ಮುಂಬೈ(ju.೨೭): ನಮ್ಮದು ಮೂರು ಗಾಲಿಯ ಸರ್ಕಾರವಾದರೂ ಸ್ಟೇರಿಂಗ್‌ ನನ್ನ ಬಳಿ ಇದೆ. ವಿರೋಧ ಪಕ್ಷಗಳಿಗೆ ತಾಕತ್ತಿದ್ದರೆ ನಮ್ಮ ಸರ್ಕಾರವನ್ನು ಉರುಳಿಸಲಿ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸವಾಲೆಸೆದಿದ್ದಾರೆ.

60ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶಿವಸೇನೆಯ ಮುಖವಾಣಿ ‘ಸಾಮ್ನಾ’ಗೆ ನೀಡಿರುವ ಸಂದರ್ಶನದಲ್ಲಿ ‘ನನ್ನ ಸರ್ಕಾರದ ಭವಿಷ್ಯ ವಿಪಕ್ಷಗಳ ಕೈಯಲ್ಲಿ ಇಲ್ಲ. ಸ್ಟೇರಿಂಗ್‌ ನನ್ನ ಬಳಿ ಇದೆ. ಮೂರು ಗಾಲಿಯ (ಆಟೋ ರಿಕ್ಷಾ) ವಾಹನ ಬಡವನ ವಾಹನವಾಗಿದೆ’ ಎಂದು ಹೇಳಿದ್ದಾರೆ.

ಆಯೋಧ್ಯೆಗೆ ತೆರಳಿ ರಾಮ ಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುತ್ತೇನೆ: ಸಿಎಂ ಉದ್ಧವ್ ಠಾಕ್ರೆ

ಸರ್ಕಾರ ಉರುಳಿಸುವ ಇಚ್ಛೆ ಅವರಿಗಿದ್ದರೆ ಈಗಲೇ ಉರುಳಿಸಲಿ, ಸೆಪ್ಟೆಂಬರ್‌-ಅಕ್ಟೋಬರ್‌ವರೆಗೆ ಏಕೆ ಕಾಯಬೇಕು ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದೇ ವೇಳೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಸಕಾರಾತ್ಮಕ ಚಿಂತನೆಯನ್ನು ಹೊಂದಿದ್ದು, ಆ ಪಕ್ಷಗಳ ಅನುಭವವನ್ನು ಸರ್ಕಾರ ಸದುಪಯೋಗಪಡಿಸಿಕೊಳ್ಳಲಿದೆ ಎಂದಿದ್ದಾರೆ.