ಮುಂಬೈ[ಜ.05]: ಬಹುದಿನಗಳ ಪ್ರಯಾಸದ ಬಳಿಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರು ತಮ್ಮ ಮಂತ್ರಿಮಂಡಲದ ಸಚಿವರಿಗೆ ಶನಿವಾರ ಖಾತೆ ಹಂಚಿದ್ದಾರೆ.

ಎನ್‌ಸಿಪಿ ಮುಖಂಡ ಹಾಗೂ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಮಹತ್ವದ ಹಣಕಾಸು ಖಾತೆ ಪಡೆದಿದ್ದಾರೆ. ಎನ್‌ಸಿಪಿಯ ಅನಿಲ್‌ ದೇಶಮುಖ್‌ಗೆ ಗೃಹ ಖಾತೆ ಲಭಿಸಿದೆ.

ಶಿವಸೇನೆಯ ಏಕಣಾಥ ಶಿಂಧೆ ಅವರಿಗೆ ನಗರಾಭಿವೃದ್ಧಿ, ಮುಖ್ಯಮಂತ್ರಿ ಪುತ್ರ ಆದಿತ್ಯ ಠಾಕ್ರೆಗೆ ಪರಿಸರ ಹಾಗೂ ಪ್ರವಾಸೋದ್ಯಮ ಖಾತೆ, ಕಾಂಗ್ರೆಸ್‌ನ ಬಾಳಾಸಾಹೇಬ್‌ ಥೋರಟ್‌ ಅವರುಗೆ ಕಂದಾಯ, ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್‌ ಅವರಿಗೆ ಲೋಕೋಪಯೋಗಿ ಖಾತೆ ಪ್ರಾಪ್ತಿಯಾಗಿದೆ.