಲ್ಯಾಣಕುಮಾರ ಶೆಟ್ಟರ್‌, ರವಿರಾಜ ಕಲಾಲ, ಕೃಷ್ಣ ಈಳಿಗೇರ, ನಿಂಗಪ್ಪ ಗೊಬ್ಬೇರ, ಡಾ. ಸುನೀಲ ಹಿರೇಮಠ, ರವಿ ಪುರೋಹಿತ ಸೇರಿ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios