ರಾಜ್ಯದಲ್ಲಿ ಸಂಪುಟ ಕಸರತ್ತು ಜೋರಾಗಿದ್ದು, ಸಚಿವ ವಿಸ್ತರಣೆಗೆ ಹೈಕಮಾಂಡ್ ತುಟಿ ಬಿಚ್ಚುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪನವರು ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

ದಾವಣಗೆರೆ, (ಡಿ.04): ಕಳೆದ 15 ದಿನಗಳಿಂದ ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರಗಳಿಂದ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

Add Asianetnews Kannada as a Preferred SourcegooglePreferred

ಅದರಲ್ಲೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಕೂಗು ಬಲವಾಗಿ ಕೇಳಿಬರುತ್ತಿದೆ. ಖುದ್ದು ಸಿಎಂ ದೆಹಲಿ ತೆರಳಿ ಸಂಪುಟ ವಿಸ್ತರಣೆ ಮಾತುಕತೆ ಮಾಡಿ ಬಂದ್ರೂ ಯಾವುದೇ ಪ್ರಯೋಜನವಾಗಿಲ್ಲ. 

ಮೊದಲ ಬಾರಿಗೆ ರಾಜ್ಯಕ್ಕೆ ಉಸ್ತುವಾರಿ: ಬಿಜೆಪಿಯಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಇದು ನಾಯಕತ್ವ ಬದಲಾವಣೆಯ ಮೊದಲ ಅಂಶ ಎಂದು ವಿಶ್ಲೇಷಣೆ ಮಾಡಲಾಗಿದೆ. ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎನ್ನುವುದು ಹೈಕಮಾಂಡ್ ಯಾವುದೇ ಹೇಳದಿರುವುದು ಸಿಎಂ ಕಣ್ಣುಕೆಂಪಾಗಿಸಿದೆ. ಇನ್ನು ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮಹತ್ವದ ಹೇಳಿಕೆಯೊಂದನ್ನ ನೀಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕೇಂದ್ರದ ನಾಯಕರು ಮುಖ್ಯಮಂತ್ರಿಯನ್ನು ಹಿಡಿತದಲ್ಲಿಟ್ಟುಕೊಂಡಿಲ್ಲ. ಬದಲಾಗಿ ಮುಖ್ಯಮಂತ್ರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ದೇವೇಗೌಡ ಮನವೊಲಿಕೆ ಯಶಸ್ವಿ: ಇದೇ ಖುಷಿಯಲ್ಲಿ ಮನೆಯಲ್ಲಿ ಭರ್ಜರಿ ಊಟ

ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕೇಂದ್ರ ನಾಯಕರು ಮುಖ್ಯಮಂತ್ರಿಯನ್ನು ನಿಯಂತ್ರಿಸುತ್ತಿದ್ದಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರರಿಸಿದ ಅವರು , ಸರ್ಕಾರ ಕಳೆದುಕೊಳ್ಳಬೇಕು ಎಂಬ ಇಚ್ಛೆ ಪಕ್ಷಕ್ಕೆ ಇಲ್ಲ. ಹೀಗಾಗಿ ಕೇಂದ್ರದ ನಾಯಕರು ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮುಖ್ಯಮಂತ್ರಿ ಯಾರನ್ನೋ ಸಚಿವರನ್ನಾಗಿ ಮಾಡಿದರೆ ಇನ್ನೊಬ್ಬರು ಪ್ರಶ್ನೆ ಮಾಡುತ್ತಾರೆ. ಅದರ ಬದಲು ಕೇಂದ್ರದವರು ಸೂಚಿಸಿದಂತೆ ಮಾಡಿದಾಗ ಮುಖ್ಯಮಂತ್ರಿಯೂ ಸುರಕ್ಷಿತವಾಗಿರುತ್ತಾರೆ ಎಂದರು.