ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪರ ನಿಂತ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಬಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರನ್ನು ಗೋಸುಂಬೆಗೆ ಹೋಲಿಸಿರುವ ಅವರು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಸವಾಲು

ಮೈಸೂರು (ಅ.15): ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಿಚ್ಚು ಭುಗಿಲೆದ್ದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ನಡೆಸಿದ್ದಾರೆನ್ನಲಾದ ಸ್ಟಿಂಗ್ ಆಪರೇಷನ್ ಸಂಬಂಧ ಕೇಂದ್ರ ಸಚಿವ ಹೆಚ್‌ಡಿ ಕುಮಾರ್ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಗಂಭೀರ ಆರೋಪ ಮಾಡುವ ಮೂಲಕ ಒಂದು ಕಾಲದ ವಿರೋಧಿ ಸಿದ್ದರಾಮಯ್ಯರ ಬೆನ್ನಿಗೆ ನಿಲ್ಲುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಇದೀಗ ಸಚಿವ ಬಾಲಕೃಷ್ಣ ಹೆಚ್‌ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಗೋಸುಂಬೆ ಇದ್ದಹಾಗೆ..!

ಕುಮಾರಸ್ವಾಮಿ ಒಂದು ರೀತಿ ಗೋಸುಂಬೆ ಇದ್ದಹಾಗೆ. ಯಾವಾಗ, ಹೇಗೆ ಬಣ್ಣ ಬದಲಾಯಿಸುತ್ತಾರೆಂಬುದು ಗೊತ್ತಾಗುವುದಿಲ್ಲ. ಊಹಿಸುವುದು ಕಷ್ಟ. ಈ ಹಿಂದೆ ನಖಶಿಖಾಂತ ಉರಿದುಬಿಳುತ್ತಿದ್ದ ಕುಮಾರಸ್ವಾಮಿ ಈ ಸಿದ್ದರಾಮಯ್ಯರ ಮೇಲೆ ಪ್ರೀತಿ ತೋರಿಸಿದ್ದಾರೆ. ಸಿದ್ದರಾಮಣ್ಣ ಹಿಂಗೆ ಆಗಬಾರದಿತ್ತು ಎಂದಿದ್ದಅರೆ. ಕುಮಾರಸ್ವಾಮಿಯವರ ಪ್ರೀತಿ ಎಂದರೆ ತುಂಬಾ ಅಪಾಯಕಾರಿ. ಅವರ ಬಗ್ಗೆ ಎಲ್ಲ ವಿಚಾರಗಳು ಗೊತ್ತಾದ ಮೇಲೆಯೇ ನಾನು ಅವರಿಂದ ದೂರವಾಗಿದ್ದು ಎಂದು ಸಚಿವ ಬಾಲಕೃಷ್ಣ ಹೇಳಿದರು.

ದಿನಾ ಬೆಳಗಾದ್ರೆ ಸುದ್ದಿಗೋಷ್ಟಿ

ಮೈಸೂರಿಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು. ಈ ದೇಶದಲ್ಲಿ ಪ್ರತಿನಿತ್ಯ ಸುದ್ದಿಗೋಷ್ಠಿ ನಡೆಸುವ ಕೇಂದ್ರ ಸಚಿವರು ಯಾರಾದರೂ ಇದ್ದಾರಾ? ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಮಾತನಾಡುವುದನ್ನು ನೋಡಿದ್ದೇವೆ. ಆದರೆ ಇವರು(ಕುಮಾರಸ್ವಾಮಿ) ದಿನಾ ಬೆಳಗಾದರೆ ಎದ್ದು ಆರೋಪ ಮಾಡೋದೇ ಇವರ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿಯವರೇ ಸಿಬಿಐ ತನಿಖೆ ಮಾಡಿಸಿ

ಕುಮಾರಸ್ವಾಮಿಯವರೇ, ಮಾತನಾಡುವ ಬದಲು ನಿಮ್ಮ ಬಳಿಯೇ ಕೇಂದ್ರ ಸರ್ಕಾರ ಇದೆಯಲ್ಲ ಈ ಪ್ರಕರಣವನ್ನು ಸಿಬಿಐ ಕೊಟ್ಟು ತನಿಖೆ ಮಾಡಿಸಬಹುದಲ್ಲ? ಇವರ ಬಳಿ ಏನೇನು ದಾಖಲೆ ಇದೆಯೋ ಅವೆಲ್ಲವೂ ತೆಗೆದುಕೊಂಡು ಹೋಗಿ ಸಿಬಿಐಗೆ ಕೊಡಲಿ, ಅವರು ತನಿಖೆ ಮಾಡಲಿ. ಅದಬಿಟ್ಟು ದಿನಾ ಬೆಳಗಾದರೆ ಸುಮ್ಮನೆ ಮಾತನಾಡುವುದು ಬೇಡ ಎಂದು ತಿರುಗೇಟು ನೀಡಿದರು.

ಈ ಪ್ರಕರಣದಲ್ಲಿ ಅಪಪ್ರಚಾರ ತಡೆಯಲು ಸಿದ್ದರಾಮಯ್ಯ ಅವರು ತಡೆಯಾಜ್ಞೆ ತಂದಿದ್ದಾರೆ. ಅದು ಅವರ ನಿರ್ಧಾರ. ನಮ್ಮ ಸರ್ಕಾರದಲ್ಲಿ ಅಂತಹದ್ದು ಯಾವುದೂ ನಡೆದಿಲ್ಲ. ಇದರ ಬಗ್ಗೆ ಕುಮಾರಸ್ವಾಮಿ ಅವರನ್ನೇ ಕೇಳಿ ಎಂದರು.