ಬೆಂಗಳೂರು (ಆ.16) : ಡಿ. ಜೆ. ಹಳ್ಳಿ ಮತ್ತು ಕೆ. ಜಿ. ಹಳ್ಳಿಯಲ್ಲಿ ನಡೆದ ಗಲಭೆಗೆ ಬಿಜೆಪಿ ಕಾರ್ಯಕರ್ತ ಮಾಡಿದ ಟ್ವೀಟ್‌ ಕಾರಣ ಎಂಬ ಕಾಂಗ್ರೆಸ್‌ ನ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್‌ ಅವರ ಹೇಳಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತೀವೃವಾಗಿ ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

‘ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಅವರ ಹೇಳಿಕೆ ತೀರಾ ಬಾಲಿಶ. ಬೆಂಗಳೂರಿನ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತನ ಪಾತ್ರವಿದೆಯೆಂಬ ಆರೋಪ ಮಾಡಿರುವ ಅವರಿಗೆ ಸತ್ಯದ ಅರಿವಿಲ್ಲ ಎಂದು ಅನಿಸುತ್ತದೆ.

ಗಲಭೆಯಲ್ಲಿ ಮೃತಪಟ್ಟವರ ಬಗ್ಗೆ ಜಮೀರ್‌ ಕನಿಕರ: ಭಾರೀ ವಿವಾದ...

ಡಿಕೆಶಿ ಅವರಿಗೆ ಎಸ್‌ಡಿಪಿಐ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಕೋೕತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತೆ ಡಿಕೆಶಿ ಅವರ ಹೇಳಿಕೆಯಿದೆ’ ಎಂದು ಸುಧಾಕರ್‌ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.