ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ನಾಯಕರು ಶೂರರು; CM ಬದಲಾವಣೆಗೆ ಶ್ರೀರಾಮುಲು ಪ್ರತಿಕ್ರಿಯೆ
ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ಬಿ.ಶ್ರೀರಾಮುಲು ಸುಳ್ಳು ಎಂಬುದು ಕಾಂಗ್ರೆಸ್ ಪಕ್ಷದ ಮನೆದೇವರು ಇದ್ದಂತೆ. ಸುಳ್ಳು ಹೇಳುವಲ್ಲಿ ಕಾಂಗ್ರೆಸ್ ನಾಯಕರು ಶೂರರು, ನಿಪುಣರು ಎಂದು ಕಿಡಿಕಾರಿದರು.
ಚಿತ್ರದುರ್ಗ (ಆ.10): ಮೊಳಕಾಲ್ಮೂರಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಸಿಎಂ ಬೊಮ್ಮಾಯಿ ಬದಲಾವಣೆ ಬಗ್ಗೆ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸುಳ್ಳು ಎಂಬುದು ಕಾಂಗ್ರೆಸ್ ಪಕ್ಷದ ಮನೆದೇವರು ಇದ್ದಂತೆ. ಸುಳ್ಳು ಹೇಳುವಲ್ಲಿ ಕಾಂಗ್ರೆಸ್ ನಾಯಕರು ಶೂರರು, ನಿಪುಣರು ಎಂದು ಕಿಡಿಕಾರಿದರು. ಸಿಎಂ ಬದಲಾವಣೆ ಎಂಬುದು ಅವರ ಮೂರ್ಖತನ ತೋರುತ್ತಿದೆ. ಕಾಂಗ್ರೆಸ್ ನಾಯಕರು ಹಿಟ್ ಅಂಡ್ ರನ್ ಮಾಡುತ್ತಾರೆ. ಕಾಂಗ್ರೆಸ್ ಹಿಟ್ ವಿಕೆಟ್ ಆಗುತ್ತಿದೆ, ಬೇರೆಯವರು ಸೋಲಿಸಬೇಕಿಲ್ಲ. ಹಿಂದೆ ದಲಿತ ನಾಯಕ ಡಾ.ಪರಮೇಶ್ವರರನ್ನು ಸೋಲಿಸಲಾಗಿತ್ತು. ಸ್ವಯಂ ಘೋಷಿತ ಹಿಂದುಳಿದ ನಾಯಕ ಸಿದ್ಧರಾಮಯ್ಯ ಸೋಲಿಸಿದ್ದರು 2023ರ ಚುನಾವಣೆಯಲ್ಲಿ ಸಿದ್ಧರಾಮಯ್ಯರನ್ನು ಡಿಕೆಶಿ ಸೋಲಿಸುತ್ತಾರೆ. ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಬಗ್ಗೆ ಶ್ರೀರಾಮುಲು ಲೇವಡಿ ಮಾಡಿದರು. ನಿಮ್ಮ ಕಾಂಗ್ರೆಸ್ ಪಕ್ಷ ಒಡೆದು ಚೂರಾಗಿದೆ, ಜೋಡಿಸಿಕೊಳ್ಳಿ ಎಂದು ಲೇವಡಿ ಮಾಡಿದರು. ಸಿದ್ಧರಾಮೋತ್ಸವದಂತ ನೂರು ಉತ್ಸವ ಮಾಡಿದರೂ ಬಿಜೆಪಿಗೆ ಭಯವಿಲ್ಲ. ಮೂವತ್ತು ಜಿಲ್ಲೆಗಳಲ್ಲಿ ಮೂರು ಕೋಟಿ ಜನರನ್ನು ಸೇರಿಸುತ್ತೇವೆ. ನಾವು ಸಮಾವೇಶ ಮಾಡಬೇಕೆಂದರೆ ಮಾಡಲಾಗದೇನು? ರಾಜ್ಯದಲ್ಲಿ ನೆರೆ ಹಾವಳಿಯಿಂದ ಜನರು ಸಾಯುತ್ತಿದ್ದಾರೆ.
