ಖರ್ಗೆಗೆ 80 ವರ್ಷವಾಗಿದೆ, ಯಾವಾಗ ಬೇಕಾದ್ರೂ ಮೇಲೆ ಹೋಗಬಹುದು: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 80 ವರ್ಷ ವಯಸ್ಸಾಗಿದೆ. ದೇವರು ಯಾವಾಗ ಬೇಕಾದರೂ ಮೇಲೆ ಕರೆದುಕೊಳ್ಳಬಹುದು ಎಂದು ಹೇಳಿರುವ ರಾಜಸ್ಥಾನ ಬಿಜೆಪಿ ಶಾಸಕನ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು (ಮೇ 3): ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ ಎಂದು ಹೇಳಿಕೆ ನೀಡಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ 80 ವರ್ಷ ವಯಸ್ಸಾಗಿದೆ. ದೇವರು ಯಾವಾಗ ಬೇಕಾದರೂ ಮೇಲೆ ಕರೆದುಕೊಳ್ಳಬಹುದು ಎಂದು ರಾಜಸ್ಥಾನ ಶಾಸಕ ಹೇಳಿರುವ ವಿಡಿಯೋವನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನ ಬಿಜೆಪಿ ಶಾಸಕ ಮದನ್ ದಿಲಾವರ್ ಮಾತನಾಡಿರುವ ಕುರಿತ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ 80 ವರ್ಷಾವಾಗಿದೆ. ಯಾವಗ ಬೇಕಾದರು ದೇವರು ಮೇಲೆ ಕಳೆದುಕೊಳ್ಳಬಹುದು ಎಂದು ಮಾತನಾಡಿದ್ದಾರೆ. ಖರ್ಗೆ ಬಗ್ಗೆ ಇಷ್ಟು ಕೆಳಹಂತದಲ್ಲಿ ಮಾತಮಾಡಿದ್ದಾರೆ. ಇದಕ್ಕೆ ಮೋದಿಯವರು ಏನ್ ಹೇಳ್ತಾರೆ? ಇದು ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಉದಾಹರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ಹೆಲಿಕಾಪ್ಟರ್ ಟ್ರಯಲ್ ವೇಳೆ ಅನಾಹುತ: ಗಾಯಗೊಂಡು ಆಸ್ಪತ್ರೆ ಸೇರಿದ ಡಿವೈಎಸ್‌ಪಿ
ದೇಶದ ಪ್ರಮುಖ ದಲಿತ ನಾಯಕ ಖರ್ಗೆ: ಮಲ್ಲಿಕಾರ್ಜುನ ಖರ್ಗೆ ದೇಶದ ಪ್ರಮುಖ ದಲಿತ ನಾಯಕ. ಖರ್ಗೆಯವರಿಗೆ ಕರ್ನಾಟಕದಲ್ಲಿ ಸೋಲಿಲ್ಲದ ಸರದಾರ ಎಂದು ಹೇಳ್ತಾರೆ. ನಿಮಗೆ ಯಾವುದೇ ನರೇಟಿವ್ ಇಲ್ಲ. ಬಿಜೆಪಿ 40 ಸೀಟಿಗೆ ಸೀಮಿತವಾಗುತ್ತದೆ ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆಯವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಿಮ್ಮ ಶಾಸಕರು ಖರ್ಗೆಯವರ ಸಾವು ಬಯಸುತ್ತಿದ್ದಾರೆ. ಮೋದಿಯವರೇ ಯಾಕೆ ಬಿಜೆಪಿಯ ಜನರಲ್ ಸೆಕ್ರೆಟರಿ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ? ಪ್ರಧಾನಿ ನರೇಂದ್ರ ಮೋದಿ ಏಕೆ ಮೌನ ಆಗಿದ್ದಾರೆ. ಖರ್ಗೆಯ ಸಾವು ಬಯಸಿದ್ದರೂ ಏಕೆ ಮೌನ..? ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯನನ್ನು ಕೊಲೆ ಮಾಡಲು ಹೇಳಿದ್ದ ಅಶ್ವತ್ಥನಾರಾಯಣ: ಈ ಹಿಂದೆ ಸಚಿವ ಅಶ್ವಥ್ ನಾರಾಯಣ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೊಲೆ ಮಾಡಲು ಕರೆ ನೀಡಿದ್ದರು. ಇದೀಗ ದಲಿತ ನಾಯಕನ ಸಾವು ಬಯಸುತ್ತಿದ್ದೀರಿ.. ಪ್ರಧಾನಿಯವರೇ ನೀವು ಕೇವಲ ಅಳುಮುಂಜಿ ಮಗು (cry baby) ಆಗ್ತಿದ್ದೀರಿ. ಕನ್ನಡ ಸ್ವಾಭಿಮಾನಕ್ಕೆ ಕನ್ನಡ ಭಾಷೆಗೆ ಬಿಜೆಪಿ ಹಾನಿ ಎಸಗುತ್ತಿದೆ. ನಂದಿನಿಯನ್ನು ಗುಜರಾತ್ ನ ಅಮುಲ್ ಜೊತೆಗೆ ಮರ್ಜ್ ಮಾಡಲಿ ಹೊರಟಿದ್ದಾರೆ. ವಿಜಯ ಬ್ಯಾಂಕ್ ಅನ್ನು ಗುಜರಾತ್ ನ ಬ್ಯಾಂಕ್ ಆಫ್ ಬರೋಡಾ ಜೊತೆಗೆ ಮರ್ಜ್ ಮಾಡಿದ್ದಾರೆ. ಬಿಜೆಪಿ ಶಿವಸೇನೆ ಸರ್ಕಾರ ಕರ್ನಾಟಕದ ಗಡಿಯೊಳಗೆ 865 ಗ್ರಾಮಗಳಿಗೆ ಆರೋಗ್ಯ ವಿಮೆ ನೀಡಿದೆ. ಕರ್ನಾಟಕವನ್ನು ಒಡೆಯಲು ಬಿಜೆಪಿ ಮುಂದಾಗಿದೆ ಎಂದು ಆರೋಪ ಮಾಡಿದರು.
ಕರ್ನಾಟಕವನ್ನು ಮೋದಿಗೆ ಒಪ್ಪಿಸಬೇಕಂತೆ: ಮಹದಾಯಿ ನೀರಿನ ವಿಚಾರದಲ್ಲಿ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಕರ್ನಾಟಕವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಹ್ಯಾಂಡ್ ಓವರ್ ಮಾಡಿ ಅಂತ ಅಮಿತ್ ಶಾ ಹೇಳ್ತಾರೆ. ಯಾಕೆ ಕರ್ನಾಟಕದಲ್ಲಿ ಯಾರೂ ಆಡಳಿತ ಮಾಡುವಂತಹ ಸಶಕ್ತ ನಾಯಕರಿಲ್ವಾ? ಇದು ಕರ್ನಾಟಕದ ಹೆಮ್ಮೆಗೆ ನೀಡುತ್ತಿರುವ ಹೊಡೆತವಾಗಿದೆ.
ಭಜರಂಗದಳ ನಿಷೇಧಕ್ಕೆ ಸುರ್ಜೆವಾಲಾ ಹಠ, ಕಾಂಗ್ರೆಸ್ ಗೆ ಪ್ರಾಣಸಂಕಟ!
ಬಜರಂಗದಳಕ್ಕೆ ಹನುಮಾನ್ ಹೋಲಿಕೆ ಬೇಡ: ಭಜರಂಗದಳ ಹಾಗೂ ಹನುಮಾನ್ ಹೋಲಿಕೆ ಮಾಡುವುದೇ ಹನುಮಾನ್ ಭಕ್ತರಿಗೆ ಮಾಡುವ ಅವಮಾನ. ಹನುಮಾನ್ ಭಗವಂತ ಕಂಪ್ಯಾಶನ್. ಹನುಮಾನ್ ಹೆಸರಲ್ಲಿ ಸಂಘಟನೆಯವರು ಮಾಡುವ ಕ್ರೌರ್ಯ ದೇವರಿಗೆ ಮಾಡುವ ಅವಮಾನವಾಗುತ್ತದೆ. ಹನುಮಾನ್ ಅತ್ಯಂತ ಹಳೆಯ ನೂರಾರು ದೇವಸ್ಥಾನಗಳನ್ನು ಮೋದಿ ಸರ್ಕಾರ ಒಡೆದು ಹಾಕಿದೆ. 200 ವರ್ಷಗಳ ಹಳೆಯ ನಂಜನಗೂಡು ಹನುಮಾನ್ ದೇವಸ್ಥಾನವನ್ನು ಒಡೆದು ಹಾಕಿದ್ದು ಯಾರು? ಇದೇ ಬಿಜೆಪಿ ಸರ್ಕಾರವೇ ಅಲ್ಲವೇ ದೇವಸ್ಥಾನ ಒಡೆದು ಹಾಕಿದ್ದು. ಇದಕ್ಕೆ ಪ್ರಧಾನಿ ಮೋದಿ ಉತ್ತರ ನೀಡಲಿ ಎಂದು ಹೇಳಿದರು.