Asianet Suvarna News Asianet Suvarna News

ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್‌ ಸರ್ಕಾರದ ಆಯಸ್ಸು ಕಡಿಮೆ: ಗೋವಿಂದ ಕಾರಜೋಳ

ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟದಿಂದಾಗಿ ಸರ್ಕಾರದ ಆಯಸ್ಸು ಕಡಿಮೆ ಆಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Minister Govind Karajol Slams On Congress Govt At Bagalkote gvd
Author
First Published Oct 24, 2023, 2:40 AM IST

ಬಾಗಲಕೋಟೆ (ಅ.24): ಕಾಂಗ್ರೆಸ್‌ನಲ್ಲಿನ ಆಂತರಿಕ ಕಚ್ಚಾಟದಿಂದಾಗಿ ಸರ್ಕಾರದ ಆಯಸ್ಸು ಕಡಿಮೆ ಆಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಹಾರಾಷ್ಟ್ರ ಮಾದರಿಯಲ್ಲಿ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ರಚನೆಯಾಗುವುದೇ ಎಂಬ ಪ್ರಶ್ನೆಗೆ ಅವರವರ ಹೊಡೆದಾಟದಿಂದಾಗಿಯೇ ಸರ್ಕಾರ ಬೀಳಲಿದೆ ಎಂದು ಹೇಳಿದರು. ನಮ್ಮದು ರಾಜಕೀಯ ಪಕ್ಷವಾಗಿದ್ದು, ಎಣ್ಣೆ ಬಂದಾಗ ಕಣ್ಣು ಮುಚ್ಚಿ ಕೂರುವುದಿಲ್ಲ. ರಾಜಕೀಯ ಪಕ್ಷವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದರು. 

ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮಗೆ ಆಪರೇಷನ್ ಕಮಲ ಮಾಡುವ ಅವಶ್ಯಕತೆಯಿಲ್ಲ. ಪಕ್ಷಕ್ಕೆ ಯಾರನ್ನು ಕರೆ ತರುವ ಅವಶ್ಯಕತೆಯೂ ನಮಗಿಲ್ಲ. ಅವರವರೇ ಕಚ್ಚಾಡಿ ಇಂದು ಬೀದಿಗೆ ಬಂದಿದ್ದಾರೆ. ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು. ಸರ್ಕಾರ ಕೆಡವಲು ಬಿಜೆಪಿ ಮುಂದಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಕ್ಕೆ ಉತ್ತರಿಸಿದ ಅವರು, ಬಿಜೆಪಿ ಮೇಲೆ ಆರೋಪ ಮಾಡಲು ಅವರ ಬಳಿ ಯಾವುದೇ ಆಧಾರಗಳು ಇಲ್ಲ. ಅವರಿಗೆ ಅಭದ್ರತೆ ಕಾಡುತ್ತಿದೆ. ಅದಕ್ಕಾಗಿಯೇ ಇಂಥ ಮಾತು ಆಡುತ್ತಿದ್ದಾರೆ. 

