ಕಾಂಗ್ರೆಸ್‌ನ ಸಿದ್ಧಾಂತ ಒಪ್ಪಿ ಬರುವ ಯಾರಿಗೇ ಆದರೂ ಸ್ವಾಗತವಿದೆ. ಪಕ್ಷ ತ್ಯಜಿಸಿದವರು ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಹಲವು ಮುಖಂಡರ ಸೇರ್ಪಡೆ ಬಗ್ಗೆ ಮಾತುಕತೆಯಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. 

ಬೆಂಗಳೂರು (ಆ.17): ಕಾಂಗ್ರೆಸ್‌ನ ಸಿದ್ಧಾಂತ ಒಪ್ಪಿ ಬರುವ ಯಾರಿಗೇ ಆದರೂ ಸ್ವಾಗತವಿದೆ. ಪಕ್ಷ ತ್ಯಜಿಸಿದವರು ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಹಲವು ಮುಖಂಡರ ಸೇರ್ಪಡೆ ಬಗ್ಗೆ ಮಾತುಕತೆಯಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು. ಬಾಂಬೆ ಬಾಯ್ಸ್‌ ಘರ್‌ ವಾಪ್ಸಿ ಬಗ್ಗೆ ಮಾತನಾಡಿದ ಅವರು, ಪಕ್ಷ ಬಿಟ್ಟವರನ್ನೂ ಒಳಗೊಂಡಂತೆ ಬಿಜೆಪಿ, ಜೆಡಿಎಸ್‌ನ ಹಲವು ಮುಖಂಡರ ಪಕ್ಷ ಸೇರ್ಪಡೆಗೆ ಮಾತುಕತೆಯಾಗಿದೆ. ಆದರೆ ಇನ್ನೂ ಈ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ’ ಎಂದರು. ಬದಲಾವಣೆ ಸಹಜ ಪ್ರಕ್ರಿಯೆಯಾಗಿದ್ದು ಅದಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕು. ಪಕ್ಷ ಸೇರ್ಪಡೆ ಬಗ್ಗೆ ಪಕ್ಷದ ನಾಯಕರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮಂಡ್ಯ ಲೋಕಸಭಾ ಚುನಾವಣೆಗೆ ಸ್ಥಳೀಯರೇ ಅಭ್ಯರ್ಥಿಗುವ ಸಾಧ್ಯತೆ ಹೆಚ್ಚಿದ್ದು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದರು.

ನೀರಿನ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ: ನಮ್ಮಲ್ಲಿ ನೀರಿನ ಲಭ್ಯತೆ ನೋಡಿಕೊಂಡು ತಮಿಳುನಾಡಿಗೆ ಎಷ್ಟು ನೀರು ಬಿಡಲು ಸಾಧ್ಯ ಅನ್ನೋದನ್ನು ತೀರ್ಮಾನ ಮಾಡಿ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು. ಕೋಡಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್‌ ನಿರ್ದೇ​ಶನ ಮತ್ತು ಎರಡೂ ರಾಜ್ಯಗಳಿಗೆ ನೀರು ಬಿಡುವ ಮಾನಿಟರಿಂಗ್‌ ಕಮಿಟಿ ಇರುವುದು ಕೇಂದ್ರ ಸರ್ಕಾರದಲ್ಲಿ. ನಾವು ಅವರಿಗೆ ಸಹಕಾರ ಕೊಟ್ಟಿಲ್ಲ ಎಂದು ನೆರೆಯ ರಾಜ್ಯದವರು ಸುಪ್ರೀಂ ಮೊರೆ ಹೋಗಿದ್ದಾರೆ ಎಂದರು.

