ಪ್ರಿಯಾಂಕ್ ಖರ್ಗೆ ಸೂಪರ್ ಸಿಎಂ ರೀತಿಯಲ್ಲಿ ವರ್ತನೆ: ಸಿ.ಟಿ ರವಿ ವಾಗ್ದಾಳಿ
ತಮ್ಮ ಇಲಾಖೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣದೆ ನೆನೆಗುದಿಗೆ ಬಿದ್ರೂ ಕೂಡಾ ಅವನ್ನೆಲ್ಲ ನಿರ್ಲಕ್ಷ ತೋರುತ್ತ ಅನ್ಯರ ಇಲಾಖೆಗಳಲ್ಲೇ ಪ್ರಿಯಾಂಕ್ ಖರ್ಗೆ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದ ಎಂಎಲ್‌ಸಿ ಸಿ.ಟಿ. ರವಿ
ಕಲಬುರಗಿ(ಜೂ.26): ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸೂಪರ್‌ಸಿಎಂ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಎಂಎಲ್‌ಸಿ ಸಿಟಿ ರವಿ ಪ್ರಿಯಾಂಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಇಲಾಖೆಯ ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣದೆ ನೆನೆಗುದಿಗೆ ಬಿದ್ರೂ ಕೂಡಾ ಅವನ್ನೆಲ್ಲ ನಿರ್ಲಕ್ಷ ತೋರುತ್ತ ಅನ್ಯರ ಇಲಾಖೆಗಳಲ್ಲೇ ಪ್ರಿಯಾಂಕ್ ಖರ್ಗೆ ಮೂಗು ತೂರಿಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ರಾಜ್ಯಕ್ಕೆ ವರವಾಗುವ ಬದಲು ಶಾಪವಾಗಿದೆ: ಸಿದ್ದು ಸರ್ಕಾರದ ವಿರುದ್ಧ ಹರಿಹಾಯ್ದ ಸಿ.ಟಿ.ರವಿ
ಎಲ್ಲಾ ಖಾತೆಯ ಪವರ್‌ಆಫ್ ಅಟಾರ್ನಿ (ಜಿಪಿಎ) ಪ್ರಿಯಾಂಕ್ ಖರ್ಗೆ ತಗೊಂಡಿದ್ದಾರೆ. ಯಾರೂ ಈ ಅಧಿಕಾರ ಕೊಟ್ಟಿಲ್ಲ ಅವರೇ ಸ್ವತಃ ತಗೊಂಡಿದ್ದು. ಸಿಎಂ ಖಾತೆಯಿಂದ ಹಿಡಿದು ಎಲ್ಲಾ ಖಾತೆಗಳಲ್ಲೂ ಖರ್ಗೆ ಕೈ ಆಡಿಸುತ್ತಾರೆ. ಆದರೆ ತಮ್ಮ ಖಾತೆಯ ಸಮಸ್ಯೆ ಬಗ್ಗೆ ಮಾತ್ರ ಡೋಂಟ್ ಕೇರ್' ಎಂದು ಟೀಕಿಸಿದರು.