ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಮೇ1ರಂದು  ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ  ಕಾರ್ಮಿಕ ದಿನಾಚರಣೆಯನ್ನು ಆಚರಣೆ ಅಯೋಜಿಸಲಾಗಿತ್ತು.

ವರದಿ: ಟಿ.ಮಂಜುನಾಥ, ಹೆಬ್ಬಗೋಡಿ

ಆನೇಕಲ್ (ಮೇ.01): ವಿಶ್ವ ಕಾರ್ಮಿಕ ದಿನಾಚರಣೆಯ (International Workers Day 2022) ಅಂಗವಾಗಿ ಮೇ1ರಂದು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಪ್ರದೇಶ ಕಾಂಗ್ರೆಸ್ (Congress) ಸಮಿತಿ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಣೆ ಅಯೋಜಿಸಲಾಗಿತ್ತು. ಆನೇಕಲ್ ವಿಧಾನಸಭಾ ಕ್ಷೇತ್ರದ ಶಾಸಕ.ಬಿ‌.ಶಿವಣ್ಣ ನೇತೃತ್ವದಲ್ಲಿ ಅಯೋಜನೆಗೊಂಡಿತ್ತು. ವಂದೇ ಮಾತರಂ ಗೀತೆಯನ್ನು ಹಾಡುವುದರ ಮೂಲಕ ಹಾಗು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತಾನಾಡಿದ ಮಾಜಿ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆನವರು ಕಾರ್ಮಿಕ ಕಾಯ್ದೆಯನ್ನ ಬದಲಿಸುವ ಮೂಲಕ ಕಾರ್ಮಿಕರ ಶಕ್ತಿ ಕುಗ್ಗಿಸಿದೆಯೆಂದು ಟೀಕೆ ಮಾಡಿದರು. ಕಾರ್ಮಿಕರ ರಕ್ಷಣೆಗಿದ್ದ 29 ಕಾನೂನುಗಳನ್ನ 4ಕ್ಕೆ ತಂದಿರಿಸಿದೆಯೆಂದು ಖರ್ಗೆ ಕಿಡಿಕಾರಿದರು. ನಮ್ಮನ್ನು ರಕ್ಷಣೆ ಮಾಡುವ ಧರ್ಮ ಗ್ರಂಥ ಸಂವಿಧಾನ ಇದೆ. ಅದರೆ ಅದಕ್ಕೆ ಧಕ್ಕೆ ಬಂದಾಗ ಯಾವುದೇ ಪಾರ್ಟಿಗಳೂ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ದೇಶದ ಯುವಕರನ್ನು ಹಾಳು ಮಾಡುವವರು ಇದ್ದರೇ ಅದು ಮೋದಿ (PM Narendra Modi) ಸರ್ಕಾರ. 90 ಕೋಟಿ ಜರ ಪೈಕಿ 40 ಕೋಟಿ ಜನಕ್ಕೆ ಉದ್ಯೋಗ ಇಲ್ಲ. ಮನೇಲಿ ಒಬ್ಬರಿಗೆ ಕೆಲಸವಿದ್ದರೆ ಇನ್ನು ನಾಲ್ಕು ಜನಕ್ಕೆ ಕೆಲಸ ಇಲ್ಲವೆಂದು ಕಿಡಿಕಾರಿದರು. 

ಮೊದಲು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಸುಂಕ ಇಳಿಸಲಿ: ಡಿಕೆಶಿ

ಇದೇ ಸಂದರ್ಭದಲ್ಲಿ ಎರಡು ಕೋಟಿ ಉದ್ಯೋಗ ಕೊಡ್ತೀನಿ ಅಂತ ಹೇಳಿದ್ದರೂ ಎಂಟು ವರ್ಷದಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಯಾಗಿಬೇಕಿತ್ತು ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಬೊಮ್ಮಸಂದ್ರವೊಂದು ಕೈಗಾರಿಕಾ ಪ್ರದೇಶವಾಗಿದ್ದು ಕಾಂಗ್ರೆಸ್‌ನ ಕಾಂಗ್ರೆಸ್ ನಡೆ ಕಾರ್ಮಿಕರ ಕಡೇ ಎಂಬ ಘೋಷ ವಾಕ್ಯದಲ್ಲಿ ಅಯೋಜನೆಗೊಂಡಿತ್ತು. ಕೆಪಿಸಿಸಿ ಅಧ್ಯಕ್ಷ.ಡಿ.ಕೆ.ಶಿವಕುಮಾರ್ ಮಾತಾನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಟೀಕಾ ಪ್ರಹಾರ ನಡೆಸಿದರು. ಕೊರೊನಾದಿಂದ ಹಿಡಿದು ಇಲ್ಲಿವರೆಗಿನ‌ ಎಲ್ಲಾ ವೈಫಲ್ಯಗಳನ್ನ ಎಳೆ ಎಳೆಯಾಗಿ ವಿವರಿಸಿ ಜಾಡಿಸಿದರು. ಅಕ್ರಮಗಳನ್ನು ಮಾಧ್ಯಮದಲ್ಲಿ ಮುಚ್ಚಬೇಕು. ಜನರನ್ನು ದಾರಿತಪ್ಪಿಸಬೇಕು. ಜನರಿಗೆ ಭಯದ ವಾತಾವರಣ ನಿರ್ಮಾಣ ಮಾಡಬೇಕು. 

Congress Membership ಕರ್ನಾಟಕ ಕಾಂಗ್ರೆಸ್‌ಗೆ 78 ಲಕ್ಷ ಸದಸ್ಯರು, ಡಿಕೆಶಿ ಮೆಚ್ಚುಗೆ!

ಇದನ್ನೆಲ್ಲಾ ಬಿಜೆಪಿಯವರೇ ಸೃಷ್ಟಿ ಮಾಡುತ್ತಿದ್ದಾರೆ. ಭಯದ ವಾತಾವರಣದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೊದಲನೇ ಅಲೆ, ಎರಡನೇ ಅಲೆ ದೊಡ್ಡ ಕರಪ್‌ಶನ್ ಆಯಿತು. ಈಗ ನಾಲ್ಕನೇ ಅಲೆಗೆ ಹೊರಟಿದ್ದಾರೆಂದು ಕಿಡಿಕಾರಿದರು. ಪಿಡಬ್ಲ್ಯೂಡಿ ಹಗರಣ ಪೊಲೀಸ್ ಹಗರಣ ಮತ್ತು ಎಂಪ್ಲಾಯ್ಮೆಂಟ್ ಹಗರಣದ ಬಗ್ಗೆ ಮುಖ್ಯಮಂತ್ರಿಗಳು ಏಕೆ ಪ್ರಶ್ನೆ ಮಾಡುತ್ತಿಲ್ಲ ಅಂತ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಹರಿಹಾಯ್ದಿರು. ಕಾರ್ಮಿಕ ದಿನಾಚರಣೆಯನ್ನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ವಿರುದ್ದದ ಟೀಕೆಗೆ ಉತ್ತಮವಾಗಿ ಬಳಸಿಕೊಂಡರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಸ್ಥಳೀಯ ಶಾಸಕ.ಬಿ.ಶಿವಣ್ಣ, ಮಹಿಳಾ ಮೋರ್ಚಾ ಅಧ್ಯಕ್ಷ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.