Asianet Suvarna News Asianet Suvarna News

ನಳಿನ್ ಕುಮಾರ್ ಕಟೀಲ್ ಗೆ ಲೀಗಲ್ ನೋಟೀಸ್ ನೀಡಲು ಎಂ.ಬಿ.ಪಾಟೀಲ್ ನಿರ್ಧಾರ

ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ 420 ಕೋಟಿ ಭ್ರಷ್ಟಾಚಾರ ಮಾಡಿರುವುದಾಗಿ ನನ್ನ ವಿರುದ್ಧ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಲೀಗಲ್ ನೋಟಿಸ್‌ ನೀಡಲು ಎಂ ಬಿ ಪಾಟೀಲ್ ನಿರ್ಧರಿಸಿದ್ದಾರೆ.

MB Patil decide  legal notice against Nalin Kumar Kateel over Rs 400-cr scam in Malaprabha project alligation gow
Author
First Published Sep 26, 2022, 3:59 PM IST

ಮಂಗಳೂರು (ಸೆ.26): ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿಯಲ್ಲಿ 420 ಕೋಟಿ ಭ್ರಷ್ಟಾಚಾರ ಮಾಡಿರುವುದಾಗಿ ನನ್ನ ವಿರುದ್ಧ ಆರೋಪ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಲೀಗಲ್ ನೋಟಿಸ್‌ ನೀಡುತ್ತೇನೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ  ಮಾತನಾಡಿದ ಅವರು, ನಳಿನ್ ಕುಮಾರ್ ‌ಕಟೀಲ್ ಗೆ ಮಲಪ್ರಭಾ ನಾಲೆ ಬಗ್ಗೆ ಗೊತ್ತಿಲ್ಲ. ಆದರೂ ಅದರ ಬಗ್ಗೆ ‌ನನ್ನ ವಿರುದ್ದ ಆರೋಪ ಮಾಡಿದ್ದಾರೆ. ಅವರಿಗೆ ಅದರ ಬಗ್ಗೆ ‌ಗೊತ್ತೇ ಇಲ್ಲ, ಹೀಗಾಗಿ ಅವರಿಗೆ ‌ನೋಟೀಸ್ ಕೊಡುತ್ತೇನೆ. ನಳಿನ್ ‌ಇದರ ಯಾವುದೇ ಪರಿಜ್ಞಾನ ಇಲ್ಲದೇ ನನ್ನ ಮೇಲೆ ಆರೋಪ ಮಾಡಿದ್ದಾರೆ. ನಳಿನ್ ಕುಮಾರ್ ಪುಣ್ಯಾತ್ಮನಿಗೆ ಇದರ ಬಗ್ಗೆ ಗೊತ್ತೇ ಇಲ್ಲ. ಆದರೂ ಸುಖಾಸುಮ್ಮನೆ ಆರೋಪ ಮಾಡ್ತಾ ಇದಾರೆ. ನಳಿನ್ ಕುಮಾರ್ ‌ಕಟೀಲ್ ಗೆ ಮೆದುಳು ಇದ್ಯೋ ಗೊತ್ತಿಲ್ಲ.‌ ಎಲ್ಲಾ ದಾಖಲೆ ಇಟ್ಟು ನಾನು ನಳಿನ್ ‌ಕುಮಾರ್ ಕಟೀಲ್ ಅವರಿಗೆ ಲೀಗಲ್ ನೋಟೀಸ್ ಕೊಡ್ತಾ ಇದ್ದೇನೆ  ಎಂದು ಹೇಳಿದ್ದಾರೆ.

ಮಲಪ್ರಭಾ ನಾಲೆ ಆಧುನೀಕರಣ ಕಾಮಗಾರಿಯನ್ನು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ಈ ಕಾಮಗಾರಿಗಿಂತ ಹೆಚ್ಚು ಮೊತ್ತವನ್ನು ಇದರ ವಿತರಣಾ ನಾಲೆಗಳ ಅಭಿವೃದ್ಧಿಗೆ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವೆಚ್ಚ ಮಾಡಲಾಗಿದೆ. ಅವರ ವಿರುದ್ಧ ನೀವು ಕೋಟಿ ಭ್ರಷ್ಟಾಚಾರದ ಆರೋಪ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದರು.

