ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಕುಟುಂಬದ ಭಾಗ. ಅವರು ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ‘ಸಿಎಂ ಸ್ಥಾನಕ್ಕೆ ಕೂರಿಸೋದೂ ಗೊತ್ತು, ಇಳಿಸೋದೂ ಗೊತ್ತು’ ಎಂಬ ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ.
ಬೆಂಗಳೂರು (ಜು.29): ಕಾಂಗ್ರೆಸ್ ನಾಯಕರಾದ ಬಿ.ಕೆ. ಹರಿಪ್ರಸಾದ್ ಕಾಂಗ್ರೆಸ್ ಕುಟುಂಬದ ಭಾಗ. ಅವರು ಹಲವು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನು ಮಾಡಿದ್ದಾರೆ. ‘ಸಿಎಂ ಸ್ಥಾನಕ್ಕೆ ಕೂರಿಸೋದೂ ಗೊತ್ತು, ಇಳಿಸೋದೂ ಗೊತ್ತು’ ಎಂಬ ಅವರ ಹೇಳಿಕೆ ಕರ್ನಾಟಕಕ್ಕೆ ಸಂಬಂಧಪಟ್ಟಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ್ಳೆಯ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ ಎಂದು ಲೋಕೋಪಯೋಗಿ ಸಚಿವ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ. ಆ ಬಗ್ಗೆ ಹೈಕಮಾಂಡ್‌ಗೆ ಕೇಳಬೇಕು. ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಬೇಕಾಗಿಲ್ಲ. ಅವರು ಹೇಳಿರುವುದು ಬೇರೆ ರಾಜ್ಯಗಳ ವಿಚಾರ. ಕೆಲವು ಸಮುದಾಯಗಳಿಗೆ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ’ ಎಂದು ಹೇಳಿದರು.
ಮುಂಬರುವ ದಿನಗಳಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ: ಮಲ್ಲಿಕಾರ್ಜುನ ಖರ್ಗೆ
ಮುಂದಿನ ಸಲ ನಾನು ಸಿಎಂ ರೇಸಲ್ಲಿ: ‘ಮುಂದಿನ ಸಲ ನಾನು ಸಿಎಂ ರೇಸಲ್ಲಿ ಇರುತ್ತೇನೆ’ ಎಂದು ಸಚಿವ ಹಾಗೂ ಕೆಪಿಸಿಸಿ ಕಾರಾರಯಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಅವರು ಮಾತನಾಡಿ, ‘ಇನ್ನು ಪ್ರಸ್ತುತ ಮುಖ್ಯಮಂತ್ರಿ ರೇಸ್‌ನಲ್ಲಿ ನಾನು ಇಲ್ಲ. ಮುಂದಿನ ಬಾರಿಗೆ ನಾನೂ ಕೂಡ ರೇಸ್‌ನಲ್ಲಿ ಇರುತ್ತೇನೆ’ ಎಂದು ಹೇಳಿದರು. ‘ಆಗಸ್ಟ್ 2ಕ್ಕೆ ಹೈಕಮಾಂಡ್ ಸಭೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿವೆ’ ಎಂದರು.
ಸುರಂಗ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ: ರಾಜಧಾನಿ ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದಲೇ ನಿರ್ಮಾಣ ಮಾಡುವ ಚಿಂತನೆಯಿದ್ದು, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆದ್ದಾರಿಯನ್ನು ಕೇಂದ್ರ ಸರ್ಕಾರದಿಂದಲೇ ನಿರ್ಮಿಸಲಾಗುತ್ತದೆ. ನಮ್ಮಿಂದ ನಿರಾಪೇಕ್ಷಣೆ (ಎನ್‌ಒಸಿ) ಪತ್ರ ನೀಡಬೇಕಾಗುತ್ತದೆ.
ನಗರದ ಹೊರ ವಲಯಗಳನ್ನು ಸಂಪರ್ಕಿಸಲು ಪ್ರಮುಖ ಮಾರ್ಗಗಳಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಕೇಂದ್ರ ಸಚಿವರೂ ಉತ್ಸಾಹ ತೋರಿದ್ದಾರೆ ಎಂದರು. ಇದಕ್ಕೂ ಮೊದಲು ದೆಹಲಿಯಲ್ಲಿ ಮಾತನಾಡಿದ ಸಚಿವ ಸತೀಶ್, ಪೀಣ್ಯದಿಂದ ಹೊಸೂರು ರಸ್ತೆವರೆಗೆ 40 ಕಿ.ಮೀ. ಉದ್ದದ ಸುರಂಗ ಮಾರ್ಗ ಮತ್ತು ಹೆಬ್ಬಾಳದಿಂದ ಕೆ.ಆರ್. ಪುರದವರೆಗೆ 22 ಕಿ.ಮೀ. ಉದ್ದದ ಸುರಂಗ ಮಾರ್ಗ ಸೇರಿದಂತೆ ಒಟ್ಟು 62 ಕಿ.ಮೀ. ಉದ್ದದ ಮೂರು ಪಥದ ರಸ್ತೆ ನಿರ್ಮಿಸುವ ಪ್ರಸ್ತಾವನೆ ಇದೆ. ಇದಿನ್ನೂ ಪ್ರಾಥಮಿಕ ಹಂತದ ಪ್ರಸ್ತಾವನೆ ಎಂದು ಹೇಳಿದರು.
ವಿರೋಧಿಗಳೊಂದಿಗೆ ರಾಜಕೀಯ ಮಾಡೋಣ: ಶಾಸಕ ವಿಜಯೇಂದ್ರ
ಹೊರವರ್ತುಲ ರಸ್ತೆ ಪ್ರತ್ಯೇಕ ಪ್ರಸ್ತಾವನೆಗೆ ಕೇಂದ್ರ ಸೂಚನೆ: ಕಳೆದ 10 ವರ್ಷದಿಂದ ಕೇಂದ್ರದಿಂದ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಆಗುವುದು ಬಾಕಿ ಇದೆ. ಕೇಂದ್ರ ರಾಜ್ಯ ಹೆದ್ದಾರಿ ಸಂಬಂಧ ಪ್ರಸ್ತಾವನೆಗಳು ಬೇರೆ ಬೇರೆ ರೀತಿ ಇದೆ. ಈ ಬಗ್ಗೆ ಕೇಂದ್ರದ ಪ್ರತಿನಿಧಿಗಳ ಜತೆ ನಡೆಸಿದ ಒನ್ ಟು ಒನ್ ಸಭೆ ಯಶಸ್ವಿಯಾಗಿಲ್ಲ. ಶಿವಮೊಗ್ಗ, ಗದಗ, ರಾಯಚೂರು ಹೊರವರ್ತುಲ ರಸ್ತೆಗಳಿಗೆ ಪ್ರಸ್ತಾವನೆ ಬೇರೆ ಬೇರೆ ರೀತಿ ಪ್ರಸ್ತಾವನೆ ಕಳುಹಿಸಲು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನಿಸಬೇಕು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ ಅವರು, ದೆಹಲಿಗೆ ಹೋಗಿದ್ದರಿಂದ ಸಂಪುಟ ಸಭೆ, ಶಾಸಕಾಂಗ ಸಭೆಯಲ್ಲಿ ಭಾಗವಹಿಸಲಾಗಿಲ್ಲ ಎಂದು ಹೇಳಿದರು.
