ಬೆಂಗಳೂರು, (ನ. 25): ಸಚಿವ ರಮೇಶ್ ಜಾರಕಿಹೊಳಿ ಅವರು ದೆಹಲಿಗೆ ಹಾರಿದ್ದಾರೆ. ಸಂಪುಟ ಕಸರತ್ತಿನ ನಡುವೆಯೇ ಮೇಲಿಂದ ಮೇಲೆ ರಮೇಶ್ ಜಾರಕಿಹೊಳಿ ದೆಹಲಿಗೆ ತೆರಳುತ್ತಿರುವುದು ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. 

ಇತ್ತೀಚೆಗಷ್ಟೆ ಸಂಪುಟ ವಿಸ್ತರಣೆ ಸಂಬಂಧ ಸಿಎಂಗೂ ಮೊದಲೇ ಸಚಿವ ರಮೇಶ್ ಜಾರಕಿಹೊಳಿ ದೆಹಲಿಗೆ ತಲುಪಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಅಲ್ಲದೇ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನ ಭೇಟಿ ಮಾಡಿ ಬೆಂಗಳೂರಿಗೆ ವಾಪಸ್ ಆಗಿದ್ದರು. ಇದಾದ ಬಳಿಕ ಖುದ್ದ ಸಂತೋಷ್ ಅವರು ಬೆಂಗಳೂರಿಗೆ ಬಂದು ಸಿಎಂ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದ್ದರು. ಬಳಿಕ ರಮೇಶ್ ಜಾರಕಿಹೊಳಿ ಸಹ ಸಿಎಂ ಭೇಟಿ ಮಾಡಿದ್ದರು. 

ಸಿಎಂಗಿಂತ ಮೊದಲೇ ಹೋಗಿ ಕುಂತ ಸಾಹುಕಾರ: ದಿಲ್ಲಿಯಲ್ಲಿ ಜಾರಕಿಹೊಳಿ ನಡೆ ಕುತೂಹಲ

ಇದರು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದರ ಮುಂದುವರೆದ ಭಾಗವಾಗಿ ಮತ್ತೆ ದೆಹಲಿಗೆ ತೆರಳಿದರು. ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯಲ್ಲಿ ಸಿಟಿ ರವಿ ಕಚೇರಿಯ ಪೂಜೆ ಇದೆ. ಹೀಗಾಗಿ ನಾನು ಇವಾಗ ದೆಹಲಿಗೆ ಹೊರಟಿದ್ದೇನೆ. ನಾನು ಅಲ್ಲಿಗೆ ಹೊರಡುವ ಮುನ್ನವೇ ನಿಮಗೆ ಈ ಮಾತು ಹೇಳ್ತಿದ್ದೇನೆ. ಸಿಟಿ ರವಿ ನನಗೆ ನಾನು ಕಾಂಗ್ರೆಸ್ ಇದ್ದಾಗಿಲಿಂದಲೂ ಪರಿಚಯ.  ಅವರು ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಹೀಗಾಗಿ ಅವರ ಕಚೇರಿ ಪೂಜೆಗಾಗಿ ದೆಹಲಿಗೆ ಹೊರಟಿದ್ದೇನೆ ಎಂದು ಸ್ಪಷ್ಟಪಡಿಸಿದರು.