ಸಿದ್ದರಾಮಯ್ಯ ಸರ್ಕಾರದ ದಿಂಬು, ಹಾಸಿಗೆ ಹಗರಣ ಮುಚ್ಚಿ ಹಾಕಲಿಲ್ವಾ?: ಸಿದ್ದು ವಿರುದ್ಧ ಎಸ್‌ಟಿಎಸ್‌ ಗರಂ

*   ಸಿದ್ದರಾಮಯ್ಯ ಉಡಾಫೆ ಮಾತನಾಡ್ತಾರೆ: ಸಚಿವ ಎಸ್‌.ಟಿ.ಸೋಮಶೇಖರ್
 •  ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಶಾಸಕನಾಗಿದ್ದಾಗ ಹಗರಣ ಆಗಿತ್ತು 
 •  ಯಾವುದು ಸಿಒಡಿಗೆ ಕೊಟ್ರು ಯಾವ ಕೇಸ್ ಮುಚ್ಚಿಹಾಕಿದ್ರು ಮಾಹಿತಿ ಇದೆ ಎಂದ ಸೋಮಶೇಖರ್
 

Minister ST Somashekhar Slams on Siddaramaiah grg

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಳಗಾವಿ

ಬೆಳ​ಗಾ​ವಿ(ಮೇ.11): ಜಿಲ್ಲಾ ಡಿಸಿಸಿ ಬ್ಯಾಂಕ್(Belagavi DCC Bank) ಪ್ರಗತಿ ಪರಿಶೀಲನೆಗೆ ನಗರಕ್ಕೆ ಆಗಮಿಸಿದ್ದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್(ST Somashekhar) ವಿಪಕ್ಷ ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. 

ನಿನ್ನೆ(ಮಂಗಳವಾರ) ನಗರದಲ್ಲಿ ಮಾತನಾಡಿದ ಸಚಿವ ಎಸ್‌.ಟಿ.ಸೋಮಶೇಖರ್, 'ಸಿದ್ದರಾಮಯ್ಯ(Siddaramaiah) ಸುಮ್ಮನೇ ಉಡಾಫೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಸರ್ಕಾರ ಅವಧಿಯಲ್ಲಿ ಹಗರಣಗಳು(Scams) ಆಗಲಿಲ್ವಾ? ಸಿದ್ದರಾಮಯ್ಯ ಅವಧಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ(Department of Social Welfare) ಹಾಸಿಗೆ, ದಿಂಬು ಹಗರಣ ಏನಾಯ್ತು ಯಾವುದೇ ಹಗರಣ ಆಗಿದ್ರೆ ಸರಿಯಾದ ಮಾಹಿತಿ ಕೊಟ್ಟು ಹೇಳಬೇಕು. ಸಿದ್ದರಾಮಯ್ಯ ಸರ್ಕಾರ ಅವಧಿಯ ಹಗರಣ ಮುಚ್ಚಿ ಹಾಕಲಿಲ್ವಾ? ದಿಂಬು, ಹಾಸಿಗೆ ಹಗರಣದಲ್ಲಿ ಅವರೇನು ಮಾಡಲಿಲ್ವಾ? ನಾನು ಕಾಂಗ್ರೆಸ್ ಸರ್ಕಾರದಲ್ಲಿ ಆಗ ಎಂಎಲ್ಎ ಆಗಿದ್ದೆ ‌.ನಾನಿದ್ದಾಗಲೇ ಹಗರಣ ಆಗಿತ್ತು.‌ ಯಾವದು ಸಿಇಡಿಗೆ ಕೊಟ್ರು, ಯಾವ ಕೇಸ್ ಮುಚ್ಚಿ ಹಾಕಿದ್ರೂ ನಮಗೂ ಮಾಹಿತಿ ಇದೆ.‌ ಬೊಮ್ಮಾಯಿಯವರು(Basavaraj Bommai) ಯಾವುದೇ ಕಾರಣಕ್ಕೂ ಮುಚ್ಚು ಹಾಕುವಂತಹ ಕೆಲಸ ಮಾಡಲಿಲ್ಲ.‌ ಯಾವುದೇ ಆರೋಪ ಇದ್ದರೂ ತನಿಖೆ ಮಾಡುತ್ತಿದ್ದು ನಮ್ಮ ಪೊಲೀಸರು ಸಮರ್ಥರಿದ್ದಾರೆ.‌ತನಿಖೆ ಮಾಡಿ ಶಿಕ್ಷೆ ಕೊಡಿಸುವುದಕ್ಕೆ ಚಾಲನೆ ಮಾಡಿದ್ದಾರೆ ಎಂದರು.