ಜನರು ಆತಂಕದಲ್ಲಿರುವ ಸಂದರ್ಭದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕೆ? ದೆಹಲಿಯಿಂದ ಕಾಂಗ್ರೆಸ್ ಪಕ್ಷದ ಅಂಪೈರ್ ಬಂದಿದ್ದರಲ್ಲ. ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ ಸಚಿವ ಶ್ರೀರಾಮುಲು. ಅಂಪೈರ್ ಮನವೊಲಿಸಲು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಅಂಪೈರ್ ಯಾರನ್ನೂ ಇನ್ ಮಾಡಿಲ್ಲ, ಯಾರನ್ನೂ ಔಟ್ ಮಾಡಿಲ್ಲ. ಅಂಪೈರ್ ಡಿಸಿಜನ್ ಪೆಂಡಿಂಗ್ ಇರಿಸಿ ಹೋಗಿದ್ದಾರೆ.
ಸ್ವಯಂ ಘೋಷಿತ ಹಿಂದುಳಿದ ನಾಯಕ ಸಿದ್ದರಾಮಯ್ಯರಿಂದ ಜಾತಿ ವಿಷ ಬೀಜ. ಮುಂದೆ ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ದೇಶದ ಮೇಲೆ ಗೌರವ ಇಲ್ಲದೆ ಹರ್ ಘರ್ ತಿರಂಗಾ ಬಗ್ಗೆ ಟೀಕೆ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಟ್ವಿಟ್‌ಗೆ ಸಚಿವ ಸಿ.ಸಿ. ಪಾಟೀಲ್ ತಿರುಗೇಟು: ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲಾಗಿದ್ದು ವಿನಾಃಕಾರಣ ಮುಖ್ಯಮಂತ್ರಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರು ಸಿಎಂ ಬದಲಾವಣೆ ಕುರಿತ ಕಾಂಗ್ರೆಸ್ ಟ್ವಿಟ್‌ಗೆ ತಿರುಗೇಟು ನೀಡಿದ್ದಾರೆ.
ಸಿಎಂ ಬೊಮ್ಮಾಯಿ ಬಗ್ಗೆ ಹರಡೋ ವದಂತಿಯನ್ನು ಬಹುತೇಕರು ಯಾಕೆ ಅಷ್ಟು
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಬದಲಾವಣೆ ನೂರಕ್ಕೆ ನೂರು ಸುಳ್ಳು. ಅವರು ಸಮರ್ಥವಾಗಿ ಆಡಳಿತ ನಡೆಸುತಿದ್ದಾರೆ ಎಂದು ಸಮರ್ಥಿಸಿಕೊಂಡರು. ರಾಜ್ಯದ ಇತಿಹಾಸದಲ್ಲಿ ಯಡಿಯೂರಪ್ಪನವರ ನಂತರ ರೈತರ ಹಾಗೂ ರೈತರ ಮಕ್ಕಳಿಗೆ ಸಹಾಯ ಮಾಡಿದವರು ಬೊಮ್ಮಾಯಿ ಎಂದ ಅವರು ಅವರ ಯೋಜನೆಯಿಂದ ಲಕ್ಷಾಂತರ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಂಡಿದ್ದಾರೆ.
ಸಿಎಂ ಬದಲಾವಣೆ ಎಲ್ಲಾ ವದಂತಿ, ಕಾಂಗ್ರೆಸ್ ಗೆ ಬುದ್ದಿ ಭ್ರಮಣೆ ಆಗಿದೆ: ಆರ್ ಅಶೋಕ್ ವಾಗ್ದಾಳಿ
ಕಾಂಗ್ರೆಸ್‌ನವರು ಒಳ್ಳೆಯ ಆಡಳಿತ ಸಹಿಸಲಾಗದೇ ಸಿಎಂ ಬೊಮ್ಮಾಯಿ ಬದಲಾವಣೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ದಾರಿ ತಪ್ಪಿಸಿಸುತಿದ್ದಾರೆ ಎಂದು ಹರಿಹಾಯ್ದ ಅವರು 2023ರಲ್ಲೂ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತದೆ. ಸಿಎಂ ಬದಲಾವಣೆ ಆಗುತ್ತಾರೆ ಎಂದು ಮಾಜಿ ಶಾಸಕ ಸುರೇಶ್‌ಗೌಡರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಿಎಫ್‌ಐ, ಎಸ್‌ಡಿಪಿಐ ನಿಷೇಧ ಮಾಡುವಂತೆ ಕೇಂದ್ರಕ್ಕೆ ಆಗ್ರಹಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯಾಧ್ಯಕ್ಷರ ಬದಲಾವಣೆನೂ ಇಲ್ಲ ಎಂದ ಅವರು ಸಿದ್ದರಾಮಯ್ಯರಿಗೆ ಕೇಸರಿ ಅಂದರೆ ಹಾಗೂ ಹಿಂದೂ ಎಂದರೆ ವಾಕರಿಕೆ ಎಂದರು.