Asianet Suvarna News Asianet Suvarna News

ನಾವ್ ಬೇರೆ ಪಕ್ಷದಿಂದ ಬಂದೋರು : ಅಶೋಕ್‌ ಪರ STS ಬ್ಯಾಟಿಂಗ್

  • ಬೆಂಗಳೂರು ಉಸ್ತುವಾರಿ ಸ್ಥಾನಕ್ಕಾಗಿ ಜಟಾಪಟಿ ಜೋರು
  • ಸಚಿವ ಆರ್.ಅಶೋಕ್ ಪರ ಎಸ್.ಟಿ.ಸೋಮಶೇಖರ್ ಬ್ಯಾಟಿಂಗ್
Minister ST Somashekar supports r ashok on Bengaluru in charge ministry issue snr
Author
Bengaluru, First Published Oct 10, 2021, 3:56 PM IST

ಬೆಂಗಳೂರು (ಅ.10) ಬೆಂಗಳೂರು (Bengaluru) ಉಸ್ತುವಾರಿ ಸ್ಥಾನಕ್ಕಾಗಿ ಜಟಾಪಟಿ  ನಡೆಯುತ್ತಿದ್ದು, ಸಚಿವ ಆರ್.ಅಶೋಕ್ (R Ashok) ಪರ ಎಸ್.ಟಿ.ಸೋಮಶೇಖರ್ (ST Somashekar) ಬ್ಯಾಟಿಂಗ್ ಮಾಡಿದ್ದಾರೆ.

ಮೈಸೂರಿನಲ್ಲಿಂದು (Mysuru) ಮಾತನಾಡಿದ ಸೋಮಶೇಖರ್,  ಸಚಿವ ಆರ್.ಅಶೋಕ್ ಸೀನಿಯರ್ ಮೋಸ್ಟ್ ಶಾಸಕರಿದ್ದಾರೆ. ನಾವೆಲ್ಲರೂ ಬೇರೆ ಪಕ್ಷದಿಂದ ಬಿಜೆಪಿಗೆ (BJP) ಬಂದವರು. ಆರ್.ಅಶೋಕ್ ಮೂಲ ಬಿಜೆಪಿಗರು ಅವರ ಬಗ್ಗೆ ಯಾರೂ ಮಾತನಾಡಬಾರದು  ಎಂದರು.

ಬೆಂಗಳೂರು ಉಸ್ತುವಾರಿಗಾಗಿ ಫೈಟ್, ಅಶೋಕ್ ವಿರುದ್ಧ ಬಿಜೆಪಿ ಶಾಸಕರೇ ತಿರುಗಿ ಬಿದ್ದಿದ್ಯಾಕೆ..?

ಹಾಗಂತ ಬೇರೆ ಪಕ್ಷದಿಂದ ಬಂದವರು ಎಂದು ವಿರೋಧ ಇಲ್ಲ. ಆರ್.ಅಶೋಕ್ ಬಿಜೆಪಿಯಲ್ಲಿ  ಸೀನಿಯರ್ ಶಾಸಕರಾಗಿರೋದ್ರಿಂದ ಅವರಿಗೆ ಕೊಡುವವರಿದ್ದಾರೆ‌. ಬೆಂಗಳೂರು ಉಸ್ತುವಾರಿ ನೀಡೊದು ಮುಖ್ಯಮಂತ್ರಿಗಳ ಪರಮಾಧಿಕಾರ. ಯಾವ ಜಿಲ್ಲೆಗೆ ಯಾರಿಗೆ ಉಸ್ತುವಾರಿ ನೀಡಬೇಕೆಂಬು ಅವರಿಗೆ ಗೊತ್ತು ಎಂದರು.

ಮುಖ್ಯಮಂತ್ರಿ ಅವರೇ ಸೂಕ್ತ ವ್ಯಕ್ತಿಗಳಿಗೆ ಉಸ್ತುವಾರಿ ನೀಡುತ್ತಾರೆ ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.

ಸಚಿವರಿಂದ ಸ್ತಬ್ದಚಿತ್ರಗಳ ವೀಕ್ಷಣೆ

ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ 2021 ನಡೆಯುತ್ತಿದ್ದು, ಜಂಬೂಸವಾರಿ ಮೆರವಣಿಗೆಗೆ ಸಿದ್ದವಾಗುತ್ತಿರುವ ಸ್ತಬ್ದಚಿತ್ರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್  ವೀಕ್ಷಣೆ ಮಾಡಿದರು.

