ಬೆಂಗಳೂರು, [ಫೆ.23]: ಉಪಮುಖ್ಯಂತ್ರಿ ಹುದ್ದೆ ಸಿಕ್ಕಿಲ್ಲವೆಂದು ಸಚಿವ ಶ್ರೀರಾಮುಲು ಬಿಜೆಪಿ ನಾಯಕರ ಮೇಲೆ ಮುನಿಸಿಕೊಂಡಿದ್ದಾರೆ. ಇದರ ಮಧ್ಯೆ ರಾಮುಲು, ಎಚ್.ಡಿ.ದೇವೇಗೌಡರನ್ನ ಭೇಟಿ ಮಾಡಿದ್ದು, ಹಲವರಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಮೊದಲೇ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಳ್ಳುತ್ತಿರುವ ಶ್ರೀರಾಮುಲು ಇಂದು [ಭಾನುವಾರ] ದೇವೇಗೌಡ್ರ ನಿವಾಸಕ್ಕೆ ಹೋಗಿರುವುದು ಬೇರೆ ಮಾತುಗಳು ಹರಿದಾಡುತ್ತಿವೆ.

ಶ್ರೀರಾಮುಲು ಮಗಳ ಮದುವೆ: ವಧು, ವರರಿಗೆ ಶುಭ ಕೋರಿದ ಮೋದಿ

ಪುತ್ರಿ ಮದುವೆಗ ಆಹ್ವಾನಿಸಿದ ರಾಮುಲು


ಅಷ್ಟಕ್ಕೂ ಶ್ರೀರಾಮುಲು, ದೇವೇಗೌಡರ ಮನೆಗೆ ಹೋಗಿದ್ದು ಯಾವುದೇ ರಾಜಕೀಯ ಉದ್ದೇಶಕ್ಕಲ್ಲ. ಬದಲಾಗಿ ಅವರ ಪುತ್ರಿಯ ಮದುವೆಯ ಆಹ್ವಾನ ಪತ್ರಿಕೆ ನೀಡಲು ದೊಡ್ಡಗೌಡ ನಿವಾಸಕ್ಕೆ ಹೋಗಿದ್ದಾರೆ.

ಪದ್ಮನಾಭನಗರದಲ್ಲಿ ಗೌಡ್ರ ಮನೆಗೆ ಹೋಗಿರುವ ಶ್ರೀರಾಮುಲು ತಮ್ಮ ಮಗಳ ಮದುವೆಗೆ ಬರುವಂತೆ ಆಹ್ವಾನಿಸಿದರು.   ಮಾರ್ಚ್​ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಮುಲು ಪುತ್ರಿ ರಕ್ಷಿತಾಳ  ಮದುವೆ ನಡೆಯಲಿದ್ದು, ಈಗಾಗಲೇ ಹಲವು ಗಣ್ಯರನ್ನು ಆಹ್ವಾನಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೈ ಕಮಾಂಡ್​ನ ಹಲವು ರಾಜಕೀಯ ನಾಯಕರಿಗೆ ಆಮಂತ್ರಣ ನೀಡಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ಬೆಂಗಳೂರಿನ ತಾಜ್​ ಹೋಟೆಲ್​ನಲ್ಲಿ ರಕ್ಷಿತಾ ಹಾಗೂ ಲಲಿತ್​ ಕುಮಾರ್​ ನಿಶ್ಚಿತಾರ್ಥ ನಡೆದಿತ್ತು.