Asianet Suvarna News Asianet Suvarna News

ಸಿಎಂ ಕೇಳಿದರೆ ರಾಜೀನಾಮೆ ಕೊಡಲು ಸಿದ್ಧ: ಸಚಿವ ಮಾಧುಸ್ವಾಮಿ

ನಾನು ನಮ್ಮ ಸಹೋದ್ಯೋಗಿಗಳಿಗೆ ರಾಜೀನಾಮೆ ಕೊಡ್ಬೇಕಾಗಿಲ್ಲ.   ಸಿಎಂ ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಅಗಿದೆ ರಾಜೀನಾಮೆ ಕೊಡಿ ಅಂದ್ರೆ ಎರಡು ಮಾತನಾಡದೇ ರಾಜೀನಾಮೆ ಕೊಡ್ತೇನೆ ಎಂದು ಸಚಿವ ಮಾಧುಸ್ವಾಮಿ   ಹೇಳಿದ್ದಾರೆ.

Minister jc Madhuswamy clarification about viral audio clipgow
Author
Bengaluru, First Published Aug 16, 2022, 4:50 PM IST

ತುಮಕೂರು (ಆ.16): ಸರ್ಕಾರ ಆಡಳಿತ ನಡೆಸುತ್ತಿಲ್ಲ ಮ್ಯಾನೇಜ್‌ ಮಾಡುತ್ತಿದೆ ಎಂದು ಸಚಿವ ಮಾಧುಸ್ವಾಮಿ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆಡಿಯೋ ವೈರಲ್ ಆದ್ಮೇಲೆ ಚಿಕ್ಕನಾಯಕನ ಹಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಧುಸ್ವಾಮಿ, ಸೋಮಶೇಖರ್ ಜೊತೆ ಚರ್ಚೆ ಮಾಡಿದ್ದಿನಿ ಇದನ್ನು ಪಾಸಿಟಿವ್ ಆಗಿ ತಗೊಂಡ್ರೋ ನೆಗೆಟಿವ್ ಆಗಿ ತಗೊಂಡ್ರೋ ನನಂಗತು ಗೊತ್ತಿಲ್ಲ.  ನಾನಂತು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತೇನೆ. ಸರ್ಕಾರ ನಡಿತಿಲ್ಲ ಅಂತ ಕೇಳಿದ್ದಕ್ಕೆ ನಾನು ಹೌದಪ್ಪ ನಡಿತಿಲ್ಲ ಮ್ಯಾನೇಜ್ ಮಾಡ್ತಿದ್ದೀವಿ ಅಂತ  ಹೇಳಿರ್ಬಹುದು. ಸರ್ಕಾರದ ಬಗ್ಗೆ ಮಾತನಾಡೋಕೆ ಅದೇನು ಸರಿಯಾದ ವೇದಿಕೆನಾ.  ಆ ರೀತಿಯಾಗಿ ಮಾತನಾಡೊಕೆ ನಾನೇನು ತಿಕ್ಲಾನಾ. ನನಗೆ ಪ್ರೈವೆಸಿ ಹಾಳಾಗಿದೆ, ನಾನು ಈ ಬಗ್ಗೆ ಕೇಸ್ ಹಾಕೋಕೆ ಲಾಯರ್ ಹತ್ರ ಚರ್ಚೆ ಮಾಡ್ದೆ. ಇವತ್ತಲ್ಲ ನಾಳೆ ಇಶ್ಯು ಕ್ಲಿಯರ್ ಆಗುತ್ತೆ ಬೇಡ ಕೇಸ್ ಹಾಕೋದು ಅಂದ್ರು ಸುಮ್ಮನಾದೆ. ಭಾಸ್ಕರ್ ಯಾರು ಅಂತ ನನಗೆ ಗೊತ್ತಿಲ್ಲ. ಮಿಡಿಯಾದಲ್ಲಿ ಬಂದ್ಮೇಲೆ ನನಗೆ ಗೊತ್ತಾಗಿದ್ದು ಭಾಸ್ಕರ್ ಚನ್ನಪಟ್ಟಣ ಮೂಲದವನು ಅಂತ. ಆಡಿಯೋ ಎಡಿಟ್ ಆಗಿರೋ ಬಗ್ಗೆನು ನನಗೆ ಗೊತ್ತಿಲ್ಲ.  ಪ್ರಚೋದನೆ ಇಲ್ಲದೆ ನಾನು ಆ ರೀತಿಯಾಗಿ ಯಾವುದನ್ನೂ ಮಾತಾನಾಡಿಲ್ಲ. ನಾನು ರೆಕಾರ್ಡ್ ಮಾಡ್ಕೊಂಡಿದ್ರೆ ನಿಮಗೆ ಸ್ಪಷ್ಟವಾಗಿ ಹೇಳ್ಬಹುದಿತ್ತು. 