ಮಲಪ್ರಭಾ ನಾಲೆ ಹಾದುಹೋಗುವ ಪ್ರದೇಶ ಎರಿ ಭೂಮಿ. ಇಂತಹ ಮಣ್ಣಿನಲ್ಲೂ ದೀರ್ಘ ಬಾಳಿಕೆ ಬರುವಂತೆ ಯಾವ ರೀತಿ ಕಾಲುವೆ ನಿರ್ಮಿಸಬೇಕು ಎಂಬ ಬಗ್ಗೆ ತಜ್ಞರು ಶಿಫಾರಸು ಮಾಡಿದ್ದರು. ಅದರ ಪ್ರಕಾರವೇ ಕಾಮಗಾರಿ ನಡೆಸಲಾಗಿದೆ. ಪುಣ್ಯಾತ್ಮ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮಲಪ್ರಭಾ ನಾಲೆ ಬಿಡಿ, ಈ ಭಾಗದ ವಾರಾಹಿ ನಾಲೆಯ ಬಗ್ಗೆಯೂ ಗೊತ್ತಿರಲಿಕ್ಕಿಲ್ಲ. ಅವರ ಮಿದುಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹಾಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ವಿದ್ಯುತ್‌ ಲೋಕೋಮೋಟಿವ್‌ಗೆ ಹಸಿರು ನಿಶಾನೆ
 ಹುಬ್ಬಳ್ಳಿ: ಇಲ್ಲಿನ ಡೀಸೆಲ್‌ ಲೋಕೋಶೆಡ್‌ನ ಮೊಟ್ಟಮೊದಲ ಎರಡು ವಿದ್ಯುತ್‌ ಲೋಕೋಮೋಟಿವ್‌ ‘ಮಲಪ್ರಭಾ’ (43046) ಮತ್ತು ‘ಘಟಪ್ರಭಾ’ (43045)ಗೆ ನೈಋುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಶನಿವಾರ ಹಸಿರು ನಿಶಾನೆ ತೋರಿದರು.

ಬಳಿಕ ಮಾತನಾಡಿದ ಅವರು, ಈಗ ಹುಬ್ಬಳ್ಳಿಯ ಡೀಸೆಲ್‌ ಲೋಕೋಶೆಡ್‌ನ್ನು ವಿದ್ಯುತ್‌ ಲೋಕೋಮೋಟಿವ್‌ಗಾಗಿ ಉನ್ನತೀಕರಿಸಲಾಗುತ್ತಿದೆ. ಸದ್ಯ 239 ಲೋಕೋಮೋಟಿವ್‌ಗಳ ಧಾರಣ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ರೈಲ್ವೆಯಲ್ಲಿ ಹುಬ್ಬಳ್ಳಿಯ ಡೀಸೆಲ್‌ ಲೋಕೋಶೆಡ್‌ನ್ನು ಎಚ್‌ಎಚ್‌ಪಿ ಡೀಸೆಲ್‌ ಲೋಕೋಮೋಟಿವ್‌ಗಳ ಮಾತೃ ಶೆಡ್‌ ಎಂದೇ ಪರಿಗಣಿಸಲಾಗಿದೆ ಎಂದರು.

ನೈಋುತ್ಯ ರೈಲ್ವೆಯ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ ಹೊಸ ಲೋಕೋಮೋಟಿವ್‌ ಎಂಜಿನ್‌ ಲ್ಯೂಬ್‌ ಆಯಿಲ್‌ ಸಂಗ್ರಹಣಾ ಸೌಲಭ್ಯ ಉದ್ಘಾಟಿಸಿದರು.

ಕಾಂಗ್ರೆಸ್ ಹಗರಣದ ಬಗ್ಗೆ ಸ್ಕ್ಯಾಮ್ ರಾಮಯ್ಯ ಹೆಸರಿನಡಿ ಬಿಜೆಪಿಯಿಂದ ಪುಸ್ತಕ ಬಿಡುಗಡೆ

ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಮುಖ್ಯ ವಿದ್ಯುತ್‌ ಎಂಜಿನಿಯರ್‌ ಜೈಪಾಲ್‌ ಸಿಂಗ್‌, ವರಿಷ್ಠ ವಿಭಾಗೀಯ ಯಾಂತ್ರಿಕ ಎಂಜಿನಿಯರ್‌ (ಡೀಸೆಲ್‌ ಲೋಕೋಶೆಡ್‌) ಭೇಷ್‌ ದತ್ತ್ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದಾಗಿ ಕರ್ನಾಟಕದ ಇಮೇಜ್‌ ಹಾಳಾಗಿದೆ: ಎಂಬಿಪಾ

ಇದೇ ವೇಳೆ ನೈಋುತ್ಯ ರೈಲ್ವೆಯಿಂದ ಸೆ. 16ರಿಂದ ಅ. 2ರ ವರೆಗೆ ಸ್ವಚ್ಛತಾ ಪಾಕ್ಷಿಕ ಆಚರಣೆ ಹಿನ್ನೆಲೆ ಡೀಸೆಲ್‌ ಶೆಡ್‌ನ ಆವರಣದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿ ಗಿಡ ನೆಟ್ಟರು.

Follow Us:
Download App:
  • android
  • ios