ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರವಾಗಿ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು. ನಮಗೆ ಲೋಕಸಭಾ ಚುನಾವಣೆ ಮುಖ್ಯವಿದ್ದು, ಈ ಹಂತದಲ್ಲಿ ಯಾರೂ ಹೇಳಿಕೆಗಳನ್ನು ಕೊಡಬೇಡಿ' ಎಂದು ದೆಹಲಿ ನಾಯಕರು ಸೂಚಿಸಿದ್ದಾರೆ: ಎಂ.ಬಿ. ಪಾಟೀಲ್
ಬೆಂಗಳೂರು(ಜ.13): ಲೋಕಸಭೆ ಚುನಾವಣೆಯಲ್ಲಿ ವಹಿಸಿದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಸಚಿವರು ಸೋತರೆ ಅವರ ತಲೆದಂಡವಾಗುತ್ತದೆ ಎಂದು ಹೈಕಮಾಂಡ್ ಹೇಳಿಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು 'ಸಚಿವರ ತಲೆದಂಡದ ಬಗ್ಗೆ ಹೈ ಕಮಾಂಡ್ ಎಚ್ಚರಿಕೆ ನೀಡಿದೆಯೇ' ಎಂಬ ಪ್ರಶ್ನೆಗೆ, 'ಪರಿಣಾಮ ಎದುರಿಸಬೇಕಾಗುತ್ತದೆ ಎಂದಾಗಲೀ ತಲೆದಂಡ ಎಂದಾಗಲೀ ಹೈಕಮಾಂಡ್ ಹೇಳಿಲ್ಲ. ಗಂಭೀರವಾಗಿ ಕೆಲಸ ಮಾಡಿ ಎಂದು ಹೇಳಿದೆ. ಲೋಕಸಭೆ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು ಎಂದು ತಿಳಿಸಿದೆ' ಎಂದರು.
ಏರ್‌ಪೋರ್ಟ್‌ಗಳ ಸುತ್ತ 10,000 ಎಕರೆ ಕೈಗಾರಿಕಾ ಪಾರ್ಕ್: ಸಚಿವ ಎಂ.ಬಿ.ಪಾಟೀಲ
ಡಿಸಿಎಂ ಬಗ್ಗೆ ಹೇಳಿಕೆ ನೀಡದಂತೆ ತಾಕೀತು:
'ಹೆಚ್ಚುವರಿ ಉಪ ಮುಖ್ಯಮಂತ್ರಿ ವಿಚಾರವಾಗಿ ಯಾವುದೇ ಬಹಿರಂಗ ಹೇಳಿಕೆ ನೀಡಬಾರದು. ನಮಗೆ ಲೋಕಸಭಾ ಚುನಾವಣೆ ಮುಖ್ಯವಿದ್ದು, ಈ ಹಂತದಲ್ಲಿ ಯಾರೂ ಹೇಳಿಕೆಗಳನ್ನು ಕೊಡಬೇಡಿ' ಎಂದು ದೆಹಲಿ ನಾಯಕರು ಸೂಚಿಸಿದ್ದಾರೆ ಎಂದು ಇದೇ ವೇಳೆ ಎಂ.ಬಿ. ಪಾಟೀಲ್ ಹೇಳಿದರು.