ಸಿಎಂ‌ ಹೇಳಿದ್ರೆ ರಾಜೀನಾಮೆ ಕೊಡ್ತೇನೆ:  ನಾನು ನಮ್ಮ ಸಹೋದ್ಯೋಗಿಗಳಿಗೆ ರಾಜೀನಾಮೆ ಕೊಡ್ಬೇಕಾಗಿಲ್ಲ. ಸಿಎಂ‌ ಹೇಳಿದ್ರೆ ರಾಜೀನಾಮೆ ಕೊಡ್ತೇನೆ. ಸಿಎಂ ನಿಮ್ಮಿಂದ ನಮ್ಮ ಸರ್ಕಾರಕ್ಕೆ ಅಪಚಾರ ಅಗಿದೆ ರಾಜೀನಾಮೆ ಕೊಡಿ ಅಂದ್ರೆ ಎರಡು ಮಾತನಾಡದೇ ರಾಜೀನಾಮೆ ಕೊಡ್ತೇನೆ. ನಾನು ಮುಖ್ಯಮಂತ್ರಿಗೆ ಮನವರಿಕೆ ಮಾಡ್ಬೇಕಾಗಿತ್ತು ಮಾಡಿದ್ದೀನಿ.  ನಾನು ಮುಖ್ಯಮಂತ್ರಿಗಳ ಜೊತೆ ಯಾವ್ದು ಮುಚ್ಚಿಟ್ಟಿಲ್ಲ. ಅವರ ಹತ್ರ ಮಾತನಾಡ್ಬೇಕಾಗಿತ್ತು ಮಾತನಾಡಿದ್ದೇನೆ.

ನಾನು ಕಟ್ಟ ಕಡೆಯ ಮನುಷ್ಯ, ಅಧಿಕಾರಕ್ಕಾಗಿ ಅಂಟಿಕೊಂಡವನಲ್ಲ. ನನ್ನನ್ನ ಸಿಕ್ಕಿ ಹಾಕಿಸೋ ಅವಶ್ಯಕತೆ ಇಲ್ಲ. ಸಿಎಂ ಕರೆದು ರಾಜಿನಾಮೆ ಕೊಡು ಅಂದ್ರೆ ನಾನು ರೆಡಿ ಇದ್ದೀನಿ. ಹೀಗೆಲ್ಲ ಸುತ್ತಿ  ಬಳಿಸಿ ಸುದ್ದಿ ಮಾಡೋ ಅವಶ್ಯಕತೆ ಇಲ್ಲ‌. ನಾನು ಜೆಸಿ ಪುರದಲ್ಲಿ ಆರಾಮವಾಗಿ ಇದ್ದೀನಿ. ಪ್ರವೈಟ್ ಆಗಿ ಇಬ್ಬರು ಮಾತನಾಡೋದು ತಪ್ಪು. ಅವನು ಅನುಮತಿ ಇಲ್ಲದೆ ತಪ್ಪು ಮಾಡಿದ್ದಾನೆ. ಮೂರನೇ ಅವನು ಬೇನಾಮಿ, ಅವ್ನು ಮಾತಾಡ್ತಾನೆ.  ಇದನ್ನು ಇಷ್ಟು ದೊಡ್ಡದು ಮಾಡಬಾರದು. ನೋವು ನನಗೂ ಆಗುತ್ತೆ. ರಾಜಕಾರಣಿಗಳಿಗೆ ಹೃದಯ ಇಲ್ಲ ಅನ್ಕೋಳೊದು ತಪ್ಪು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಜವಾಬ್ದಾರಿಯಿತ ಹೇಳಿಕೆ ನೀಡಿ ಇಲ್ಲವೇ ರಾಜೀನಾಮೆ ಕೊಡಿ: ಸಚಿವ ಮುನಿರತ್ನ ಕಿಡಿ

ಸಂವಿಧಾನದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡ್ಬೇಕು ಅನ್ನೋದು ಬಿಟ್ರೆ. ಎಲ್ಲರಿಗೂ ಹೇಳ್ಬೇಕಿತ್ತು ಅನ್ನೋದು ಏನು ಇಲ್ಲ.  ಸಚಿವರುಗಳಿಗೆ ಸೌಜನ್ಯ ಇರ್ಬೇಕಿತ್ತು. ನನ್ನ ಜೊತೆ ಮಾತಾನಾಡ್ಬೇಕಿತ್ತು.‌ ಇಲ್ಲ ಸಿಎಂ ಜೊತೆ ಚರ್ಚೆ ಮಾಡ್ಬೇಕಿತ್ತು. ಯಾರ್ಯಾರು ಹೇಗೆಗೋ ಮಾತನಾಡೋಕೆ ನಾನು ಯಾಕೆ ಪ್ರತಿಕ್ರಿಯೆ ನೀಡಬೇಕು. ನಾನು ಯಾರನ್ನ ಶತೃಗಳು ಅಂದುಕೊಳ್ಳುವುದಿಲ್ಲ.  ಎಲ್ಲರನ್ನು ಹಿತ ಅಂದುಕೊಳ್ಳುತ್ತೇನೆ.

ಸರ್ಕಾರ ನಡೆಯುತ್ತಿಲ್ಲ ಹೇಗೋ ಮ್ಯಾನೇಜ್ ಮಾಡ್ತಿದ್ದೀವಿ ಅಷ್ಟೇ: ಸಚಿವ ಮಾಧುಸ್ವಾಮಿ ಆಡಿಯೋ ವೈರಲ್

ನಾನು ಈವಾಗ್ಲೂ ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳ ಜೊತೆ ನಿಲ್ಲತ್ತೇನೆ. ಮಾಧ್ಯಮದಲ್ಲಿ ಕೂಡ  ನಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಸಂಪುಟ ಸಚಿವ ಸಹೋದ್ಯೋಗಿಗಳು ಬಹಿರಂಗವಾಗಿ ಮಾತನಾಡಬಾರದು. ಪಕ್ಷದಿಂದ ನನಗೆ ಯಾವ್ದೆ ಆಕ್ಷೇಪಣೆ ಬಂದಿಲ್ಲ. ಸಿಎಂ ಪಕ್ಷದವರಿಗೆ ಕನ್ವೇ ಮಾಡಿರ ಬಹುದು ಎಂದು ಮಾಧುಸ್ವಾಮಿ ಹೇಳಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ವಿಚಾರ: ವಿರೋಧ ಪಕ್ಷಗಳಿಗೆ ಇದು ಕಾಮೆಂಟ್ ಮಾಡುವಂತಹ ವಿಚಾರವಲ್ಲ. ವಿರೋಧ ಪಕ್ಷಗಳಿಗೆ ಆಹಾರವಾಗುವಂತಹ ಹೇಳಿಕೆ ಅಲ್ಲ‌. ಸಾಮಾನ್ಯ ವ್ಯಕ್ತಿಗಳ ಜೊತೆ ಮಾತಾನಾಡಿರೋದನ್ನ‌ ಮಂತ್ರಿನೇ ಸರ್ಕಾರ ನಡಿತಿಲ್ಲ ಅಂತ ಹೇಳೊದು ಸರಿಯಲ್ಲ. ಸರ್ಕಾರ ನಡಿತಿಲ್ಲ ಅಂದ್ರೆ ನಾನೆ ಕೆಲಸ ಮಾಡ್ತಿಲ್ಲ ಅಂತ ಅರ್ಥ.  ನಾನು ಸರ್ಕಾರದ ಭಾಗ ಅಲ್ವಾ, ನಾನೆ ನಿಮ್ಮ ಎದುರಿಗೆ ಕೆಲಸ ಮಾಡ್ತಿಲ್ಲ ಅಂತ ಹೇಳೋಕೆ ಆಗುತ್ತಾ, ನಾನು ಯಾರು ದಾಕ್ಷಿಣ್ಯದಲ್ಲಿ ಇರುವಂತವನು ಅಲ್ಲ. ಬೊಮ್ಮಾಯಿ ಸರ್ಕಾರದಲ್ಲಿ ಅಂತಹದ್ದು ಏನು ನಡೆದಿಲ್ಲ. ನಮ್ಮನ್ನು ಗೆಳೆಯರು ತಪ್ಪಾಗಿ ಭಾವಿಸಿಕೊಂಡಿದ್ದು ತಪ್ಪು. ಅವರು ಪ್ರಬುದ್ದರು ಅವರು ಹೇಳಿದ್ದು ಅನುಚಾನವಾಗಿ ಅನುಸರಿಸಿಕೊಂಡು ಇನ್ಮುಂದೆ ಹೊಗ್ತಿನಿ ಎಂದರು.

Follow Us:
Download App:
  • android
  • ios