'ಮಾಜಿ ಸಚಿವ ಸಿಪಿ ಯೋಗೆಶ್ವರ್ ಗೆ ಕಾಂಗ್ರೆಸ್ ಸೇರುವ ವಿಚಾರ : ಅವರು ಇಲ್ಲಿಯೇ ಬೆಳೆಯುತ್ತಾರೆ'

  • ಮಾಜಿ ಸಚಿವ ಸಿಪಿ ಯೋಗೆಶ್ವರ್ ಗೆ ಕಾಂಗ್ರೆಸ್ ಸೇರುವಂತೆ ಡಿಕೆಶಿ ಆಹ್ವಾನ ವಿಚಾರ
  • ಆಹ್ವಾನ ವಿಚಾರಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ
Minister ashwath narayan reacts on CP Yogeshwar Politics snr

ಬೆಂಗಳೂರು (ನ.06): ಮಾಜಿ ಸಚಿವ ಸಿಪಿ ಯೋಗೆಶ್ವರ್ ಗೆ (CP yogeshwar ) ಕಾಂಗ್ರೆಸ್ (Congress) ಸೇರುವಂತೆ ಡಿಕೆಶಿ (DK Shivakumar) ಆಹ್ವಾನ ವಿಚಾರಕ್ಕೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ (Ashwath narayan) ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣದಲ್ಲಿಂದು (Channapattana) ಮಾತನಾಡಿದ ಅಶ್ವತ್ ನಾರಾಯಣ್ ನಮ್ಮ ಪಕ್ಷದ ನಾಯಕರಿಗೆ ಇಷ್ಟೊಂದು ಮಾನ್ಯತೆ ನೀಡಿದ್ದಾರೆ. ಆದರೆ ಯೋಗೇಶ್ವರ್ ಬಿಜೆಪಿ (BJp) ಬಿಡುವ ಪ್ರಶ್ನೇಯೆ ಇಲ್ಲ.  ಯೋಗೇಶ್ವರ್ ನಮ್ಮ ಪಕ್ಷದಲ್ಲೇ ಇರುತ್ತಾರೆ. ನಮ್ಮ ನಾಯಕರಾಗಿ ಇರುತ್ತಾರೆ. ಮುಂದಿನ ಚುನಾವಣೆಯಲ್ಲಿ (election) ಚನ್ನಪಟ್ಟಣದಲ್ಲೇ ಸ್ಫರ್ಧೆ ಮಾಡುತ್ತಾರೆ ಎಂದರು. 

ನಮ್ಮ ನಾಯಕರಾಗಿ ಎಲ್ಲ ಕಡೆ ಸದೃಢವಾಗಿ ಸಿಪಿ ಯೋಗೆಶ್ವರ್ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರಿಗೆ ಪ್ರತಿ ಪಕ್ಷದ ನಾಯಕರು ಮನ್ನಣೆ ನೀಡುವಾಗ  ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ. ನಮ್ಮ ಪಕ್ಷದ ನಾಯಕರ ಶಕ್ತಿ ಮತ್ತು ಅವರ ಪ್ರತಿಭೆಗೆ ಮನ್ನಣೆ ನೀಡಿ ಕಾಂಗ್ರೆಸ್ (Congress) ಪಕ್ಷಕ್ಕೆ ಕರೆಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರ ಜೊತೆ ಹೊಗೊಲ್ಲ ಎಂದು ಸಚಿವ  ಅಶ್ವತ್ ನಾರಾಯಣ್ ಹೇಳಿದರು. 

ಸಿಪಿವೈ ಸಾಕಷ್ಟು ಬಾರಿ ಅವರು ಸಚಿವರಾಗಿ ಕೆಲಸ ಮಾಡಿದ್ದಾರೆ. ಸಚಿವ ಸ್ಥಾನ ಅವರಿಗೇನು ಹೊಸದಲ್ಲ, ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ.  ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಸಂಘಟನೆ ಮಾಡ್ತಿದ್ದಾರೆ. ಅವರಿಗೆ ಯಾವೆಲ್ಲಾ ಗೌರವ ಸ್ಥಾನ ಮಾನ ನೀಡಬೇಕು ಎಲ್ಲವೂ ಸಿಗುತ್ತದೆ ಎಂದರು.

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ

 

ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್‌ (Congress) ಅಧಿಕಾರಕ್ಕೆ ಬರಲ್ಲ. ಯಾವುದೇ ಕಾರಣಕ್ಕೂ ಅಧಿಕಾರ ಮಾಡೋದೆ ಇಲ್ಲ. ನಮ್ಮ ಶಾಸಕರು ಯಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಐಟಿ- ಬಿಟಿ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌ (Dr CN Ashwath Narayan) ತಿಳಿಸಿದರು.

ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಅವರು, ಕಾಂಗ್ರೆಸ್‌ ರಾಷ್ಟ್ರ ಮಟ್ಟದಲ್ಲೇ ಒಡೆದು ನೂರು ಭಾಗವಾಗಿದೆ. ರಾಜ್ಯ ಕಾಂಗ್ರೆಸ್‌ ನಾಯಕತ್ವಕ್ಕೆ ಕಿತ್ತಾಟ ಶುರುವಾಗಿದೆ. ನಾನು ಬರೆದುಕೊಡ್ತೀನಿ ಯಾವ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ. ನಮ್ಮ ಶಾಸಕರಾರು ಕಾಂಗ್ರೆಸ್‌ಗೆ ಹೋಗಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಲೆ ಬಗ್ಗೆ ಯಡಿಯೂರಪ್ಪ (BS Yediyurappa) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾಸನಕ್ಕೆ ಹೋಗಿ ಕೇಳಿದ್ರು ಶೇ.65 ಜನ ಮೋದಿ ಪ್ರಧಾನಿ ಆಗಬೇಕು ಅಂತಾರೆ. ಕನಕಪುರಕ್ಕೂ ಹೋಗಿ ಕೇಳಿದ್ರು ಮೋದಿ ಹೇಸರೇಳ್ತಾರೆ. ಅಲ್ಲೆಲ್ಲೂ ಸ್ಥಳೀಯ ನಾಯಕರ ಹೆಸರೇಳಲ್ಲ. ನರೇಂದ್ರ ಮೋದಿ ಅಲೆ ಸದಾ ಇದ್ದೆ ಇರುತ್ತೆ ಎಂದು ಅವರು ದಳಪತಿಗಳು ಹಾಗೂ ಡಿಕೆ ಶಿವಕುಮಾರ್‌ಗೆ (DK Shivakumar) ಟಾಂಗ್‌ ನೀಡಿದರು.

ಉಪ ಚುನಾವಣೆ (Karnataka By Election) ಉಸ್ತುವಾರಿಗಳ ಪಟ್ಟಿಯಲ್ಲಿ ಯಾರನ್ನ ಕೈ ಬಿಟ್ಟಿದು ಎಂಬುದು ಮುಖ್ಯವಲ್ಲ. ಬಿಜೆಪಿಯಲ್ಲಿ (BJP) ಎಲ್ಲರೂ ಪ್ರಚಾರದಲ್ಲಿ ಭಾಗವಹಿಸಬಹುದು. ಬಿ.ವೈ. ವಿಜಯೇಂದ್ರ (BY Vijayendra) ಅವರನ್ನ ಪ್ರಚಾರಕ್ಕೆ ಬಳಸಿಕೊಳ್ತಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

40 ಅಲ್ಲ ನಾಲ್ವರನ್ನು ಕರೆದೊಯ್ಯಲಿ

ಬಿಜೆಪಿ (BJP) ಶಾಸಕರು ಸಿಂಹಗಳಿದ್ದಂತೆ. ಅವರು ಮಾರಾಟದ ವಸ್ತುಗಳಲ್ಲ. ಅವರಾರ‍ಯರೂ ಕಾಂಗ್ರೆಸ್‌ಗೆ (Congress) ಹೋಗುವ ಮಾತೇ ಇಲ್ಲ. 40 ಅಲ್ಲ, ನಾಲ್ಕು ಜನ ಶಾಸಕರನ್ನು ಕಾಂಗ್ರೆಸ್‌ ಪಕ್ಷ ಸೆಳೆದು ತೋರಿಸಲಿ ನೋಡೋಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ (KS Eshwarappa) ವ್ಯಂಗ್ಯವಾಡಿದ್ದಾರೆ. 

ನಲವತ್ತು ಶಾಸಕರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಾರೆ ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (DK shivakumar) ಹೇಳುತ್ತಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡವರಷ್ಟೇ ಈ ಮಾತು ಹೇಳಬೇಕಷ್ಟೆ.

 ಸಾಯುವ ಪಕ್ಷಕ್ಕೆ ಯಾರಾದರೂ ಹೋಗ್ತಾರಾ? ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ ಪಕ್ಷ ಮೊದಲು ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಕೆಲಸ ಮಾಡಲಿ.

 ಕಾಂಗ್ರೆಸ್‌ ಈ ಹಿಂದೆ ಮಾಡಿದ ಕೆಲಸಗಳ ಬಗ್ಗೆ ಪಟ್ಟಿಕೊಡಲಿ, ನಂತರ ನಾವು ಕೊಡುತ್ತೇವೆ. ಅನೇಕ ರಾಷ್ಟ್ರಗಳ ಮುಸ್ಲಿಮರು ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಜೆಡಿಎಸ್‌ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿದರೆ ಕಾಂಗ್ರೆಸ್‌ಗೆ ಭಯವಾಗುತ್ತದೆ ಎಂದರು.

Latest Videos
Follow Us:
Download App:
  • android
  • ios