Asianet Suvarna News Asianet Suvarna News

ದೇವೇಗೌಡರ ಕಣ್ಣೀರು ಅವರ ಮನೆಗೇ ಹೊರತು ರಾಜ್ಯಕ್ಕಲ್ಲ: ಡಿಕೆ ಶಿವಕುಮಾರ ಟೀಕೆ

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಣ್ಣೀರು ಅವರ ಮನೆಗೇ ಹೊರತು ರಾಜ್ಯಕ್ಕಲ್ಲ. ಈಗ ಅವರ ಮಗ ಕುಮಾರಣ್ಣ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿದವರ ಜತೆಯೇ ದೋಸ್ತಿ ಮಾಡಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

Mandya congress guarantee convention DK Shivakumar reaction about HD Devegowda tears rav
Author
First Published Mar 11, 2024, 5:18 AM IST

ಮಂಡ್ಯ (ಮಾ.11) : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಕಣ್ಣೀರು ಅವರ ಮನೆಗೇ ಹೊರತು ರಾಜ್ಯಕ್ಕಲ್ಲ. ಈಗ ಅವರ ಮಗ ಕುಮಾರಣ್ಣ ಬಿಜೆಪಿ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಅಧಿಕಾರದಿಂದ ಕೆಳಗಿಳಿಸಿದವರ ಜತೆಯೇ ದೋಸ್ತಿ ಮಾಡಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.

ಭಾನುವಾರ ನಗರದ ಮಂಡ್ಯ ವಿಶ್ವವಿದ್ಯಾಲಯ ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ, ಜಿಪಂ ಏರ್ಪಡಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತನಾಡಿದರು.

ಯಾವುದೇ ಕಾರಣಕ್ಕೂ ತಮಿಳನಾಡಿಗೆ ನೀರು ಬಿಡೊಲ್ಲ: ಡಿಕೆ ಶಿವಕುಮಾರ

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಜೆಡಿಎಸ್ ಮತ್ತು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ. ಕಾಂಗ್ರೆಸ್‌ ಸರ್ಕಾರದ ಯೋಜನೆಗಳನ್ನು ಕಂಡು ಕಮಲ ಮುದುಡಿ ಕೂತಿದ್ದರೆ, ಕುಮಾರಣ್ಣ ತೆನೆ ಬಿಸಾಡಿ ಕಮಲವನ್ನು ತಬ್ಬಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಒಬ್ಬರನ್ನೊಬ್ಬರು ತಬ್ಬಿ ಆಡುತ್ತಿದ್ದಾರೆ. ಕೇಂದ್ರದ ಮೇಲೆ ಒತ್ತಡ ತಂದು ಅವರಿಗೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಬಹುದಿತ್ತು. ನಮ್ಮ ರೈತರ ಬದುಕಿನ ಉಳಿವು ಮತ್ತು ತಮಿಳುನಾಡಿನವರ ನೀರಿನ ಬೇಡಿಕೆ ಪೂರೈಸಲು ಮೇಕೆದಾಟು ಯೋಜನೆ ಸಹಕಾರಿ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ರೈತರ ಬೆಳೆಗಳನ್ನು ರಕ್ಷಣೆ ಮಾಡಿದ್ದೇವೆ. ನೆಂಟಸ್ತನದ ರಾಜಕಾರಣ ಮಾಡುವ ಜೆಡಿಎಸ್-ಬಿಜೆಪಿ ಏನು ಮಾಡಿದೆ? ದೇವೇಗೌಡರು ಇಂದು ಅಯ್ಯಯ್ಯೋ ಎಂದು ಕಣ್ಣೀರಿಡುತ್ತಿದ್ದಾರೆ. ನಿಮ್ಮ ಕಣ್ಣೀರು ನಿಮ್ಮ ಮನೆಗೇ ಹೊರತು ಅದು ಜನರನ್ನು ತಲುಪುವುದಿಲ್ಲ ಎಂದರು.

'ಸುಮಲತಾ ಗೆದ್ದಿದ್ದು ಕಾಂಗ್ರೆಸ್‌ನಿಂದ'ಸಿಎಂ ಹೇಳಿಕೆ; 'ಕೊನೆಗೂ ಸತ್ಯ ಕಕ್ಕಿದ್ದೀರಿ ಸುಳ್ಳುರಾಮಯ್ಯ': ಎಚ್‌ಡಿಕೆ ಕಿಡಿ

ದೇವರು ವರವನ್ನೂ ಕೊಡುವುದಿಲ್ಲ, ಶಾಪವನ್ನೂ ಕೊಡುವುದಿಲ್ಲ. ಅವಕಾಶ ಮಾತ್ರ ಕೊಡುತ್ತಾನೆ. ಹಾಗೆಯೇ ಚುನಾವಣೆಯಲ್ಲಿ ಜನ ನಮಗೆ ಕೊಟ್ಟ ಅವಕಾಶದಿಂದ ದೇಶಕ್ಕೆ ಮಾದರಿಯಾಗುವಂತಹ ಆಡಳಿತ ನೀಡುತ್ತಿದ್ದೇವೆ. ಧರ್ಮರಾಯನ ಧರ್ಮ, ಕರ್ಣನ ದಾನ, ಅರ್ಜುನನ ಗುರಿ. ಕೃಷ್ಣನ ತಂತ್ರ, ವಿಧುರನ ನೀತಿ ಇದ್ದರೆ ಯಶಸ್ಸು ಸದಾ ನಮ್ಮೊಂದಿಗೆ ಇರುತ್ತದೆ ಎಂದು ನುಡಿದರು.

Follow Us:
Download App:
  • android
  • ios