ಸೂರು ಇಲ್ಲದೇ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬ ಕಡು ಬಡವರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ಹೊಸಕೋಟೆ (ನ.07): ಸೂರು ಇಲ್ಲದೇ ಜೀವನ ಸಾಗಿಸುತ್ತಿರುವ ಪ್ರತಿಯೊಬ್ಬ ಕಡು ಬಡವರಿಗೆ ಶಾಶ್ವತ ಸೂರು ಕಲ್ಪಿಸಬೇಕು ಎಂಬುವುದು ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲೂಕಿನ ನಂದಗುಡಿಯ ದಲಿತ ಕಾಲೋನಿಯ ನಿವಾಸಿಗಳಿಗೆ ಹಕ್ಕುಪತ್ರ ವಿತರಣೇ ಮಾಡಿದ ಸಲುವಾಗಿ ಕಾಲೋನಿ ನಾಗರೀಕರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆಯಾಗಿದೆ. 

ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಬಡವರಿಗಾಗಿ 5 ಸಾವಿರ ಎಕರೆ ಸರಕಾರಿ ಜಮೀನು ಮೀಸಲಿಡಲಾಗುತ್ತಿದೆ. ಎಲ್ಲ ಧರ್ಮ, ವರ್ಗದ ಜನರಿಗೆ ವಸತಿ ಸೌಲಭ್ಯ ಒದಗಿಸಲು ಸರಕಾರ ಬದ್ಧವಾಗಿದೆ ಎಂದರು ತಾಲೂಕಿನಲ್ಲಿ ಸರಕಾರಿ ಭೂಮಿಯನ್ನು ಪತ್ತೆ ಹಚ್ಚಿ, ಶೇ. 50 ರಷ್ಟುಜಾಗವನ್ನು ಕಾಯ್ದಿರಿಸಿ, ಉಳಿಕೆ 50 ರಷ್ಟುಜಾಗವನ್ನು ತಾಲೂಕಿನ ಸ್ಮಶಾನ ಇಲ್ಲದ ಎಲ್ಲ ಸಮುದಾಯದವರಿಗೆ ಜಾಗವನ್ನು ಗುರ್ತಿಸಿ ಕೊಡುವಂತೆ ಸೂಚನೆ ನೀಡಲಾಗಿದೆ 28 ಗ್ರಾ.ಪಂಗಳಲ್ಲಿ ನಿವೇಶನ ರಹಿತರನ್ನು ಗುರುತಿಸಿ ನಿವೇಶನ ವಿತರಿಸಲು 3 ತಿಂಗಳ ಅವ​ಧಿಯಲ್ಲಿ ಜಾಗ ಒದಗಿಸಲು ತಾಲೂಕು ದಂಡಾ​ಕಾರಿಗಳಿಗೆ ಸೂಚಿಸಲಾಗಿದೆ.

ಬಿಜೆಪಿಯಲ್ಲೇ ಇರ್ತೇನೆ, ಕಾಂಗ್ರೆಸ್‌ಗೆ ಹೋಗಲ್ಲ: ಸಚಿವ ಎಂಟಿಬಿ ನಾಗರಾಜ್‌

ಇತ್ತೀಚೆಗೆ ಜಿಲ್ಲಾ​ಕಾರಿಗಳ ನಡೆ ಹಳ್ಳಿಯ ಕಡೆಗೆ ತಾಲೂಕಿನ 09 ಗ್ರಾಪಂ. ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರತಿ ಗ್ರಾಪಂ. ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಜಾಗ ಮೀಸಲಿರಿಸಲಾಗಿದೆ, ಸಮುದಾಯ ಭವನ ಕಟ್ಟಲು ಸಂಬಂಧಪಟ್ಟಅ​ಧಿಕಾರಿಗಳಿಗೆ ಅದೇಶ ಪತ್ರ ವಿತರಿಸಲಾಗಿದೆ. ನಿವೇಶನ ರಹಿತರಿಗೆ ಸೂರು ಕಟ್ಟಿಕೊಳ್ಳಲು ಅಯಾ ಗ್ರಾಪಂ. ವ್ಯಾಪ್ತಿಗೆ ಅನುಗುಣವಾಗಿ 8-10 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಸರಕಾರಿ ಜಾಗದಲ್ಲಿ ಮನೆ ಕಟ್ಟಿರುವ ಕಡು ಬಡವರಿಗೆ 94ಸಿ ಅಡಿಯಲ್ಲಿ ಹಕ್ಕು ಪತ್ರ ವಿತರಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನಂದಗುಡಿಯ ದಲಿತ ಕಾಲೋನಿಯ ಕುಟುಂಬಸ್ಥರು ಸಚಿವ ಎನ್‌. ನಾಗರಾಜ್‌ರನ್ನು ಸನ್ಮಾನಿಸಿ ಧನ್ಯವಾದ ಅರ್ಪಿಸಿದರು.ಬ ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪುಟ್ಟರಾಜು, ಯುವ ಉದ್ಯಮಿ ವಿ.ಆರ್‌. ನಾಗೇಶ್‌, ಗ್ರಾ.ಪಂ ಸದಸ್ಯ ಅಶ್ವಥ್‌, ಬಿಜೆಪಿ ಮುಖಂಡರಾದ ಸತ್ಯವಾರ ರಾಮು, ಬಿ. ಮಂಜುನಾಥ್‌ ಹಾಗೂ ಇತರರು ಇದ್ದರು.

ಮೀಸಲಾತಿ ಹೆಚ್ಚಳ ಬಿಜೆಪಿ ಸರ್ಕಾರದ ಐತಿಹಾಸಿಕ ಸಾಧನೆ: ಶಾಸಕ ರಾಜುಗೌಡ

ನಂದಗುಡಿ ದಲಿತ ಕಾಲೋನಿಯಲ್ಲಿ ಹಲವು ದಶಕಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ, ಇಲ್ಲಿನ ನಿವಾಸಿಗಳಿಗೆ ಯಾವುದೇ ದಾಖಲೆ ಇಲ್ಲದೇ ತೊಂದರೆ ಅನುಭವಿಸುತ್ತಿದ್ದರು. ಚುನಾವಣೆ ಸಮಯದಲ್ಲಿ ಜನಪ್ರತಿನಿ​ಗಳು ಪೊಳ್ಳು ಭರವಸೆ ನೀಡಿ ಮತ ಪಡೆಯುತ್ತಿದ್ದರೇ ವಿನಃಹ ಯಾರೋಬ್ಬರು ಹಕ್ಕು ಪತ್ರ ನೀಡಿರಲಿಲ್ಲ. ದಲಿತ ಕುಟುಂಬದವರ ದುಸ್ಥಿತಿ ಅರಿತು 20 ಕುಟುಂಬಸ್ಥರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಸಚಿವ ಎನ್‌. ನಾಗರಾಜ್‌ ತಿಳಿಸಿದರು.