*ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಎಲ್ಲವನ್ನು ಕೊಟ್ಟಿದೆ.*ಆದ್ರೆ ಮನುಷ್ಯನಿಗೆ ಆಸೆ ಇರಬೇಕು ದುರಾಸೆ ಇರಬಾರದು*ಮಂಡ್ಯದಲಿ ಮಾಜಿ ಸಿಎಂ ಸಿದ್ದರಾಮಯ್ಯ  ಹೇಳಿಕೆ 

ಮಂಡ್ಯ (ಮಾ. 13): ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಹಾಗೂ ಜೆಡಿಎಸ್‌ ಸೇರುವ ಘೋಷಣೆ ಮಾಡಿದ್ದಾರೆ. ಈ ಬೆನ್ನಲ್ಲೇ ಮಂಡ್ಯದ ಮದ್ದೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನಸಭಾ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ "ಒಲ್ಲದ ಗಂಡನಿಗೆ ಮೊಸರಲ್ಲು ಕಲ್ಲು ಅಂತಾರಲ್ಲ ಆ ರೀತಿ ಇಬ್ರಾಹಿಂ ಆರೋಪ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ. ಪಕ್ಷ ಬಿಡ್ತಾ ಇರೋದ್ರಿಂದ ಈ ರೀತಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೇಳಿದ್ದಾರೆ. 

"ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಎಲ್ಲವನ್ನು ಕೊಟ್ಟಿದೆ, ಆದ್ರೆ ಮನುಷ್ಯನಿಗೆ ಆಸೆ ಇರಬೇಕು ದುರಾಸೆ ಇರಬಾರದು. ಹಾಲಿ ಶಾಸಕ ಸಂಗಮೇಶ್ ಟಿಕೆಟ್ ತಪ್ಪಿಸಿ ಭದ್ರಾವತಿಯಲ್ಲಿ ಇಬ್ರಾಹಿಂಗೆ ಟಿಕೆಟ್ ಕೊಟ್ಟಿದ್ದೇವು. ಅಲ್ಲಿಯು ಇಬ್ರಾಹಿಂ ಸೋತಿದ್ದಾರೆ. ಅದಾದ‌ ಮೇಲೆ ಎಂಎಲ್‌ಸಿ ಮಾಡಿದ್ವಿ. ಎಂಎಲ್‌ಸಿ ಯನ್ನು ರಿನಿವಲ್ ಮಾಡಿದ್ವಿ, ಆದ್ರೂ ಕೂಡ ಪಕ್ಷ ಬಿಟ್ಟೋಗಿದ್ದಾನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

 "ನಾವು ಪಕ್ಷ ಬಿಡಬೇಡ ಅಂತ ಪೋನ್ ಮಾಡಿ ಹೇಳಿದ್ವಿ.ಆದ್ರೆ ಲೀಡರ್ ಆಫ್ ಅಪೋಸಿಷನ್ ಸಿಗಲಿಲ್ಲ ಅಂತ ಪಕ್ಷ ಬಿಟ್ಟಿದ್ದಾರೆ, ರಾಜಕಾರಣದಲ್ಲಿ ಆಸೆಗಳಿರಬೇಕು ಆದ್ರೆ ದುರಾಸೆ ಇರಬಾರದು" ಸಿದ್ದರಾಮಯ್ಯ ಹೇಳಿದ್ದಾರೆ.

ಇದನ್ನೂ ಓದಿ:ಇಬ್ರಾಹಿಂ ನಂತರ ಸಿದ್ದು ಕಾಂಗ್ರೆಸ್‌ ಬಿಟ್ಟರೂ ಆಶ್ಚರ್ಯವಿಲ್ಲ: ಸಿ.ಟಿ.ರವಿ

ಪಕ್ಷಕ್ಕೆ ಏನೂ ತೊಂದರೆ ಆಗಲ್ಲ:  ಇನ್ನು ಇದೇ ವಿಚಾರವಾಗಿ ಕಲುಬುರುಗಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ "ಕಾಂಗ್ರೆಸ್‌ ಪಕ್ಷಕ್ಕೆ ಅನೇಕರು ಸೇರುತ್ತಾರೆ, ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಇದರಿಂದ ಪಕ್ಷಕ್ಕೆ ಏನೂ ತೊಂದರೆ ಆಗಲ್ಲ. ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟು ಹೋದರೂ ಕೂಡ ಏನೂ ತೊಂದರೆ ಇಲ್ಲ" ಎಂದು ಹೇಳಿದ್ದರು. 

ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ್ದ ಅವರು, ಕಾಂಗ್ರೆಸ್‌ ಪಕ್ಷಕ್ಕೆ ಅನೇಕರು ಸೇರುತ್ತಾರೆ, ಅನೇಕರು ಪಕ್ಷ ಬಿಟ್ಟು ಹೋಗುತ್ತಾರೆ. ಇದರಿಂದ ಪಕ್ಷಕ್ಕೆ ಏನೂ ತೊಂದರೆ ಆಗಲ್ಲ. ಸಿ.ಎಂ.ಇಬ್ರಾಹಿಂ ಪಕ್ಷ ಬಿಟ್ಟು ಹೋದರೂ ಕೂಡ ಯಾವುದೇ ತೊಂದರೆ ಇಲ್ಲ, ಇಬ್ರಾಹಿಂ ನನಗೆ ಮೊದಲು ಸ್ನೇಹಿತ, ಮುಂದೆಯೂ ಸ್ನೇಹಿತನಾಗಿ ಇರುತ್ತಾರೆ. ಆದರೆ ಅವರ ರಾಜೀನಾಮೆಯಿಂದ ಪಕ್ಷಕ್ಕೆ ತೊಂದರೆ ಆಗಲ್ಲ. ಯಾರ ರಾಜೀನಾಮೆಯಿಂದಲೂ ಪಕ್ಷಕ್ಕೆ ಯಾವುದೇ ಪರಿಣಾಮ ಆಗಲ್ಲ. ನಾನು ಪಕ್ಷ ಬಿಟ್ಟರೂ ಪಕ್ಷಕ್ಕೆ ನಷ್ಟಆಗೋದಿಲ್ಲವೆಂದು ಹೇಳಿದ್ದರು. 

ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರ್ಪಡೆ:  ಇನ್ನು ಪಂಚರಾಜ್ಯ ಚುನಾವಣೆ ನಂತರ ಕಾಂಗ್ರೆಸ್ ಜೆ.ಡಿ.ಎಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ತೊರೆದು ಯಾರು ಬಿಜೆಪಿ ಸೇರಲ್ಲ ಎಂದು ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಪಕ್ಷದಿಂದ ಕಾಂಗ್ರೆಸ್‌ಗೆ ಎಷ್ಟು ಜನ ಬರುತ್ತಾರೆ ಕಾದು ನೋಡಿ ಎಂದು ಹೇಳಿದ್ದಾರೆ. ಈ ಮೂಲಕ ಬಿಜೆಪಿಯ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. 

ಇದನ್ನೂ ಓದಿ6 ಬಾರಿ ಗೆದ್ದವರನ್ನು ಅಧಿಕಾರದಿಂದ ಇಳಿಸಲು ಆಗುತ್ತಾ? ಹೀಗೆ ದೇವೇಗೌಡ್ರು ಹೇಳಿದ್ಯಾರಿಗೆ?

ಇನ್ನು ಜಿ.ಟಿ.ದೇವೆಗೌಡರು ಕಾಂಗ್ರೆಸ್ ಸೇರುವ ವಿಚಾರದ ಬಗ್ಗೆ ಮಾತನಾಡಿದ ಸಿದ್ದು ಜಿ.ಟಿ.ದೇವೆಗೌಡರು ನನ್ನ ಜೊತೆ ಮಾತಮಾಡಿದ್ದಾರೆ. ಅವರು ಮತ್ತು ಅವರ ಮಗನಿಗೆ ಟಿಕೆಟ್ ಕೇಳಿದ್ದಾರೆ, ನಾನು ಇನ್ನು ಈ ಬಗ್ಗೆ ಹೈಕಮಾಂಡ ಜೊತೆ ಮಾತನಾಡಿಲ್ಲ‌‌"ಎಂದು ಹೇಳಿದ್ದಾರೆ

ಬಿಜೆಪಿ ಜೆ.ಡಿ.ಎಸ್ ಹೊಂದಾಣಿಕೆ ರಾಜಕಾರಣ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ " ಬಿಜೆಪಿ ಜೆ.ಡಿಎಸ್ ಜೊತೆ ಅಲೈಯನ್ಸ್ ಆದ್ರು ಮಾಡ್ಕೊಳ್ಳಿ. ಅಂಡ್ರಸ್ಟ್ಯಾಂಡಿಗಾದ್ರು ಮಾಡ್ಕೊಳ್ಳಿ. ಮ್ಯಾಚ್ ಫಿಕ್ಸಿಂಗ್ ಆದ್ರು ಮಾಡ್ಕೊಳ್ಳಿ. ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.ಮುಂದೆ‌‌ ಕಾಂಗ್ರೆಸ್ ಅಧಿಕಾರಕ್ಕೆ ತರುವುದೆ ನಮ್ಮ ಗುರಿ.ನಾನು‌ ಕಾಂಗ್ರೆಸ್ ನಲ್ಲಿ ನೆಮ್ಮದಿಯಾಗಿದ್ದೇನೆ" ಎಂದು ಹೇಳಿದ್ದಾರೆ