ವಿಜಯಪುರದಲ್ಲಿ ನಡೆದ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್‌ ಜಿಲ್ಲೆಗೆ ಭೇಟಿ ನೀಡಿದರು. ನಗರದ ದರ್ಬಾರ್‌ ಹೈಸ್ಕೂಲು ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭಕ್ಕೆ ಚಾಲನೆ ನೀಡಿದರು.

ವಿಜಯಪುರ (ಮೇ.27): ವಿಜಯಪುರದಲ್ಲಿ ನಡೆದ ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್‌ ಜಿಲ್ಲೆಗೆ ಭೇಟಿ ನೀಡಿದರು. ನಗರದ ದರ್ಬಾರ್‌ ಹೈಸ್ಕೂಲು ಮೈದಾನದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರಂಭಕ್ಕೆ ಚಾಲನೆ ನೀಡಿದರು.

ಬಸವ ಹೊಟೇಲ್‌ನಲ್ಲಿ ಎಂಟಿಬಿ ಭೇಟಿಯಾದ ಯತ್ನಾಳ್: ಭಕ್ತ ಕನಕದಾಸರ ಮೂರ್ತಿ ಪ್ರತಿಷ್ಟಾಪನೆ ಹಿನ್ನೆಲೆ ನಗರಕ್ಕೆ ಆಗಮಿಸಿದ್ದ ಎಂಟಿಬಿ ನಾಗರಾಜ್‌ ನಗರದ ಬಸವ ರೆಸಿಡೆನ್ಸಿಯಲ್ಲಿ ತಂಗಿದ್ದರು. ವಿಧಾನ ಪರಿಷತ್‌ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಐಬಿ ಬದಲಿಗೆ ಖಾಸಗಿ ಹೊಟೇಲ್‌ನಲ್ಲೆ ಉಳಿದುಕೊಂಡಿದ್ದರು. ಕಾರ್ಯಕ್ರಮಕ್ಕು ಮುನ್ನ ನಗರ ಶಾಸಕ ಯತ್ನಾಳ್‌ ಎಂಟಿಬಿ ನಾಗರಾಜ್‌ರನ್ನ ಭೇಟಿ ಮಾಡಿದ್ರು. ಈ ವೇಳೆ ಬೈರತಿ ಬಸವರಾಜ್‌ ಕೂಡ ಇದ್ದರು. ಹೊಟೇಲ್‌ನ ಮೀಟಿಂಗ್‌ ಹಾಲ್‌ನಲ್ಲಿ ಕೆಲ ಹೊತ್ತು ಸಭೆ ಸೇರಿ ಮಾತನಾಡಿದ್ರು.

ಪರೋಕ್ಷವಾಗಿ ಯಡಿಯೂರಪ್ಪ ವಿರೋಧಿಗಳಿಗೆ ಟಾಂಗ್‌ ಕೊಟ್ಟ ಬೈರತಿ..!

ವಿಜಯೇಂದ್ರ ಪರ MTB ಬ್ಯಾಟಿಂಗ್: ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಎಂಟಿಬಿ ನಾಗರಾಜ್‌ ಬಿ ವೈ ವಿಜಯೇಂದ್ರ ಪರ ಬ್ಯಾಟಿಂಗ್‌ ಬೀಸಿದ್ದಾರೆ. ವಿಜಯೇಂದ್ರಗೆ ಟಿಕೇಟ್‌ ತಪ್ಪಿದ ವಿಚಾರವಾಗಿ ಮಾತನಾಡಿದ ಅವರು ಪಕ್ಷದ ಸಂಘಟನೆಗಾಗಿ ಪಕ್ಷ ಟಿಕೇಟ್‌ ನೀಡಿಲ್ಲದಿರಬಹುದು, ಇದು ನನ್ನ ಊಹೆ ಎಂದಿದ್ದಾರೆ. ಮುಂಬರುವ ಜನರಲ್‌ ಎಲೆಕ್ಷನ್‌ ನಲ್ಲಿ ವಿಧಾನ ಸಭೆಗೆ ಸ್ಪರ್ಧಿಸಿ ಗೆದ್ದು ಬಂದು ಶಾಸಕರಾಗ್ತಾರೆ. ಯಡಿಯೂರಪ್ಪ ನವರು ಸೈಕಲ್‌ ಮೇಲೆ ರಾಜ್ಯದಲ್ಲಿ ಪ್ರವಾಸ ಮಾಡಿ ಬಿಜೆಪಿ ಪಕ್ಷ ಕಟ್ಟಿದಂತೆ ಅವರು ಕೂಡ ಮುಂದೆ ಪಕ್ಷ ಕಟ್ಟಲಿದ್ದಾರೆ ಎಂದ್ರು.

ಕಾಂಗ್ರೆಸ್‌ಗೆ ವಾಪಸ್‌ ಹೋಗೋ ಪ್ರಮೇಯ ಇಲ್ಲ: ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದು ಸಚಿವರಾದವರು ವಿಧಾನ ಸಭೆ ಚುನಾವಣೆ ಹೊತ್ತಿಗೆ ಮತ್ತೆ ಕಾಂಗ್ರೆಸ್‌ ವಾಪಾಸ್‌ ಆಗ್ತಾರೆ ಎನ್ನುವ ವದಂತಿಯ ಕುರಿತು ಪ್ರತಿಕ್ರಿಯಿಸಿದ ಅವರು ಅಂತಹ ಯಾವುದೇ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ ಗೆ ವಾಪಾಸ್‌ ಹೋಗುವ ಪ್ರಮೇಯ ಇಲ್ಲ. ಬಿಜೆಪಿ ಸೇರಿದ್ದೇವೆ, ಸಚಿವರಾಗಿದ್ದೇವೆ. ಮತ್ತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಜಯಭೇರಿ ಬಾರಿಸಲಿದೆ. ನಾವು ಕೂಡ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ ಬಿಟ್ಟ 15 ಜನರು ವಾಪಾಸ್‌ ಹೋಗೋದು ಕೇವಲ ಊಹಾಪೋಹ ಎಂದಿದ್ದಾರೆ..

ಕಾಂಗ್ರೆಸ್​​ನ ಇಬ್ಬರು ಪ್ರಭಾವಿ ನಾಯಕರು ಬಿಜೆಪಿಗೆ ಬರಲು ನಾಟಕ ಮಾಡ್ತಿದ್ದಾರೆ- ಯತ್ನಾಳ್ ಬಾಂಬ್

ಖಾತೆ ವಿಚಾರದಲ್ಲಿ ಯಾವುದೇ ಅಸಮಧಾನ ಇಲ್ಲ: ಇನ್ನು ಖಾತೆ ವಿಚಾರವಾಗಿ ಎಂಟಿಬಿ ಅಸಮಧಾನಗೊಂಡಿದ್ದಾರಾ ಎನ್ನುವ ಬಗ್ಗೆ ಅವರನ್ನ ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಎಂ ಟಿ ಬಿ ಯಾವುದೇ ಅಸಮಧಾನ ಇಲ್ಲ ಎಂದಿದ್ದಾರೆ. ಬಳಿಕ ಏನೂ ಇಲ್ಲ. ಎಂದು ಉದ್ಗಾರವನ್ನು ತೆಗೆದರು. ಈ ಮೂಲಕ ಹೇಳಿಕೊಳ್ಳಲು ಆಗದೇ, ಇತ್ತ ಬಚ್ಚಿಟ್ಟುಕೊಳ್ಳಲಾಗದಂತೆ ಎಂ ಟಿ ಬಿ ಉತ್ತರವಿತ್ತು.