ಸಹಕಾರಿ ಬ್ಯಾಂಕ್‌ಗಳಲ್ಲಿ ರಮೇಶ್‌ ಜಾರಕಿಹೊಳಿ ಕೋಟ್ಯಂತರ ಸಾಲ ಬಾಕಿ

ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗಳಿಗೆ ಟೂರ್ ಮಾಡಿ ರಿವ್ಯೂ ಮಾಡಲಿ

ರಾಜ್ಯ ಸರ್ಕಾರ ಯಾವುದೇ ಯೋಜನೆ ಸರಿಯಾಗಿ ಜಾರಿ ಮಾಡುತ್ತಿಲ್ಲ ಎಂಬ ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ತಿರುಗೇಟು ನೀಡಿದ್ದಾರೆ.  ಸಿದ್ದರಾಮಯ್ಯ ಎಲ್ಲಾ ಜಿಲ್ಲೆಗೆ ಟೂರ್ ಮಾಡಿ ಸರ್ಕಾರಿ ಕಾರ್ಯಕ್ರಮ ಅಧ್ಯಯನ ಮಾಡಲಿ. ಸರ್ಕಾರದ ಕಾರ್ಯಕ್ರಮ ರಿವ್ಯೂ ಮಾಡುವ ಅಧಿಕಾರ ಸಿದ್ದರಾಮಯ್ಯರಿಗಿದೆ‌. ಅವರು ಯಾವ ಜಿಲ್ಲೆಗಳಿಗೂ ಪ್ರವಾಸ ಕೈಗೊಳ್ಳಲ್ಲ.‌ಅವರು ಜಿಲ್ಲಾಧಿಕಾರಿ ಜೊತೆ ರಿವ್ಯೂ ಮಾಡಿದರೆ ಗೊತ್ತಾಗುತ್ತೆ‌. ಸಿದ್ದರಾಮಯ್ಯ ರಿವ್ಯೂನೂ ಮಾಡಲ್ಲ ಸರ್ಕಾರಿ ಕಾರ್ಯಕ್ರಮ ತಿಳಿದುಕೊಳ್ಳೋಕೂ ಹೋಗಲ್ಲ. ಬೆಳಗಾವಿ ಬಂದಾಗ ಒಂದು ಮಾತನಾಡ್ತಾರೆ, ಮೈಸೂರು ಬಂದಾಗ ಒಂದು ಮಾತನಾಡ್ತಾರೆ. ಸಿಎಂ ಒಳ್ಳೆಯ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.‌ ಎಲ್ಲಾ ಜನಸಾಮಾನ್ಯರು ಮೆಚ್ಚುವ ಜನಪರ ಕಾರ್ಯಕ್ರಮ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪ ಮಾಡಿದ ಯೋಜನೆ‌ ಇಂಪ್ಲಿಮೆಂಟ್ ಮಾಡ್ತಿದ್ದೇವೆ. ಬೊಮ್ಮಾಯಿಯವರು ಜನಸಾಮಾನ್ಯರಿಗೆ ಬೇಕಾದ ಯೋಜನೆ ಘೋಷಣೆ ಮಾಡಿ ಇಂಪ್ಲಿಮೆಂಟ್ ಮಾಡ್ತಿದ್ದಾರೆ. ಸಿಎಂ ಇನ್‌ಡಿವ್ಯೂಜಿಯಲ್ ರಿವ್ಯೂ ಮಾಡ್ತಿದ್ದಾರೆ.ಎಲ್ಲಾ ಮಂತ್ರಿಗಳು, ಜಿಲ್ಲಾಧಿಕಾರಿಗಳ ಸಭೆ ಮಾಡಿದ್ದಾರೆ. ಜಿಲ್ಲಾ ಪಂಚಾಯತ ಸಿಇಒಗಳ ಸಭೆ ಮಾಡಿದ್ದಾರೆ. ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಮಾಡ್ತಿದ್ದಾರೆ' ಎಂದರು.
 

Latest Videos
Follow Us:
Download App:
  • android
  • ios