ಬೈ ಎಲೆಕ್ಷನ್ ಮತ ಎಣಿಕೆ ಪ್ರಕ್ರಿಯೆ: ಇತ್ತ ಸಿಎಂ ನಿವಾಸಕ್ಕೆ ಅಶೋಕ್ ದಿಢೀರ್ ಭೇಟಿ
ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದರಿಂತೆ ಸಚಿವರುಗಳು ದಿಢೀರ್ ಸಿಎಂ ಭೇಟಿ ಮಾಡಿದ್ದಾರೆ.
ಬೆಂಗಳೂರು, (ನ.10): ಆರ್‌ಆರ್ ನಗರ ವಿಧಾನಸಭಾ ಬೈ ಎಲೆಕ್ಷನ್ ಮತ ಎಣಿಕೆ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರು ಭಾರೀ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.
ಮುನಿರತ್ನ ಅವರ ಗೆಲುವು ಬಹುತೇಕ ಖಚಿತವಾಗುತ್ತಿದ್ದನ್ನು ತಿಳಿದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನೊಂದೆಡೆ ರಾಜರಾಜೇಶ್ವರ ನಗರದ ಉಸ್ತುವಾರಿ ಸಚಿವ ಆರ್. ಅಶೋಕ್ ಅವರು ದಿಢೀರ್ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಆರ್‌ಆರ್ ನಗರ, ಶಿರಾ ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಮತ್ತೆರೆಡು ಉಪಚುನಾವಣೆಗೆ ಸಿದ್ಧತೆ
ಅಶೋಕ್ ಅವರು ಸ್ವೀಟ್ ಬಾಕ್ಸ್ ಹಿಡಿದು ಸಿಎಂ ನಿವಾಸ ಕಾವೇರಿಗೆ ತೆರಳಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನ ಭೇಟಿ ಮಾಡಿದರು. ಸಿಎಂ ಮನೆ ಪ್ರವೇಶ ಮಾಡುವ ಮುನ್ನ ಅಶೋಕ್ ಮುಖದಲ್ಲಿ ಗೆಲುವಿನ ಮಂದಹಾಸ ಕಂಡುಬಂತು.
ಅಲ್ಲದೇ ಮಾಧ್ಯಮಗಳಿಗೆ ವಿಕ್ಟರಿ ಸಂಕೇತ ತೋರಿಸುತ್ತ ಸಿಎಂ ಮನೆ ಪ್ರವೇಶ ಮಾಡಿದರು. ಆರ್‌ಆರ್ ನಗರದಲ್ಲಿ ಮುನಿರತ್ನ ಅವರ ಗೆಲುವು ಬಹುತೇಕ ಪಕ್ಕಾ ಆದಂತಾಗಿದೆ. ಇದರಿಂದ ಕುಸುಮಾ ಅವರನ್ನ ಕಣಕ್ಕಿಳಿಸಿದ್ದ ಡಿಕೆ ಶಿವಕುಮಾರ್ ಅವರ ಎಲ್ಲಾ ಲೆಕ್ಕಾಚಾರಗಳು ಉಲ್ಟಾ ಆಗಿವೆ.