ಬಸವರಾಜ ಯತ್ನಾಳ್‌ ಹೇಳಿಕೆ ಅಸಂಬದ್ಧ, ನಾವು ಗಟ್ಟಿಯಾಗಿದ್ದೇವೆ: ಸಚಿವ ಈಶ್ವರ ಖಂಡ್ರೆ

ನಮ್ಮಲ್ಲೂ ಸಹ ನೀರಿನ ಸಮಸ್ಯೆ ಇದೆ. ಕಾವೇರಿ ಕಣಿವೆಯ ಎಲ್ಲಾ ನಾಲ್ಕು ಡ್ಯಾಂಗಳಲ್ಲೂ ಪೂರ್ಣ ಪ್ರಮಾಣದಲ್ಲಿ ನೀರು ಬಂದಿಲ್ಲ. ನಮಗೆ ಕುಡಿಯುವ ನೀರಿಗೆ ಡಿಸೆಂಬರ್‌ವರೆಗೂ ಸಮಸ್ಯೆ ಇದೆ. ಪ್ರತಿ ವರ್ಷ ಈ ರೀತಿ ಪರಿಸ್ಥಿತಿ ಬಂದಾಗ ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ. ದೇವರ ಆಶೀರ್ವಾದದಿಂದ ಶೀಘ್ರ ಮಳೆ ಶುರುವಾದರೆ ಇದೆಲ್ಲಾ ಸಮಸ್ಯೆಗೆ ಪರಿಹಾರ ಆಗುತ್ತೆ. ಅಲ್ಲಿ ತನಕ ಕಾಯೋಣ ಎಂದರು. ಮಾಜಿ ಶಾಸಕ ಸುರೇಶ್‌ ಗೌಡ ಅವರು ತಮ್ಮ ವಿರುದ್ಧ ನಡೆಸಿರುವ ವಾಗ್ದಾಳಿ, ಮಾಡಿರುವ ಆರೋಪಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ವಿಚಾರ ಬಿಟ್ಟು ಬೇರೆ ಹೇಳಪ್ಪ. ಲೂಟಿ ಹಣ ಎಲ್ಲಿದೆ ಅವರಿಗೆ, ಅವರ ಲೀಡರ್‌ಗೆ ಗೊತ್ತಿದಿಯಲ್ಲಾ ಅದನ್ನು ನೋಡ್ಬಿಟ್ಟು ಅವರೊಂದಿಷ್ಟು ತೆಗೆದುಕೊಂಡು ಹೋಗಲಿ ಎಂದು ಟಾಂಗ್‌ ನೀಡಿದರು.

2024ಕ್ಕೆ ನರೇಂದ್ರ ಮೋದಿಯೇ ಪ್ರಧಾನಿ: ಎಂಟಿಬಿ ನಾಗರಾಜ್‌

ಕಳೆದ 20 ವರ್ಷದಿಂದ ನಾಗಮಂಗಲದಲ್ಲಿ ನನಗೆ ಶಿವರಾಮೇಗೌಡ, ಸುರೇಶ್‌ಗೌಡ ಎದುರಾಳಿಗಳು. ಇಬ್ಬರೂ ನನ್ನ ವಿರುದ್ಧ ಸೋತಿದ್ದಾರೆ, ಗೆದ್ದಿದ್ದಾರೆ. ಆದರೆ ನಾವು ಯಾವತ್ತೂ ಅವರ ವಿಚಾರ ಮಾತನಾಡಿಲ್ಲ, ಇವತ್ತೂ ಮಾತನಾಡಲ್ಲ, ನಾಳೆಯೂ ಮಾತನಾಡಲ್ಲ. ಅವರು ಪ್ರಚಾರಕ್ಕೋಸ್ಕರ ಮಾತನಾಡುತ್ತಾರೆ ಮಾತನಾಡಲಿ ಎಂದರು. ಏಕವಚನದಲ್ಲಿ ಅಥವಾ ಬಹು ವಚನದಲ್ಲಿ ಮಾತನಾಡಲಿ. ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ವಿಚಲಿತನಾಗುತ್ತಿಲ್ಲ, ಕಂಡಕ್ಟರ್‌ದು ಆಯ್ತು, ಫೇಕ್‌ ಲೇಟರ್‌ ಆಯ್ತು ಇನ್ನೇನಿದ್ದರೂ ತೆಗೆದುಕೊಳ್ಳಲಿ ನೋಡೋಣ. ಏನಕ್ಕೂ ಅವರಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ಮೊನ್ನೆ ಎಲ್ಲಾ ಹೇಳಿ ಆಗಿದೆ, ಗೌರ್ನರ್‌ ಕೂಡ ಫೇಕ್‌ ಲೆಟರ್‌ ಅಂತ ಹೇಳಿದ್ದಾರೆ. ಮತ್ತೆ ಮತ್ತೆ ಅದರ ಬಗ್ಗೆ ಏನು ಮಾತನಾಡೋದು, ಬೇರೆ ವಿಚಾರ ಇದ್ದರೆ ಕೇಳಿ ಎಂದರು.