ವಸ್ತು ಪ್ರದರ್ಶನದ ಆವರಣದಲ್ಲಿ ನಿರ್ಮಾಣವಾಗುತ್ತಿರುವ 6 ಸ್ಥಬ್ಧಚಿತ್ರಗಳನ್ನು ವೀಕ್ಷಿಸಿದರು.  ಅಧಿಕಾರಿಗಳಿಂದ ಸ್ತಬ್ಧಚಿತ್ರಗಳ (Tablo) ಮಾಹಿತಿ ಪಡೆದ ಉಸ್ತುವಾರಿ ಸಚಿವರು 
ಮುಡಾದಿಂದ ನಿರ್ಮಾಣವಾಗುತ್ತಿರುವ ಗುಂಪು ಮನೆ ಕುರಿತು ಸ್ತಬ್ಧಚಿತ್ರದ ಪೋಸ್ಟರನ್ನು ವೀಕ್ಷಣೆ ಮಾಡಿದರು.

ಮುಡಾ ಅಧ್ಯಕ್ಷ ನಟೇಶ್  ಉಸ್ತುವಾರಿ ಸಚಿವರಿಗೆ ಸ್ಥಬ್ಧಚಿತ್ರಗಳ ಬಗ್ಗೆ ಮಾಹಿತಿ ನೀಡಿದ್ದು ಅಕ್ಟೋಬರ್ 13ರರೊಳಗೆ ಟ್ಯಾಬ್ಲೊ ನಿರ್ಮಾಣ ಕಂಪ್ಲೀಟ್ ಆಗಲಿದೆ ಎಂದರು. 

ಸಚಿವರಿಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಸಾಥ್ ನೀಡಿದರು.

ಅಶೋಕ್ ವಿರುದ್ಧ ಸ್ವಪಕ್ಷೀಯರೇ ಗರಂ

 

ಬೆಂಗಳೂರು ನಗರ ಉಸ್ತುವಾರಿ ಸಚಿವರ(Bengaluru Urban In Charge Minister) ನೇಮಕ ವಿಚಾರದಲ್ಲಿ ರಾಜ್ಯ ರಾಜಧಾನಿಯ ಬಿಜೆಪಿ ಶಾಸಕರು(BJP MLAs), ಸಚಿವರು ಹಾಗೂ ಕಂದಾಯ ಸಚಿವ(Revenue Minister) ಆರ್‌.ಅಶೋಕ್‌(R Ashok) ನಡುವಿನ ಮುಸುಕಿನ ಗುದ್ದಾಟ ವಿವಾದದ ಸ್ವರೂಪ ಪಡೆದಿದ್ದು, ಹಿರಿಯ ಸಚಿವ ವಿ.ಸೋಮಣ್ಣ(V Somanna) ಸೇರಿದಂತೆ ಹಲವು ಶಾಸಕ ಹಾಗೂ ಸಚಿವರು ಅಶೋಕ್‌ ವಿರುದ್ಧ ತೀವ್ರ ವಾಗ್ದಾಳಿಗೆ ಇಳಿದಿದ್ದಾರೆ.

ಉಸ್ತುವಾರಿ ಆಕಾಂಕ್ಷಿ ಎನ್ನಲಾದ ಆರ್‌.ಅಶೋಕ್‌ ವಿರುದ್ಧ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌(SR Vishwanath), ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr CN Ashwath Narayan) ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಶನಿವಾರ ವಸತಿ ಸಚಿವ ವಿ.ಸೋಮಣ್ಣ ಅವರು ಆರ್‌. ಅಶೋಕ್‌ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ‘ಆರ್‌.ಅಶೋಕ್‌ ಶಾಸಕನಾಗುವ ಮೊದಲೇ ಬೆಂಗಳೂರು ನಗರ ಉಸ್ತುವಾರಿ ಸಚಿವನಾಗಿದ್ದವನು ನಾನು. ಹಿರಿಯ ಹಾಗೂ ಅನುಭವ ಉಳ್ಳವನು. ಹೀಗಾಗಿ ನನ್ನನ್ನು ಉಸ್ತುವಾರಿ ಸ್ಥಾನಕ್ಕೆ ಪರಿಗಣಿಸಬೇಕು. ಅಶೋಕ್‌ ಸಾಮ್ರಾಟನಂತೆ ವರ್ತಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು. ಇದರ ಬೆನ್ನಲ್ಲೇ ತೋಟಗಾರಿಕೆ ಸಚಿವ ಮುನಿರತ್ನ ಅವರು ಸಹ ವಿ. ಸೋಮಣ್ಣ ಪರ ಬ್ಯಾಟ್‌ ಬೀಸಿದ್ದಾರೆ. ವಿವಾದದ ಗಾಂಭೀರ್ಯತೆ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai), ‘ಬೆಂಗಳೂರು ನಗರ ಉಸ್ತುವಾರಿ ಮಹತ್ವದ್ದಾಗಿದ್ದು. ಹೀಗಾಗಿ ಎಲ್ಲರೊಂದಿಗೂ ಚರ್ಚಿಸಿ ಸೌಹಾರ್ದಯುತವಾಗಿ ಆದಷ್ಟೂಶೀಘ್ರವಾಗಿ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದ್ದಾರೆ.

Follow Us:
Download App:
  • android
  • ios