Asianet Suvarna News Asianet Suvarna News

MLC Election:ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಟಿಕೆಟ್, ಕೈ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ

* ಮಗಳ ಮೇಲೆ ಅತ್ಯಾಚಾರ ಮಾಡಿದವನಿಗೆ ಟಿಕೆಟ್
* ವಿಧಾನಪರಿಷತ್ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗಂಭೀರ ಆರೋಪ
* ಕೈ ಅಭ್ಯರ್ಥಿಯ ಬಂಡವಾಳ ಬಚ್ಚಿಟ್ಟ ಸಚಿವ ಎಸ್‌ಟಿ ಸೋಮೇಶಖರ್

Minister ST Somashekar Rape Allegations on bengaluru-congress-mlc-candidate-kgf babu rbj
Author
Bengaluru, First Published Nov 29, 2021, 8:22 PM IST
  • Facebook
  • Twitter
  • Whatsapp

ಮಂಡ್ಯ, (ನ.29) : ಮಗಳ ಮೇಲೆ ಅತ್ಯಾಚಾರ ಮಾಡಿದ್ದ ಕೆಜಿಎಫ್ ಬಾಬುಗೆ ವಿಧಾನಪರಿಷತ್ ಚುನಾವಣೆಯಲ್ಲಿ(MLC Election) ಕಾಂಗ್ರೆಸ್ ಟಿಕೆಟ್ (Congress Ticket) ನೀಡಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ (ST Somashekar) ಗಂಭೀರ ಆರೋಪ ಮಾಡಿದ್ದಾರೆ. 

ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು(ನ.29) ಮಾತನಾಡಿದ ಅವರು, ಬೆಂಗಳೂರು ನಗರ (Bengaluru City) ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಚುನಾವಣೆಗೆ (MLC Election) ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಬಾಬು’ ಎಂದೇ (KGF Babu) ಹೆಸರುವಾಸಿಯಾಗಿರುವ ಯೂಸುಫ್‌ ಷರೀಫ್‌ (Yusuf Sharif) ವಿರುದ್ಧ ಸ್ಫೋಟಕ ಆರೋಪಳನ್ನ ಮಾಡಿದರು. 

Council Election: ಎಂಟಿಬಿಗಿಂತಲೂ ಶ್ರೀಮಂತ ಕೈ ಅಭ್ಯರ್ಥಿ, ಗುಜರಿ ವ್ಯಾಪಾರಿ ಕೋಟಿ ಕೋಟಿ ಅಧಿಪತಿ

ಹೆಂಡತಿ, ಮಗಳ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ಬಾಬು ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಠಾಣೆಯೊಂದರಲ್ಲಿ ಎಫ್‍ಐಆರ್ ದಾಖಲಾಗಿದೆ. ಇಂತಹವರಿಗೆ ಕಾಂಗ್ರೆಸ್‍ನವರು ಟಿಕೆಟ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

ಇಂತಹ ಪ್ರಕರಣಗಳನ್ನು ನೋಡಿ ಕೊಟ್ಟಿದ್ದಾರೋ ಏನೋ ಗೊತ್ತಿಲ್ಲ. ಅತ್ಯಾಚಾರ ಮಾಡಿದ್ದಾರೆ ಎಂಬುವುದಕ್ಕೆ ಎಫ್‍ಐಆರ್ ದಾಖಲಾಗಿರುವುದು ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಎಂದು ಸ್ಫೋಟಕ ಹೇಳಿಕೆ ನೀಡಿದರು. 