ಕಾವೇರಿ ಸಮಸ್ಯೆಗೆ ನ್ಯಾಯಾಲಯದಿಂದ ಪರಿಹಾರ ಸಿಗದು: ಸಂತೋಷ್ ಹೆಗ್ಡೆ

ಅವರಲ್ಲೇ ಕಚ್ಚಾಡಿ ನೆಲಕಚ್ಚುತ್ತಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಅವರ ಐದು ತಿಂಗಳ ಸಾಧನೆ ಅಂದರೆ ಮಂತ್ರಿಗಳ ನಡುವೆ ಸಮನ್ವಯತೆ ಇಲ್ಲ, ಶಾಸಕರಿಗೆ ಸರ್ಕಾರದ ಮೇಲೆ ವಿಶ್ವಾಸ ಉಳಿದಿಲ್ಲ. ಅಪನಂಬಿಕೆಗಳಿಂದ ಗುಂಪುಗಳಾಗಿ ಜಗಳವಾಡುತ್ತಿದ್ದಾರೆ. ನಾಡಿನಲ್ಲಿ ಬರ ಬಿದ್ದು, ಜನ ಸಂಕಷ್ಟದಲ್ಲಿದ್ದಾರೆ, ರೈತರು ಕಂಗಾಲಾಗಿದ್ದಾರೆ, ವಿದ್ಯುತ್ ಕೂಡ ಇಲ್ಲ. ಶಾಸಕರು, ಮಂತ್ರಿಗಳ ನಡುವೆ ಭ್ರಷ್ಟಾಚಾರಕ್ಕಾಗಿ ಕಚ್ಚಾಟ ನಡೆದಿದೆ. ಈ ಸರ್ಕಾರ ಜನರ ಬಗ್ಗೆ ಕಿಂಚಿತ್ತೂ ಕಾಳಜಿಯನ್ನು ತೋರುತ್ತಿಲ್ಲ. ಬರಪರಿಹಾರದ ಕಾಮಗಾರಿಗಳು ಶುರುವಾಗಿಲ್ಲ. ಹೀಗಾಗಿ ಜನ ಸರ್ಕಾರದ ಬಗ್ಗೆ ಶಪಿಸುತ್ತಿದ್ದಾರೆ ಎಂದು ಟೀಕಿಸಿದರು.

ಮಾಧ್ಯಮಗಳ ಮುಂದೆ ಶಾಸಕರ ಹೇಳಿಕೆ ಬಗ್ಗೆ ಡಿಕೆಶಿ ಕೇಳಿ: ಸಚಿವ ಚಲುವರಾಯಸ್ವಾಮಿ

ಸಾರಾಯಿ ಸಪ್ಲೈ ಮಾಡಲಿ: ಹೇಗೆ ಮನೆ ಮನೆಗೆ ಹಾಲು ಕೊಡುತ್ತಾರೋ ಹಾಗೆಯೇ ಸಾರಾಯಿ ಸಪ್ಲೈ ಮಾಡಲಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿ ತೆರೆಯುವ ವಿಚಾರ ಪ್ರಸ್ತಾಪಿಸಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಬಾಗಲಕೋಟೆಯಲ್ಲಿ ವಾಗ್ದಾಳಿ ನಡೆಸಿದ ಅವರು, ತಿಮ್ಮಾಪುರ ಅವರಿಗೆ ಇದರಿಂದ ಹೆಸರು ಕೀರ್ತಿ ಬರುತ್ತದೆ. ಅವರ ಹೆಸರು ಅಜರಾಮರವಾಗಿ ಇತಿಹಾಸದ ಪುಟದಲ್ಲಿ ಉಳಿಯುತ್ತದೆ. 3 ಸಾವಿರ ಜನಸಂಖ್ಯೆ ಇರುವ ಊರುಗಳಿಗೆ ಸಾರಾಯಿ ಅಂಗಡಿ ಕೊಡ್ತಿನಿ. ಪಾಪ ಅವರೆಲ್ಲ ಸಿಟಿಗೆ ಹೋಗಿ ತರಲು ₹10 ಖರ್ಚು ಮಾಡಬಾರದು. ಮನೆ ಬಾಗಿಲಿಗೆ ಮುಟ್ಟಿಸಿ ಪುಣ್ಯ ಕಟ್ಟಿಕೊಳ್ತಿನಿ ಅಂತ ಹೇಳಿದ್ದಾರೆ. ಅವರ ಹೆಂಡರು, ಮಕ್ಕಳಿಗೆ ಪುಣ್ಯ ಬರಲಿ ಅಂತ ₹10 ಉಳಿಸುವ ಪ್ರಯತ್ನ ಮಾಡ್ತಿದಾರೆ. ಸಚಿವರು ಸಾರಾಯಿ ಅಂಗಡಿ ಓಪನ್ ಮಾಡಿ ಜನರು ದುಡಿಯದಂಗೆ ಮಾಡಿ ಅವರ ಸಂಸಾರ ಹಾಳು ಮಾಡಿ ಖುಷಿ ಪಡುವಲ್ಲಿ ತಲ್ಲೀನರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios