ನಮ್ಮ ಮಕ್ಕಳನ್ನು ದತ್ತು ಪಡೆದು ಬಿಜೆಪಿಗರು ಕಳೆದ ಬಾರಿ ಸರ್ಕಾರ ಮಾಡಿದ್ರು: ಸಚಿವ ಶಿವಾನಂದ ಪಾಟೀಲ
ನಮ್ಮ ಮಕ್ಕಳನ್ನು ದತ್ತು ಪಡೆದು ಬಿಜೆಪಿಗರು ಕಳೆದ ಬಾರಿ ಸರ್ಕಾರ ಮಾಡಿದ್ರು ಎಂದು ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಸಚಿವ ಶಿವಾನಂದ ಪಾಟೀಲ ವ್ಯಂಗ್ಯವಾಡಿದರು.
ಬಾಗಲಕೋಟೆ (ಏ.14): ನಮ್ಮ ಮಕ್ಕಳನ್ನು ದತ್ತು ಪಡೆದು ಬಿಜೆಪಿಗರು ಕಳೆದ ಬಾರಿ ಸರ್ಕಾರ ಮಾಡಿದ್ರು ಎಂದು ಜಮಖಂಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಪಕ್ಷದ ವಿರುದ್ಧ ಸಚಿವ ಶಿವಾನಂದ ಪಾಟೀಲ ವ್ಯಂಗ್ಯವಾಡಿದರು. ರಾಜ್ಯದಲ್ಲಿ ಬಿಜೆಪಿ ಎಂದೂ ತನ್ನ ಕಾಲಿನ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಎರಡು ಬಾರಿ ಅಧಿಕಾರಕ್ಕೆ ಬಂದಿದ್ರೆ ಅದು ಹಿಂದಿನ ಬಾಗಿಲಿನಿಂದ ಬಂದಿದ್ದು, ಮೊನ್ನೆದಂತೂ ನಾವು ಹಡದ (ಹೆತ್ತ) ಮಕ್ಕಳನ್ನು ದತ್ತು ಪಡೆದು ಸರ್ಕಾರ ಮಾಡಿದ್ರು/ ಆದ್ರೆ ಬಿಜೆಪಿಯವ್ರು ಸ್ವಂತ ಸರ್ಕಾರ ಮಾಡಲಿಲ್ಲ ಎಂದರು.
ಕರ್ನಾಟಕದಲ್ಲಿ ಎಂದೂ ಕೂಡಾ ಜನಾಭಿಪ್ರಾಯ ಬಿಜೆಪಿ ಪರ ಇಲ್ಲ. ಇಷ್ಟಾದರೂ ನಾವು ಲೋಕಸಭಾದಲ್ಲಿ ಬಾಗಲಕೋಟೆ, ವಿಜಯಪುರದಲ್ಲಿ ಸೋಲಬಾರದಿತ್ತು ಆದ್ರೆ ಸೋಲ್ತಿದಿವಿ. ಸೋತ್ರು ತಪ್ಪಿಲ್ಲ, ರಾಜಕಾರಣದಲ್ಲಿ ಸೋಲು-ಗೆಲುವು ಸ್ವಾಭಾವಿಕ. ಲಗ್ನ (ಮದುವೆ) ಆಗಿ ಕೆಲವರು ಒಂದೇ ವರ್ಷದಲ್ಲಿ ಮಕ್ಕಳನ್ನು ಹಡಿತಾರೆ (ಹೆರ್ತಾರೆ). ವಿಜಯಪುರದವ್ರು 25 ವರ್ಷ ಅಧಿಕಾರ ಮಾಡಿದ್ದಾರೆ. ಬಾಗಲಕೋಟೆಯವ್ರು 20 ವರ್ಷ ಅಧಿಕಾರ ಮಾಡಿದ್ದಾರೆ. ಆದ್ರೆ ಇವರಿಬ್ಬರೂ ಇದುವರೆಗೂ ಒಂದು ಹಡೆದಿಲ್ಲ (ಹೆತ್ತಿಲ್ಲ) ಎಂದು ಹೇಳಿದರು.
ಹತ್ತು ಕೆಜಿ ಅಕ್ಕಿ ಬೇಕಾ, ಬೇಡಾವಾ: ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿದ ಕೇಂದ್ರ ಸಚಿವ ಜೋಶಿ
ವಿಜಯಪುರ-ಬಾಗಲಕೋಟೆಯ ಬಿಜೆಪಿ ಅಭ್ಯರ್ಥಿಗಳು ತಮ್ಮ ಹೆಸರ ಮೇಲೆ ಮತ ಕೇಳಲ್ಲ. ಮೋದಿ ಹೆಸರಿನಲ್ಲಿ ಕೇಳ್ತಾರೆ, ಹಾಗಾದ್ರೆ ಇವರ್ಯಾಕೆ ಗಂಡ್ಸರಾಗಬೇಕು. ಗಂಡ್ಸಿದ್ರೆ, ಧಮ್ಮಿದ್ರೆ ತಮ್ಮ ಹೆಸರಿನಲ್ಲಿ ಕೇಳ್ತಿದ್ರು. ನಮ್ಮ ಅಪ್ಪನಿಗೆ ಹುಟ್ಟಿದ್ರೆ, ನಮ್ಮ ಅಪ್ಪನ ಹೆಸರಲ್ಲೇ ಮತ ಕೇಳಬೇಕು. ಕುಮಾರಸ್ವಾಮಿ ಸರ್ಕಾರ ಕಿತ್ತೋಗಬೇಕಾದ್ರೆ ನಮ್ಮ ಮಕ್ಕಳನ್ನೆ ತಗೊಂಡು ಮಾಡಿದ್ರು. ನಮ್ಮ ಹಿರಿಯರು ಹಿಡಕೊಂಡ ಬರಾಕ್ ಹೋದ್ರು ಬರಲಿಲ್ಲ ಅವರು ಎಂದು ರಮೇಶ್ ಜಿಗಜಿಣಗಿ-ಪಿ.ಸಿ. ಗದ್ದಿಗೌಡರ ವಿರುದ್ದ ಶಿವಾನಂದ ಪಾಟೀಲ ವಾಗ್ದಾಳಿ ನಡೆಸಿದರು.