Asianet Suvarna News Asianet Suvarna News

ಅಧಿಕಾರದ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗರು: ಸಚಿವ ಹಾಲಪ್ಪ ಆಚಾರ್‌

ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ: ಆಚಾರ್‌

Minister Halappa Achar Slams Congress grg
Author
First Published Aug 31, 2022, 12:08 PM IST

ಯಲಬುರ್ಗಾ(ಆ.31):  ಕಾಂಗ್ರೆಸ್‌ನವರು ಮುಂದೆ ಅಧಿಕಾರಕ್ಕೆ ನಾವೇ ಬರುತ್ತೇವೆ ಎಂದು ಹಗಲುಗನಸು ಕಾಣುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್‌ ಲೇವಡಿ ಮಾಡಿದರು. ತಾಲೂಕಿನ ಹಿರೇಅರಳಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘ ಹಾಗೂ ಮಿಶ್ರತಳಿ ಆಕಳು ಮತ್ತು ಕರುಗಳ ಪ್ರದರ್ಶನ ಮತ್ತು ನೂತನ ಪಶು ಚಿಕಿತ್ಸಾಲಯ ಉದ್ಘಾಟಿಸಿ ಮಾತನಾಡಿ, ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಕಾಂಗ್ರೆಸ್‌ನವರು ಅಧಿಕಾರಕ್ಕಾಗಿ ಬಿಜೆಪಿ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆ ಕೃಷ್ಣಾ ಕಡೆಗೆ ಎನ್ನುವ ಪಾದಯಾತ್ರೆ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನವರು ಪ್ರತಿವರ್ಷ ನೀರಾವರಿ ಯೋಜನೆಗೆ .10 ಸಾವಿರ ಕೋಟಿ ಮೀಸಲಿಡುವುದಾಗಿ ಕೊಟ್ಟಮಾತಿನಂತೆ ನಡೆದುಕೊಳ್ಳದೆ ಅಧಿಕಾರವನ್ನು ಕಳೆದುಕೊಂಡು ಹಪಾಹಪಿಸುತ್ತಿದ್ದಾರೆ. ಮತ್ತೆ ನಮ್ಮದೆ ಬಿಜೆಪಿ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಅಭಿವೃದ್ಧಿಗೆ ಆದ್ಯತೆ ನೀಡದ ಕಾಂಗ್ರೆಸ್‌: ಸಚಿವ ಹಾಲಪ್ಪ ಆಚಾರ್‌

ರೈತರ ಜಾನುವಾರುಗಳ ಆರೋಗ್ಯ ಹಿತದೃಷ್ಟಿಯಿಂದ ಈ ಗ್ರಾಮದ ಜನರ ಬಹುವರ್ಷಗಳಿಂದ ಪಶು ಚಿಕಿತ್ಸಾಲಯದ ಬೇಡಿಕೆಯಿತ್ತು. ಅದನ್ನು ಮಂಜೂರಾತಿ ಕೊಡಿಸುವ ಮೂಲಕ ಅವರೆಲ್ಲರ ಕನಸು ನನಸಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹಾಲು ಉತ್ಪಾದರ ನೂತನ ಕಟ್ಟಡವನ್ನು ಅವರ ಇಚ್ಛೆಯಂತೆ ಹೆಚ್ಚು ಅನುದಾನ ಕೊಡುವ ಜತೆಗೆ ಅದನ್ನು ಈಡೇರಿಸುವ ಸೌಭಾಗ್ಯ ಕೂಡಿಬಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.

ತಹಸೀಲ್ದಾರ್‌ ಶ್ರೀಶೈಲ ತಳವಾರ, ತಾಪಂ ಇಒ ಸಂತೋಷ ಪಾಟೀಲ, ಉಪನಿದೇರ್ಶಕ ನಾಗರಾಜ ಎಚ್‌., ಮುಖ್ಯ ಪಶುವೈದ್ಯಾಧಿಕಾರಿ ಡಾ. ಪ್ರಕಾಶ ಚೂರಿ, ಡಾ. ವೆಂಕಟೇಶ ಟಿಕಾರಿ, ಡಾ. ಸವಿತಾ ರಾಠೋಡ, ಡಾ. ಸಿದ್ದು ಚವ್ಹಾಣ, ಡಾ. ವಿನೋದ, ಡಾ. ಸಂಜಯ ಚಿತ್ರಗಾರ, ಗ್ರಾಪಂ ಅಧ್ಯಕ್ಷ ದೇವೇಂದ್ರಗೌಡ ಪೊಲೀಸಪಾಟೀಲ, ಉಪಾಧ್ಯಕ್ಷೆ ಶಿವಗಂಗಮ್ಮ ಬಿಜಕಲ್‌ ಹಾಗೂ ಬಿಜೆಪಿ ಮುಖಂಡರಾದ ವೀರಣ್ಣ ಹುಬ್ಬಳ್ಳಿ, ಕಳಕಪ್ಪ ಕಂಬಳಿ, ಶಿವಣ್ಣ ವಾದಿ, ಬಸನಗೌಡ ತೊಂಡಿಹಾಳ, ಮಾರುತಿ ಗಾವರಾಳ, ಶಂಕರಗೌಡ ಟಣಕನಕಲ್‌, ಶರಣಪ್ಪ ಇಳಗೇರ, ಶೇಖರಗೌಡ ರಾಮತ್ನಾಳ, ರಾಚಪ್ಪ ಹಳ್ಳಿ, ಕವಿತಾ ಗುಳಗಣ್ಣನವರ್‌, ಬಾಲಪ್ಪ ಕೋರಿ ಹಾಗೂ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರು, ಗ್ರಾಪಂ ಸದಸ್ಯರು ಇದ್ದರು.
 

Follow Us:
Download App:
  • android
  • ios