 ಡಿಸೆಂಬರ್ 2 ಅಥವಾ 3 ಬೆಂಗಳೂರಿನ ಎಲ್ಲಾ ಶಾಸಕರು, ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ. ನಾನು ಹೇಳಿರುವುದು ಯಾವುದು ಸುಳ್ಳಲ್ಲ, ಎಲ್ಲಾ ನಿಜ. ಡೆವಲಪರ್ಸ್ ಯಾರು ಎಷ್ಟು ರೂಪಾಯಿ ಕೊಟ್ಟಿದ್ದಾರೆ ಎಂದು ನಮ್ಮ ಬಳಿ ಸಾಕ್ಷ್ಯಗಳಿದೆ. ಆತ 1,700 ಕೋಟಿಯನ್ನು ಡಿಕ್ಲೇರ್ ಮಾಡಿದ್ದಾನೆ. ಡಿಸಿಪಿಗೆ ಫೋನ್ ಮಾಡಿ ಅವನ ಹಿನ್ನೆಲೆಯನ್ನು ತೆಗೆದುಕೊಂಡಿದ್ದೇನೆ. 1,700 ಕೋಟಿ ಅಫಿಶಿಯಲ್ ಆಗಿ ತೋರಿಸಿದ್ದಾನೆ, ಅದರ ಎರಡರಷ್ಟು ಇದೆ ಎಂದು ವಿವರಿಸಿದರು. 

ಆತನ ಮೇಲೆ 40 ಕೇಸ್‍ಗಳಷ್ಟು ಎಫ್‍ಐಆರ್ ಇದೆ. 5 ಕೋಟಿಯಿಂದ 60 ಕೋಟಿವರೆಗೂ ಆತ ಫ್ರಾಡ್ ಮಾಡಿದ್ದಾನೆ. ಅವನನ್ನು 3  ತಿಂಗಳು ಗಡಿಪಾರು ಮಾಡಿ, ಜೈಲಿನಲ್ಲೂ ಇಟ್ಟಿದ್ದೇವು ಎಂದು ಡಿಸಿಪಿ ಹೇಳಿದ್ದಾರೆ. ಇಂತಹವನನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಡಿದೆ. ಈ ಕೇಸ್‍ಗಳನ್ನು ನೋಡಿ ನನಗೆ ಗಾಬರಿಯಾಗಿದೆ ಎಂದು ಎಂದರು.

ಬಾಬು ನಾಪತ್ರದಲ್ಲಿ ತೋರಿಸಿದ ಆಸ್ತಿ
ಕೆಜಿಎಫ್‌ ಬಾಬು’ ಎಂದೇ (KGF Babu) ಹೆಸರುವಾಸಿಯಾಗಿರುವ ಯೂಸುಫ್‌ ಷರೀಫ್‌ (Yusuf Sharif) ಅವರು ಬೆಂಗಳೂರು ನಗರ (Bengaluru City) ಸ್ಥಳೀಯ ಸಂಸ್ಥೆಗಳ ಚುನಾವಣೆಗೆ (Election) ಕಾಂಗ್ರೆಸ್‌ ಅಭ್ಯರ್ಥಿಯಾಗಿ (Congress Candidate) ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದು, ಬರೋಬ್ಬರಿ 1,743 ಕೋಟಿ ರು. ಆಸ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದ ಅತಿ ಶ್ರೀಮಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದಾರೆ. ಕಳೆದ ಹೊಸಕೋಟೆ (hosakote) ವಿಧಾನಸಭೆ ಉಪಚುನಾವಣೆ ವೇಳೆ ಬಿಜೆಪಿ (BJP) ಅಭ್ಯರ್ಥಿಯಾಗಿದ್ದ ಹಾಲಿ ಸಚಿವ ಎಂಟಿಬಿ ನಾಗರಾಜ್‌ (MTB Nagaraj) ಸುಮಾರು 1200 ಕೋಟಿ ರು. ಆಸ್ತಿ ಘೋಷಿಸಿಕೊಂಡು ಈವರೆಗಿನ ಸಿರಿವಂತ ಅಭ್ಯರ್ಥಿ ಎನ್ನಿಸಿಕೊಂಡಿದ್ದರು. ಅವರ ದಾಖಲೆಯನ್ನು ಕೆಜಿಎಫ್‌ ಬಾಬು ‘ಧ್ವಂಸ’ ಮಾಡಿದ್ದಾರೆ.

Follow Us:
Download App:
  • android
  • ios